ಉಡುಪಿ (ಜು, 27) : ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಆಶ್ರಯದಲ್ಲಿ “ಕ್ಲೌಡ್ ಕಂಪ್ಯೂಟಿಂಗ್” ಎಂಬ ವಿಷಯದ ಕುರಿತು ಜುಲೈ 21 ರಂದು ತಾಂತ್ರಿಕ ಉಪನ್ಯಾಸವನ್ನು ಆನ್ಲೈನ್ ಮೂಲಕ ಆಯೋಜಿಸಲಾಗಿತ್ತು. ಐ.ಐ.ಐ.ಟಿ. ಕೊಟ್ಟಾಯಂ ನ ಪ್ರಾಧ್ಯಾಪಕರಾದ ಪ್ರೊ.ಕ್ರಿಸ್ಟಿನಾ ತೆರೇಸ್ ಜೋಸೆಫ್ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಈ ಕಾರ್ಯಗಾರವನ್ನು “ಕಂಪ್ಯೂಟರ್ ವಿಷನ್” ಕುರಿತು 30 ಗಂಟೆಗಳ, ಮೌಲ್ಯವರ್ಧಿಕ ಕೋರ್ಸ್ ನ ಸಮಾರೋಪ ಕಾರ್ಯಕ್ರಮಕ್ಕಾಗಿ ಆಯೋಜಿಸಲಾಗಿತ್ತು.
ಪ್ರೊ. ಕ್ರಿಸ್ಟಿನಾ ತೆರೇಸ್ ಜೋಸೆಫ್ ರವರು ಮಾತನಾಡಿ ವರ್ಕ್ ಫ್ರಮ್ ಹೋಮ್ ಯುಗದಲ್ಲಿ ಕ್ಲೌಡ್ ಸಾಧನಗಳ ಉಪಯುಕ್ತತೆಯನ್ನು ವಿವರಿಸಿದರು. ಯಾವುದೇ ಕಡತಗಳನ್ನು ಕಂಪ್ಯೂಟರಿನಲ್ಲಿ ಸಂಗ್ರಹಿಸದೇ ಬಳಸುವ, ಇತರರೊಂದಿಗೆ ಹಂಚಿಕೊಳ್ಳುವ, ಮುಂದಿನ ಉಪಯೋಗಕ್ಕೆ ನಕಲು ಪ್ರತಿಯನ್ನು ಇಟ್ಟುಕೊಳ್ಳುವ ಸೌಲಭ್ಯವನ್ನು ಕ್ಲೌಡ್ ಒದಗಿಸುತ್ತದೆ. ಅಲ್ಲದೆ, ಫೇಸ್ಬುಕ್, ಗೂಗಲ್, ಇನ್ ಸ್ಟಾಗ್ರಾಂಗಳು ಕ್ಲೌಡಿನ ಅನ್ವಯಗಳಾಗಿದ್ದು, ನಾವು ನಮ್ಮ ದಿನನಿತ್ಯದ ಜೀವನದಲ್ಲೂ ಬಳಸಿಕೊಳ್ಳುತ್ತಿದ್ದೇವೆ ಎಂದು ಅವರು ತಿಳಿಸಿದರು.
ಡಾ. ಸಚಿನ್ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು. ನೂರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು