ಕೋಟೇಶ್ವರ( ಆ,25): ರೋಟರಿ ಸಂಸ್ಥೆಗೆ ಸಮಾಜದ ವಿವಿಧ ಸ್ತರಗಳ ವಿವಿಧ ವೃತ್ತಿಗಳ ಸಮರ್ಥವಾದ ಸದಸ್ಯರನ್ನು ಸೇರಿಸುವುದರ ಜೊತೆಗೆ ಅವರು ರೋಟರಿಯಲ್ಲಿಯೇ ಉಳಿಯುವಂತೆ ಪ್ರೋತ್ಸಾಹಿಸಿದಾಗ ರೋಟರಿ ಪಬ್ಲಿಕ್ ಇಮೇಜ್ ನಿಜವಾದ ಅರ್ಥದಲ್ಲಿ ಬೆಳೆಯುತ್ತದೆ ಎಂದು ರೋಟರಿ ಜಿಲ್ಲೆ 31 82ರ ಸದಸ್ಯತ್ವ ಅಭಿವೃದ್ಧಿಯ ಜಿಲ್ಲಾ ಚೇರ್ಮೆನ್ ರೋ ಅಶೋಕ್ ಕುಮಾರ್ ಶೆಟ್ಟಿ ಹೇಳಿದರು.
ಅವರು ವಲಯ ಎರಡರ ಸದಸ್ಯತ್ವ ಅಭಿವೃದ್ಧಿ ಮತ್ತು ಪಬ್ಲಿಕ್ ಇಮೇಜ್ ವಿಚಾರ ಸಂಕಿರಣ “ಅಭಿವರ್ಧನೆ 2024” ವಿಚಾರ ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ವಲಯ ಮಟ್ಟದ ಸಂಕಿರಣವನ್ನು ವಲಯ ಎರಡರ ಅಸಿಸ್ಟೆಂಟ್ ಗವರ್ನರ್, ಮಮತಾ ಆರ್ ಶೆಟ್ಟಿ ಉದ್ಘಾಟಿಸಿದರು. . ಸಭೆಯ ಅಧ್ಯಕ್ಷತೆಯನ್ನು ರೋ ಸತೀಶ್ ಎಂ ನಾಯಕ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರೋ ಸುರೇಶ್ ಬೇಳೂರು ವಲಯ ಟ್ರೈನರ್, ವಲಯ ಸೇನಾನಿಗಳಾದ ರೋ ನಿತ್ಯಾನಂದ ನಾಯರಿ ರೋ ಸತೀಶ್ ಶೆಟ್ಟಿ ರೋ ಗಣೇಶ್ ಹೊಳ್ಳ, ವಲಯ ಸಂಚಾರಕರಾದ ರೋ ಗಣೇಶ್ ಆಚಾರ್ ರೋ ಶ್ರೀಧರಾಚಾರ್ಯ ತೆಕ್ಕಟ್ಟೆ, ಕ್ಲಬ್ ಸಂಚಾರಕರಾದ ರೋ ಆನಂದಾಚಾರ್, ಪಬ್ಲಿಕ್ ಇಮೇಜ್ ಸಂಚಾಲ ರಕರಾದ ಡಾಕ್ಟರ್ ಸುಧಾಕರ್ ನಂಬಿಯಾರ್ . ಉಪಸ್ಥಿತರಿದ್ದರು. ರೋ ಕೃಷ್ಣಮೂರ್ತಿ ಪಿಕೆ ಕಾರ್ಯಕ್ರಮ ನಿರೂಪಿಸಿ ಕಾರ್ಯದರ್ಶಿ ರೋ ಸುಭಾಷ್ ಚಂದ್ರ ಶೆಟ್ಟಿ ವಂದಿಸಿದರು.