ಕುಂದಾಪುರ ( ಆ ,31) : ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ವತಿಯಿಂದ ಮೂಡುಬಿದಿರೆ ಆಳ್ವಾಸ್ ಪಿಯು ಕಾಲೇಜಿನಲ್ಲಿ ತಾ. 26-10-2025ರಂದು ಜರುಗಿದ 20ನೇ ಕರ್ನಾಟಕ ರಾಜ್ಯಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರ್ಥ್ಮೆಟಿಕ್-2025ರ ಸ್ಪರ್ಧೆಯಲ್ಲಿ ಕುಂದಾಪುರ ಸೆಂಟರಿನ ಅರಾಟೆ ಲಕ್ಷ್ ರಾಜೇಶ್ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಲಕ್ಷ್ ರಾಜೇಶ್ ಕುಂದಾಪುರ ಅಬಾಕಸ್ ಸೆಂಟರಿನ ಮುಖ್ಯಸ್ಥ ಪ್ರಸನ್ನ ಕೆ.ಬಿ. ಮತ್ತು ಶ್ರೀಮತಿ ಮಹಾಲಕ್ಷಿö್ಮ ಇವರುಗಳು ತರಬೇತಿ ನೀಡಿದ್ದರು. ಲಕ್ಷ್ ರಾಜೇಶ್ ಪ್ರಸ್ತುತ ಓಕ್ವುಡ್ ಇಂಡಿಯನ್ ಸ್ಕೂಲ್, ಕುಂದಾಪುರದ 5ನೇ ತರಗತಿಯ ವಿದ್ಯಾರ್ಥಿ.ಅವರು ಜನವರಿ 2026ರಂದು ಪೊಂಡಿಚೇರಿಯಲ್ಲಿ ಜರುಗಲಿರುವ ರಾಷ್ಟ್ರಮಟ್ಟದ ಸ್ಪರ್ಧೆಗೆ ತರಬೇತಿ ಪಡೆಯುತ್ತಿದ್ದಾರೆ. ಲಕ್ಷ್ ರಾಜೇಶ್ ಅರಾಟೆ ರೇಷ್ಮಾ ರಾಜೇಶ್ ದಂಪತಿ
ಪುತ್ರ.












