ಕುಂದಾಪುರ( ಎ,12): ಕುಂದಾಪುರದ ಡಾ .ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ಟಿವಿಎಸ್ ಗ್ರೂಪ್ ಸಂಸ್ಥೆ ವತಿಯಿಂದ ಎಕ್ಸ್ ಫಿನೋ ಕನ್ಸಲ್ಟೆನ್ಸಿ ವತಿಯಿಂದ ಕ್ಯಾಂಪಸ್ ನೇಮಕಾತಿ ಕಾರ್ಯಕ್ರಮ ಎಪ್ರಿಲ್ 11 ರಂದು ನಡೆಸಿತು. ಅಂತಿಮ ವರ್ಷದ B .Com.ಮತ್ತು BBA ವಿದ್ಯಾರ್ಥಿಗಳು ಭಾಗವಹಿಸಿದರು.

ಎಕ್ಸ್ ಫಿನೋ ಕನ್ಸಲ್ಟೆನ್ಸಿ ಸಂಸ್ಥೆಯ HR ಅಧಿಕಾರಿ ಹಿತಾ ಶೆಟ್ಟಿ ಯವರು ವಿವಿಧ ಹುದ್ದೆಗಳು ಮತ್ತು ನೇಮಕಾತಿ ಪ್ರಕ್ರಿಯೆ ಬಗ್ಗೆ ಮಾಹಿತಿಯನ್ನು ನೀಡಿದರು. ಸಂಸ್ಥೆಯ ಇತರೆ ಅಧಿಕಾರಿಗಳಾದ ಜ್ಯೋತಿ ಶೆಟ್ಟಿ, ದೀಪಿಕಾ ಶೆಟ್ಟಿ ಮತ್ತು ರಾಜೇಶ್ ಬಿಲ್ಲವರವರು ಭಾಗವಹಿಸಿದ್ದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊI ಡಾI ಕೆ. ಉಮೇಶ್ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿ, ಭಾಗವಹಿಸಿದ ವಿದ್ಯಾರ್ಥಿಗಳಿಗೆ ಶುಭಾಶಯವನ್ನು ಕೋರಿದರು. ಕಾಲೇಜಿನ ಪ್ಲೇಸ್ಮೆಂಟ್ ಅಧಿಕಾರಿ ಶ್ರೀ ತಿಮ್ಮಪ್ಪ ಡಿ.ಎಸ್. ಅವರು ಸಂಸ್ಥೆಯ ಅಧಿಕಾರಿಗಳನ್ನು ಆತ್ಮೀಯವಾಗಿ ಸ್ವಾಗತಿಸಿ, ಧನ್ಯವಾದಗಳನ್ನು ಅರ್ಪಿಸಿದರು.











