ಕುಂದಾಪುರ (ಜೂ. 05): ಮೊಗವೀರ ಯುವ ಸಂಘಟನೆ ಯುವ ಸಂಘಟನೆ(ರಿ.) ಉಡುಪಿ ಜಿಲ್ಲೆ, ಹೆಮ್ಮಾಡಿ ಘಟಕ,ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ.) ಅಂಬಲಪಾಡಿ, ಉಡುಪಿ, ಹಾಗೂ ಗ್ರಾಮ ಪಂಚಾಯತ್ ತ್ರಾಸಿ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಜೂನ್, 05 ರಂದು ತ್ರಾಸಿ ಕಡಲತೀರ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಮೊಗವೀರ ಯುವ ಸಂಘಟನೆಯ ಹೆಮ್ಮಾಡಿ ಘಟಕದ ಅಧ್ಯಕ್ಷರಾದ ಪ್ರವೀಣ್ ಮೊಗವೀರ ಗಂಗೊಳ್ಳಿ, ಕಾರ್ಯದರ್ಶಿ ಜಯಂತ್ ಕುಂದರ್ ಬಾಳಿಕೆರೆ, ಮಾಜಿ ಅಧ್ಯಕ್ಷರಾದ ರಾಘವೇಂದ್ರ ನೆಂಪು, ಉಮೇಶ್ ಬಡಾಕೆರೆ, ಸಲಹೆಗಾರರಾದ ರಾಜು ಮೆಂಡನ್ ತ್ರಾಸಿ ಘಟಕದ ಉಸ್ತುವಾರಿಗಳಾದ ಪಾಂಡುರಂಗ ಬೈಂದೂರು, ಘಟಕದ ಜಿಲ್ಲಾ ಪ್ರತಿನಿಧಿಗಳಾದ ಜನಾರ್ಧನ್ ಮೊಗವೀರ ತೊಪ್ಲು ಚಂದ್ರಶೇಖರ ಪಡುಕೋಣೆ,,ಉಪಾಧ್ಯಕ್ಷರಾದ ವಿಜಯ್ ಕಾಂಚನ್ ನಾಡ, ಸದಸ್ಯರಾದ ರತನ್, ಶ್ರೀಶಾಂತ್, ತ್ರಾಸಿ ಗ್ರಾಮ ಪಂಚಾಯತ್ ಸಿಬ್ಬಂದಿ ಸಂದೀಪ ಪೂಜಾರಿ, ಸ್ಥಳೀಯರಾದ ವೀರೇಂದ್ರ ದೇವಾಡಿಗ ಉಪಸ್ಥಿತರಿದ್ದರು.











