ಕಾಳಾವರ( ನ. 01): ಕುಂದಾಪುರದ ತಾಲೂಕು ಪಂಚಾಯತ್ ಮಾಜಿ ಸದಸ್ಯರೂ , ಕಾಳಾವರ ಗ್ರಾಮಪಂಚಾಯತ್ ಮಾಜಿ ಸದಸ್ಯರು, ಕಾಂಗ್ರೆಸ್ ಪಕ್ಷದ ಕಾಳಾವರ ಪಂಚಾಯತ್ ವ್ಯಾಪ್ತಿಯ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರೂ, ಪಕ್ಷದ ಕಾರ್ಯಕರ್ತ ದೀಪಕ್ ಕುಮಾರ್ ಶೆಟ್ಟಿ ಯವರು ಹೃದಯಾಘಾತ ದಿಂದ ನಿಧನ ಹೊಂದಿದ್ದಾರೆ. ಮೃತರ ಅಂತ್ಯಕ್ರಿಯೆಯು ನವೆಂಬರ್ 01 ರ ಮಧ್ಯಾಹ್ನ 3.30 ಕ್ಕೆ ಕಾಳಾವರದ ಮೃತರ ಮನೆಯಲ್ಲಿ ನಡೆಯಿತು.
ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ಇತರ ಗಣ್ಯರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದಾರೆ.