ಸಾವು
ಸತ್ತ ಮನೆಯದು,
ಅಷ್ಟೂ ಸಂಬಂಧಿಕರ
ಅಹಂ ಕೂಡಾ ಸತ್ತಿತ್ತು..
ತನ್ನ ಚಟ್ಟಕ್ಕೋ
ನಾಲ್ಕು ಜನ ಇರಲೆಂದೊ?…
ಕಂಬನಿ, ಕರುಣೆ, ಕಣ್ಣೀರು..
ದಿನ ಹದಿನಾಲ್ಕು ಜಾರಿತ್ತು…
ಅಹಂ ಮರುಹುಟ್ಟು ಪಡೆದಿತ್ತು..
ಮತ್ತೆ ಅದೇ ಮದ, ಮೆರೆದಾಟ…
ಅಂತಸ್ತು, ಅಸೂಯೆ, ಅನಾಚಾರ..
ಮತ್ತೊಂದು ಸಾವಿನವರೆಗೂ…
ಹರೀಶ್ ಕಾಂಚನ್ ಮುದ್ದುರಾಧ