ಶಿವಮೊಗ್ಗ (ಆ, 16) : ಶಿವಮೊಗ್ಗ ಲೋಕ ಸಭಾ ಕ್ಚೇತ್ರದ ಸಂಸದ ಶ್ರೀ ಬಿ. ವೈ. ರಾಘವೇಂದ್ರರವರ ಹುಟ್ಟು ಹಬ್ಬದ ದಿನದಂದು ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿಯವರು ಶಿಕಾರಿಪುರದ ಸಂಸದರ ನಿವಾಸಕ್ಕೆ ತೆರಳಿ ಶುಭಾಶಯ ತಿಳಿಸಿದರು. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ. ವೈ. ರಾಘವೇಂದ್ರ ರವರು ಬೈಂದೂರು ಕ್ಷೇತ್ರದ ಬಗ್ಗೆ ತೋರಿದ ವಾತ್ಸಲ್ಯದಿಂದಾಗಿ ಹಿಂದುಳಿದ ಕ್ಷೇತ್ರವೊಂದು ಅಭಿವೃದ್ಧಿಯತ್ತ ದಾಪುಗಾಲು ಇಡುವಂತಾಗಿದೆ.
ನಾನು ಚುನಾವಣೆಯ ಸಂದರ್ಭದಲ್ಲಿ ಹೇಳಿದಂತೆ ಸಮಸ್ತ ಬೈಂದೂರಿಗೆ ಕುಡಿಯುವ ನೀರನ್ನು ಪೂರೈಸುವ ಮಾತನ್ನು ಈಡೇರಿಸುವಲ್ಲಿ ನಿಮ್ಮ ಸಹಕಾರವೇ ಮುಖ್ಯವಾದುದು. ತಂದೆಯಂತೆ ಛಲ, ನೈಜ ಜನಪರ ಕಾಳಜಿ, ಹೋರಾಟದ ಗುಣ, ಸದಾ ಹೊಸ ಯೋಜನೆಗಳ ಫೈಲು ಹಿಡಿದು ಓಡಾಡುವ ಶ್ರದ್ಧೆ, ನಮ್ಮನ್ಮೆಲ್ಲ ನೀವು ಗೌರವಿಸುವ ರೀತಿ, ಹೀಗೆ ಬಹಳ ಉತ್ತುಂಗದ ಗುಣ ನಿಮ್ಮದು. ಆ ಗುಣ ನಿಮ್ನನ್ನು ಇನ್ನಷ್ಟು ಎತ್ತರಕ್ಕೆ ಏರಿಸಲಿದೆ. ಎಲ್ಲಾ ಕಾರ್ಯಗಳಿಗೂ ತಾಯಿ ಮೂಕಾಂಬಿಕೆಯ ಅನುಗ್ರಹವಿರಲಿ ಎಂದು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಸಂಸದರಿಗೆ ಶುಭ ಹಾರೈಸಿದರು.