ಕಾರ್ಕಳ(ಜು ,4): ಮಕ್ಕಳಲ್ಲಿ ನಾಯಕತ್ವ ಹಾಗೂ ಜವಾಬ್ದಾರಿ ನಿರ್ವಹಣಾ ಸಾಮರ್ಥ್ಯ ಮತ್ತು ಜವಬ್ದಾರಿಯುತ ಭಾವೀ ನಾಗರಿಕರನ್ನು ಬೆಳೆಸುವಲ್ಲಿ ಶಾಲಾ ಸಂಸತ್ತು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅಡ್ವಕೇಟ್ ಶ್ವೇತಾ ವಿಪುಲ್ ತೇಜ್ ಹೇಳಿದರು. ಇವರು ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ತಿನ ಅಧಿಕಾರ ಸ್ವೀಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಮಕ್ಕಳೇ ಮುಂದಿನ ನಾಯಕರು ಎಂದು ಹೇಳುವಾಗ ಮಕ್ಕಳಲ್ಲಿ ನಾಯಕತ್ವ ಸಾಮರ್ಥ್ಯ ಅಭಿವೃದ್ಧಿಪಡಿಸುವ ಅಗತ್ಯತೆ ಇದೆ, ಶಾಲಾ ಕಲಿಕೆಯ ಜೊತೆಗೆ ಪ್ರಜಾಪ್ರಭುತ್ವದ ಮಹತ್ವಗಳನ್ನು ಬೆಳೆಸಿದರೆ ಭವಿಷ್ಯದಲ್ಲಿ ಉತ್ತಮ ನಾಗರೀಕರನ್ನು ದೇಶಕ್ಕೆ ಕಾಣಿಕೆಯಾಗಿ ನೀಡಬಹುದು. ದೇಶ ಕಟ್ಟುವ ಕಾಯಕದಲ್ಲಿ ಜವಾಬ್ದಾರಿಯುತ ನಾಯಕರನ್ನು ಸೃಷ್ಟಿಸಬಹುದು ಎಂದು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿರುವ ಶ್ರೀಮತಿ ಜ್ಯೋತಿ ಪದ್ಮನಾಭ ಭಂಡಿಯವರು ಹೇಳಿದರು.
ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಉಪಪ್ರಾಂಶುಪಾರಾದ ಶ್ರೀಮತಿ ವಾಣಿ. ಕೆ ಶಾಲಾ ಸಂಸತ್ತಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಶುಭ ಹಾರೈಸಿದರು.
ಶಾಲಾ ನಾಯಕ ಪ್ರದ್ಯುಮ್ನ ಯು ಕೋಟ್ಯಾನ್, ಉಪನಾಯಕಿ ಹಿಮಾನಿ ಡಿ ಶೆಟ್ಟಿಯಾಗಿದ್ದು, ಸಾಕ್ಷಿ ಶೆಟ್ಟಿ, ಸೋನಲ್ ಲೊಬೋ, ಭುವನ್ ಎಸ್. ಶೆಟ್ಟಿ, ಮೊಹಮ್ಮದ್ ರಿಹಾನ್ ಸಿದ್ಧಿಕ್, ಆಶೀಶ್ ನಾಯಕ್, ಮೊಹಮ್ಮದ್ ಸೂಫಿಯಾನ್, ವಿಯೊಲ ಮೆಂಡೋನ್ಸಾ, ನೀರಜ್ ಕಿಣಿ, ಶಿಕ್ಷಣ ಮಂತ್ರಿ ವೈಷ್ಣವಿ ಶೆಟ್ಟಿಗಾರ್, ದೀಪ್ ದಿನೇಶ್ ಭಂಡಾರಿ, ರಿಯಾ ಕಾರ್ಡೋಜ, ಕಾರ್ತಿಕ್ ಮುಂತಾದ ವಿದ್ಯಾರ್ಥಿಗಳು ವಿವಿಧ ಮಂತ್ರಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಕ್ಷಕಿ ಅನಿಶಾ ಕಾರ್ಯಕ್ರಮ ನಿರೂಪಿಸಿ,ವಿದ್ಯಾರ್ಥಿಗಳಾದ ತನುಜ್ಞಾ ಪ್ರಾರ್ಥಿಸಿ, ಆಪ್ತ ಜೈನ್ ಸ್ವಾಗತಿಸಿ, ಇಶಾನ್ ವಾಝ್ ಧನ್ಯವಾದವಿತ್ತರು.