ಕುಂದಾಪುರ, (ಜೂ,1 ): ಇಲ್ಲಿನ ಡಾl ಬಿ .ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ಆಶ್ರಯದಲ್ಲಿ, ಸ್ವರಾಜ್ಯ 75 ತಂಡದ ಸಂಯೋಜನೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಮತ್ತು ಕುಂದಾಪುರ ತಾಲೂಕು ಘಟಕ, ಜನ ಸೇವಾ ಟ್ರಸ್ಟ್ ಮೂಡು ಗಿಳಿಯಾರು, ಹಸ್ತ ಚಿತ್ರ ಫೌಂಡೇಷನ್ ವಕ್ವಾಡಿ, ಉಸಿರು ಕೋಟ ಸಹಕಾರದೊಂದಿಗೆ ಹೊಂಬೆಳಕು ಕಾರ್ಯಕ್ರಮ ಮೊಳಹಳ್ಳಿ ಬಡಾಮನೆಯಲ್ಲಿ ನಡೆಯಿತು.
ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಕಾರ್ಯದರ್ಶಿ ದಿನಕರ ಆರ್ ಶೆಟ್ಟಿ ಬಸ್ರೂರು ರಾಷ್ಟ್ರಧ್ವಜಕ್ಕೆ ಪುಷ್ಪಾರ್ಚನೆಗೈಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸ್ವಾತಂತ್ರ್ಯ ಹೋರಾಟಗಾರ ಮೊಳಹಳ್ಳಿ ಬಡಾಮನೆ ಮಹಾಬಲ ಹೆಗ್ಡೆ ಅವರ ಮನೆಗೆ ಅಳವಡಿಸಿದ ನಾಮಫಲಕವನ್ನು ನಿವೃತ್ತ ಶಿಕ್ಷಕ ಮೊಳಹಳ್ಳಿ ಭುಜಂಗ ಶೆಟ್ಟಿ ಅನಾವರಣ ಮಾಡಿದರು. ಮೊಳಹಳ್ಳಿ. ಬಡಾಮನೆ ವಿಶ್ವನಾಥ ಶೆಟ್ಟಿ ದೀಪ ಪ್ರಜ್ವಲಿಸಿ ಪುಷ್ಪಾರ್ಚನೆಗೈದರು. ಮೊಳಹಳ್ಳಿ ಗ್ರಾಮ ಪಂಚಾಯತ್ನ ಅಧ್ಯಕ್ಷ ಶ್ರೀ ಚಂದ್ರಶೇಖರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಗಾಂಧಿ ಅಧ್ಯಯನ ಕೇಂದ್ರ, ಮಾನಸ ಗಂಗೋತ್ರಿ ಮೈಸೂರು ಇಲ್ಲಿನ ಸಂಶೋಧಕರಾದ ಭಾಗ್ಯ ಹೆಚ್ ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕರಾವಳಿಗರ ಕೊಡುಗೆಯೊಂದಿಗೆ ಮೊಳಹಳ್ಳಿ ಮಹಾಬಲ ಹೆಗ್ಡೆ ಯವರ ಸೇವೆ ಕುರಿತು ಉಪನ್ಯಾಸ ನೀಡಿದರು.
ಈ ಸಂದರ್ಭ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಕಾಲೇಜಿನ ಉಪ ಪ್ರಾಂಶುಪಾಲ, ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ಡಾ .ಚೇತನ್ ಶೆಟ್ಟಿ ಕೋವಾಡಿ, ಮೊಳಹಳ್ಳಿ ಬಡಾಮನೆ ಸವಿತಾ ಕೆ. ಹೆಗ್ಡೆ, ಮೊಳಹಳ್ಳಿ ದಿವಾಕರ ಶೆಟ್ಟಿ ಕಾಲೇಜಿನ ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ದೀಪ ಪೂಜಾರಿ ಅನುಭವ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಶಿವರಾಜ್ ಹೆಗ್ಡೆ ಹಳ್ನಾಡು, ಮೊಳಹಳ್ಳಿ ಬಡಾಮನೆ ಕುಟುಂಬಸ್ಥರು ಉಪಸ್ಥಿತರಿದ್ದರು .
ಏನ್. ಎಸ್. ಎಸ್. ಸ್ವಯಂಸೇವಕರಾದ ಶ್ರದ್ಧಾ ,ಪವಿತ್ರ ಪೈ ದೇಶಭಕ್ತಿ ಗೀತೆಯನ್ನು ಹಾಡಿದರು. ಸ್ವರಾಜ್ಯ 75ರ ಸಂಚಾಲಕ ಪ್ರದೀಪ್ ಕುಮಾರ್ ಬಸ್ರೂರು ಪ್ರಸ್ತಾವಿಸಿದರು, ಕಾಲೇಜಿನ ನಿರ್ವಹಣಾ ವಿಭಾಗದ ಪ್ರಾಧ್ಯಾಪಕ ಪ್ರವೀಣ್ ಮೊಗವೀರ ಗಂಗೊಳ್ಳಿ ವಂದಿಸಿ, ಅನುಶ್ರೀ ಜಡಕಲ್ ಕಾರ್ಯಕ್ರಮ ನಿರೂಪಿಸಿದರು.