ಶ್ರೀ ಗುರುಭ್ಯೋ ನಮಃ
ಜ್ಞಾನ ಸಮ್ಮುದ್ರವ ಕಲಕಿ
ಸ್ಮೃತಿಪಟಲದಲ್ಲಿ ತಲಪಿ
ವಿದ್ಯೆ – ಬುದ್ಧಿ ವಿನಯ-ವಿಧೇಯ ನೀಡುವ ಶ್ರೇಷ್ಠನೆ
ಶ್ರೀ ಗುರುಭ್ಯೋ ನಮಃ
ಶ್ರೀ ಗುರುಭ್ಯೋ ನಮಃ
ಶ್ರೀ ಗುರುಭ್ಯೋ ನಮಃ
ಶ್ರೀ ಗುರುಭ್ಯೋ ನಮಃ.
ಶಾರದೆಯ ನಿವಾಸ ನಿನ್ನ ಜಿಹ್ವವು
ಮಮತೆ ತುಂಬಿರುವ ಎದೆ ಭಾವವು
ಪ್ರೀತಿ ನೀತಿಯೇ ನಿನ್ನ ಕಣ್ಗಳು
ಕ್ಷಮೆ ತಾಳ್ಮೆಯೇ ನಿನ್ನ ಭುಜಗಳು
ಶಿಸ್ತು ಗತ್ತೆ ನಿನ್ನ ಕಾಲುಗಳು
ಧೈರ್ಯ ಸ್ಥೈರ್ಯವೇ ನಿನ್ನ ಕರಗಳು
ನಖ-ಶಿರ ತುಂಬಾ ಕೌಶಲ್ಯ ತುಂಬಿದ ಕುಂಜವೇ
ಶ್ರೀ ಗುರುಭ್ಯೋ ನಮಃ
ಶ್ರೀ ಗುರುಭ್ಯೋ ನಮಃ
ಶ್ರೀ ಗುರುಭ್ಯೋ ನಮಃ
ಶ್ರೀ ಗುರುಭ್ಯೋ ನಮಃ.
ಕನಸನ್ನು ಕಾಣಿಸುವ ನೇಸರ
ಕರುಣೆಯ ಕಲ್ಪಿಸುವ ಚಂದಿರ
ಕ್ಷಮೆಯ ತೋರುವ ವಸುಂಧರಾ
ಕ್ಷಣದ ಮಹಿಮೆ ಸಾರುವ ಅಂಬರ
ಗುರಿಯು, ಗರಿಯು, ಅರಿವು, ಪರಿವು ತೋರಿಸುವ ಜೇಷ್ಠನೆ
ಶ್ರೀ ಗುರುಭ್ಯೋ ನಮಃ
ಶ್ರೀ ಗುರುಭ್ಯೋ ನಮಃ
ಶ್ರೀ ಗುರುಭ್ಯೋ ನಮಃ
ಶ್ರೀ ಗುರುಭ್ಯೋ ನಮಃ.
ಡಾ|| ಉಮ್ಮೆ ಸಲ್ಮಾ ಎಂ
ಸಹ ಪ್ರದ್ಯಪಕರು
ಕ್ರೈಸ್ಟ್ ವಿಶ್ವವಿದ್ಯಾಲಯ
ಬೆಂಗಳೂರು