ಮಣಿಪಾಲ್ (ಜು ,18): ಕಸ್ತೂರಬಾ ಆಸ್ಪತ್ರೆ ಮಣಿಪಾಲ ವತಿಯಿಂದ ರಕ್ತ ಕೇಂದ್ರ ಕೆಎಂಸಿ ಮಣಿಪಾಲ ಸಹಕಾರದಲ್ಲಿ ಡಾ. ಟಿ.ಎಂ.ಪೈ ಹಾಲ್ ಕೆಎಂಸಿ ಮಣಿಪಾಲ್ ಇಲ್ಲಿ ಜೂನ್ 14 ರಂದು ನಡೆದ ವಿಶ್ವ ರಕ್ತದಾನಿಗಳ ದಿನಾಚರಣೆ ಸಭಾ ಕಾರ್ಯಕ್ರಮವನ್ನು ನಾಡೋಜ ಡಾ. ಜಿ.ಶಂಕರ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ ಉಡುಪಿ ಹಾಗೂ ಮೊಗವೀರ ಯುವ ಸಂಘಟನೆ ರಿ.ಉಡುಪಿ ಇದುವರೆಗೆ 1,30,000 ಯೂನಿಟ್ ರಕ್ತವನ್ನು ಸಂಗ್ರಹಿಸಿ ಉಡುಪಿ ಜಿಲ್ಲೆ ರಕ್ತದಾನಿಗಳ ಜಿಲ್ಲೆ ಗುರುತಿಸಲು ಕಾರಣವಾಗಿದೆ. ಈಗ ಸತೀಶ್ ಸಾಲ್ಯಾನ್ ಹಾಗೂ ಇತರರು ಬೇರೆ ಬೇರೆ ಸಂಘನೆಯನ್ನು ಹುಟ್ಟು ಹಾಕಿ ಸ್ವಯಂಪ್ರೇರಿತ ರಕ್ತದಾನ ಆಯೋಜನೆ ಮಾಡಿದರು ಕೂಡ ಮೊಗವೀರ ಸಂಘಟನೆ ಮೂಲಕ ರಕ್ತದಾನ ಸೇವೆ ಆರಂಭಿಸಿದವರು, ಅವರು ಇಂದಿಗೂ ನನ್ನ ಶಿಷ್ಯರೇ ಎಂದರು.
ಈ ಸಂದರ್ಭದಲ್ಲಿ ಕ್ಯಾಪ್ಟನ್ ಬೃಜೇಶ್ ಚೌಟ, ಸಂಸದರು, ದಕ್ಷಿಣ ಕನ್ನಡ, ಶ್ರೀ ಯಶ್ಪಾಲ್ ಸುವರ್ಣ ಶಾಸಕರು ಉಡುಪಿ ವಿಧಾನಸಬೆ,
ಡಾ.ಶಿವರಾಮ್ ರಾವ್ ಕೆ. ನೋಡಲ್ ಆಫೀಸರ್ ಜಿಲ್ಲಾ ಆಸ್ಪತ್ರೆ ಉಡುಪಿ, ಡಾ. ಅನಿಲ್ ಭಟ್ , ಡೀನ್ ಮಾಹೆ ಮಣಿಪಾಲ,ಡಾ. ಆನಂದ್ ವೇಣುಗೋಪಾಲ್ ಸಿಇಓ ಕೆಎಂಸಿ ಮಣಿಪಾಲ್,ಡಾ.ಅವಿನಾಶ್ ಶೆಟ್ಟಿ, ವೈದ್ಯಕೀಯ ಅಧೀಕ್ಷಕರು, ಕೆಎಂಸಿ ಮಣಿಪಾಲ, ಡಾ. ಶಮಿ ಶಾಸ್ತ್ರಿ, ನಿರ್ದೇಶಕರು. ರಕ್ತ ಕೇಂದ್ರ ಕೆಎಂಸಿ ಮಣಿಪಾಲ, ಡಾ. ಗಣೇಶ್ ಮೋಹನ್, ಮುಖ್ಯಸ್ಥರು, ರಕ್ತ ಕೇಂದ್ರ ಕೆಎಂಸಿ ಮಣಿಪಾಲ, ಶ್ರೀಮತಿ ಶಾಲಿನಿ ಶಂಕರ್ , ಜಿ.ಶಂಕರ್ ಪ್ಯಾಮಿಲಿ ಟ್ರಸ್ಟ್ ರಿ. ಉಡುಪಿ ಉಪಸ್ಥಿತರಿದ್ದರು.