ಕುಂದಾಪುರ ( ಎ ,01): ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದ ಎಂ.ಬಿ.ಎ ವಿಭಾಗ ‘ಯುವ -2025’ ಅಂತರ್ ಕಾಲೇಜು ಮ್ಯಾನೇಜ್ ಮೆಂಟ್ ಮತ್ತು ಕಲ್ಚರಲ್ ಫೆಸ್ಟ್ ಇತ್ತೀಚಿಗೆ ನಡೆಯಿತು.
ಈ ಫೆಸ್ಟ್ ನ ಸಭಾಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸ್ಟೇಲ್ತ್ ಪ್ರೊಡಕ್ಷನ್ ಸಂಸ್ಥಾಪಕರಾದ ಶ್ರೀ ನಿತಿನ್ ಹೆಗ್ಡೆರವರು ಆಗಮಿಸಿ ದೀಪ ಬೆಳಗಿಸಿ ಫೆಸ್ಟ್ ಉದ್ಘಾಟಿಸಿದರು. ತಮ್ಮ ಉದ್ಘಾಟನಾ ಭಾಷಣದಲ್ಲಿ ಅವರು ವಿದ್ಯಾರ್ಥಿಗಳು ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಸಿಕ್ಕಿದ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರಲ್ಲದೆ ಎಲ್ಲಾ ಕ್ಷೇತ್ರಗಳಲ್ಲಿ ಆರ್ಟಿಫಿಷಿಯಲ್ ಇಂಟಲಿಜನ್ಸ್ ಉಪಯೋಗ ಹೆಚ್ಚುತ್ತಿರುವದರಿಂದ ವಿದ್ಯಾರ್ಥಿಗಳು ಆ ಕಡೆಗೂ ಗಮನಹರಿಸಿ ಶೀಘ್ರ ಯಶಸ್ಸನ್ನು ಸಾಧಿಸಬೇಕು ಎಂದು ಹೇಳಿದರು.
ಐ. ಎಂ. ಜೆ. ಇನ್ಸ್ಟಿಟ್ಯೂಷನ್ಸ್ ಬ್ರ್ಯಾಂಡ್ ಬಿಲ್ಡಿಂಗ್ ಡೈರೆಕ್ಟರ್ ಡಾ. ರಾಮಕೃಷ್ಣ ಹೆಗ್ಡೆ ಯವರು ಮಾತನಾಡಿ ವಿದ್ಯಾರ್ಥಿಗಳಿಗೆ ಅದ್ಭುತ ಅವಕಾಶ ನೀಡಿದ ಎಂ ಐ ಟಿ ಕೆ ಯ ಎಂ ಬಿ ಎ ವಿಭಾಗವನ್ನು ಹೊಗಳಿದರು ಮತ್ತು ಇಂತಹ ಕಾರ್ಯಕ್ರಮಕ್ಕೆ ಪ್ರೇರಣೆಯಾಗಿರುವ ಐ ಎಂ ಜೆ ವಿದ್ಯಾಸಂಸ್ಥೆ ಗಳ ಚೇರ್ಮನ್ ರಾದ ಶ್ರೀಯುತ ಸಿದ್ದಾರ್ಥ ಜೆ ಶೆಟ್ಟಿಯವರ ಪ್ರೋತ್ಸಾಹಕ್ಕೆ ಅಭಿವಂದಿಸಿದರು ಹಾಗು ವಿದ್ಯಾರ್ಥಿಗಳನ್ನು ಕಳಿಸಿದ ವಿವಿಧ ಜಿಲ್ಲೆಗಳ ಒಟ್ಟು 16 ಕಾಲೇಜುಗಳ ಪ್ರಾಂಶುಪಾಲರಿಗೆ ವಂದಿಸಿದರು.
ಕಾರ್ಯಕ್ರಮದಲ್ಲಿ ಡೀನ್ ಟಿ. ಪಿ. ಐ. ರ್ ಪ್ರೊ. ಅಮೃತಮಾಲಾ ಮಾತನಾಡುತ್ತ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಇಂತಹ ಫೆಸ್ಟ್ ಗಳು ಅವಶ್ಯಕ ಅಂದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಉಪಪ್ರಾಂಶುಪಾಲಾರದ ಡಾ. ಮೆಲ್ವಿನ್ ಡಿ ಸೋಜರವರು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವಿಕೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರಲ್ಲದೆಯೇ ಪಾಲ್ಗೊಳ್ಳುವಿಕೆಯೇ ಗೆಲುವು ಎಂದರು. ಪ್ರಾರಂಭ ದಲ್ಲಿ ಎಂ.ಬಿ.ಎ ವಿಭಾಗದ ಮುಖ್ಯಸ್ಥೆ ಡಾ. ಸುಚಿತ್ರಾ ಪೂಜಾರಿ ಸ್ವಾಗತ ಭಾಷಣ ಮಾಡುತ್ತ “ಯುವ -2025”ರ ಪ್ರಾರಂಭಿಕ ವಿವರಣೆ ನೀಡಿದರು. ವಿದ್ಯಾರ್ಥಿನಿ ಸಹರಾ ಮತ್ತು ಶಾಂಭವಿ ಕಾರ್ಯಕ್ರಮ ನಿರೂಪಿಸಿ, ಪ್ರತಿಕಾ ಶೆಟ್ಟಿ ವಂದಿಸಿದರು.