ಹೊಸಂಗಡಿ(ಆ,09): ಸರಕಾರಿ ಪದವಿ ಪೂರ್ವ ಕಾಲೇಜು ಹೊಸಂಗಡಿ ಇಲ್ಲಿನ ಎನ್ಎಸ್ಎಸ್, ರೇಂಜರ್ಸ್ ಮತ್ತು ರೋವರ್ಸ್, ಚುನಾವಣಾ ಸಾಕ್ಷರತಾ ಸಮಿತಿ, ಭಾರತೀಯ ಸೇವಾದಳ, ಸಾಂಸ್ಕ್ರತಿಕ ಹಾಗೂ ಕ್ರೀಡಾ ಸಂಘ, ಇಕೋ ಕ್ಲಬ್, ರೆಡ್ ರಿಬ್ಬನ್ ಕ್ಲಬ್ ವಿಜ್ಞಾನ ಸಂಘ ಹಾಗೂ ಇತರ ಸಂಘಟನೆಗಳ ಉದ್ಘಾಟನೆ ಸಮಾರಂಭ ಇತ್ತೀಚೆಗೆ ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿರುವಂತ ಶ್ರೀಮತಿ ಶಾರದಗೊಲ್ಲ ಇವರು ವಹಿಸಿಕೊಂಡು ಗ್ರಾಮೀಣ ಪ್ರದೇಶದಲ್ಲಿ ಅತ್ಯಾಧುನಿಕ ಸೌಲಭ್ಯಗಳು ಹಾಗೂ ಉತ್ತಮ ಉಪನ್ಯಾಸಕರು ಹಾಗೂ ಇಷ್ಟು ಸಂಘಗಳಿದ್ದು ಇದರ ಲಾಭವನ್ನು ಮುಂದಿನ ದಿನಗಳಲ್ಲಿ ಹೆಚ್ವಿನವರು ಪಡೆದುಕೊಳ್ಳುವಂತಾಗಬೇಕು ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ದಾನಿಗಳು, ಪೋಷಕರು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾಗಿರುವಂತಹ ವಿಶ್ವನಾಥ ತುಂಬಿ ಕಲ್ಲಾಯ ಇವರು ನೆರವೇರಿಸಿ ಖಾಸಗಿ ಕಾಲೇಜು ಎನ್ನುವ ಪ್ರತಿಷ್ಠೆಯನ್ನು ಬಿಟ್ಟು ಸರಕಾರಿ ಕಾಲೇಜಿನಲ್ಲಿರುವ ಪ್ರತಿಭಾನ್ವಿತ ಉಪನ್ಯಾಸಕರ ಜ್ಞಾನದ ಸದುಪಯೋಗ ಮಾಡಿಕೊಳ್ಳಬೇಕು, ಕೈಲಾದಷ್ಟು ಧನ ಸಹಾಯ ನೀಡಿ ಸರಕಾರಿ ಕಾಲೇಜುಗಳನ್ನು ಉಳಿಸಲು ಎಲ್ಲರೂ ಶ್ರಮಿಸಬೇಕು ಎಂದರು.
ಕೆಪಿಸಿಯ ಎಜಿಎಂ ಆಗಿರುವಂತಹ ಶ್ರೀ ರವೀಂದ್ರ ಇವರು ಕಾಲೇಜಿನಲ್ಲಿ ಇರುವಂತಹ ಸೌಲಭ್ಯಗಳ ಕುರಿತು ಪ್ರಶಂಸೆಯ ಮಾತನಾಡಿ ಕಾಲೇಜಿಗೆ ಕೆಪಿಸಿ ಯಿಂದ ಕೊಡುವ ಎಲ್ಲಾ ಸೌಲಭ್ಯಗಳನ್ನು ತಲುಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು. ಇವರೊಂದಿಗೆ ಕಾಲೇಜು ಅಭಿವೃದ್ದಿ ಸಮಿತಿಯ ಕಾರ್ಯಧ್ಯಕ್ಷರಾಗಿರುವಂತಹ ಶ್ರೀ ಭಾಸ್ಕರ್ ಶೆಟ್ಟಿ ಇವರು ಯಾವ ಕಾಲೇಜಿನಲ್ಲಿಯೂ ಇರದಷ್ಟು ಸಂಘಗಳು ಇಲ್ಲಿ ಸಕ್ರೀಯವಾಗಿದ್ದು ಅದರ ಲಾಭ ಪಡೆದುಕೊಂಡು ಫಲಪ್ರದರಾಗಿ ಹೊರಗೆ ಬನ್ನಿ ಎಂದರು.
ಗ್ರಾಮ ಪಂಚಾಯತ್ ಸದಸ್ಯರಾದ ಅವಿನಾಶ್ ಶೆಟ್ಟಿ. ರವೀಂದ್ರ ಶೆಟ್ಟಿ. ಉಪಸ್ಥಿತರಿದ್ದು ಶುಭಹಾರೈಕೆ ಮಾಡಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿರುವಂತಹ ಶ್ರೀ ಉದಯ ನಾಯಕ್ ಕಾಲೇಜಿನ ಅಭಿವೃದ್ಧಿಗೆ ಅಗತ್ಯವಿರುವ ಇನ್ನಿತರ ಸೌಲಭ್ಯಗಳನ್ನು ಒದಗಿಸಲು ಹಳೆ ವಿದ್ಯಾರ್ಥಿಗಳ ಸಹಾಯಾಪೇಕ್ಷೆಯಲ್ಲಿದ್ದೇವೆ ಎಂದರು.
ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಗಳಾದಂತಹ ಶ್ರೀ ಚಂದ್ರಜೋಗಿ ಇವರು ಈ ಕಾಲೇಜಿನಲ್ಲಿ ಓದುವ ಪ್ರತಿ ಮಗು ಹೊರಬರುವಾಗ ಉತ್ತಮ ಮೌಲ್ಯ ಹಾಗೂ ನಿರ್ಧಿಷ್ಟ ಗುರಿಯನ್ನು ಇಟ್ಟುಕೊಂಡು ಹೊರಬರುತ್ತಿರುವುದು ಪ್ರಶಂಸನೀಯ ಎಂದರು. ಕಾಲೇಜು ಅಭಿವೃದ್ಧಿ ಸಮಿತಿಯು ಸದಸ್ಯರುಗಳಾದಂತಹ ಶ್ರೀಕರ್ ನಾಯಕ್ ಹಳ್ಳಿಹೊಳೆ ಇವರು ಕಾಲೇಜಿನ ಯಾವುದೇ ಕಾರ್ಯಕ್ರಮವಾಗಲಿ ನಾವೂ ಕೂಡ ಸಕ್ರೀಯ ವಾಗಿ ಕೈ ಜೋಡಿಸುವುದೇ ಒಂದು ಸಂತೋಷ ಎಂದರು. ಶ್ರೀಮತಿ ಮಾಲತಿ ಇವರು ಉತ್ತಮ ಫಲಿತಾಂಶಗಳು ಮೂಲಕ ಇವರ ಎಲ್ಲಾ ಸಂಘದ ಉದ್ಧೇಶಗಳಿಗೆ ನ್ಯಾಯ ಒದಗಿಸಿ ಎಂದರು.
ಕಾಲೇಜಿನ ಪ್ರಾಂಶುಪಾಲರಾಗಿರುವಂತ ಶ್ರೀ ಗೋಪಾಲ್ ಭಟ್ ಕಾಲೇಜು ಸಾಗಿ ಬಂದ ದಾರಿ ಹಾಗೂ ತಲುಪಬೇಕಾದ ಗುರಿಯ ಬಗ್ಗೆ ಪ್ರಾಸ್ತಾವಿಕದದಲ್ಲಿ ನುಡಿದರು. ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕ ಶ್ರೀ ಗುರುಪ್ರಸಾದ್ ಎಲ್ಲರಿಗೂ ಶುಭ ಹಾರೈಸಿದರು.ಸಂಪನ್ಮೂಲ ವ್ಯಕ್ತಿ ಶ್ರೀ ಪ್ರವೀಣ್ ಕುಮಾರ್ ಶೆಟ್ಟಿ ಶಾನ್ಕಟ್ಟು ವಿದ್ಯಾರ್ಥಿಗಳಿಗೆ ಜೀವನ ಕೌಶಲ್ಯಗಳು ಎನ್ನುವ ವಿಚಾರದ ಬಗ್ಗೆ ಪರಿಣಾಮಕಾರಿ ಸಂವಹನ ನಡೆಸಿ ಮಾಹಿತಿ ನೀಡಿದರು.
ಉಪನ್ಯಾಸಕರಾದ ಕು| ರಾಜೇಶ್ವರಿ ಸ್ವಾಗತಿಸಿ,ಉಪನ್ಯಾಸಕರಾದ ಶ್ರೀ ಎಜಾಸ್ ಧನ್ಯವಾದಗೈದರು. ರಣಜಿತ್ ಕುಮಾರ್ ಶೆಟ್ಟಿ ನಿರೂಪಿಸಿದರು.