ಕುಂದಾಪುರ(ಸೆ,7): ಕುಂದಾಪುರ ಮೂಲದ ಮೂರು ವರ್ಷದ ಪುಟ್ಟಪೋರ ಆರ್ಯನ್ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸಾಧನೆ ಮಾಡಿದ್ದಾನೆ.ಎಳೆಯ ವಯಸ್ಸಿನಲ್ಲಿಯೇ ಅಪಾರ ಜ್ಞಾಪಕ ಶಕ್ತಿ ಹೊಂದಿರುವ ಆರ್ಯನ್ ದೇಶಗಳು, ರಾಜ್ಯಗಳು, ರಾಜಧಾನಿ, ವರ್ಣಮಾಲೆ ,ಬಣ್ಣ, ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ತಟ್ಟನೇ ಉತ್ತರಿಸುವ ಅಪಾರ ಜ್ಞಾಪನಾ ಶಕ್ತಿ ಹೊಂದಿರುವ ಕಾರಣಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಲಭಿಸಿದೆ .
ಬೆಂಗಳೂರಿನಲ್ಲಿ ನೆಲೆಸಿರುವ ಕುಂದಾಪುರದ ಕೋಡಿಯ ಕೋಟೆಮನೆ ನಾಗೇಂದ್ರ ಹಾಗೂ ಅಂಜಲಿ ದಂಪತಿಯ ಏಕೈಕ ಪುತ್ರ ಆರ್ಯನ್. ತಮ್ಮ ಮಗುವಿನ ಸೂಪ್ತ ಪ್ರತಿಭೆಯನ್ನು ಗುರುತಿಸಿ ಪೋಷಿಸಿದ್ದರಿಂದ ಈ ಸಾಧನೆ ಸಾಧ್ಯವಾಗಿದೆ ಎಂದುಹೆತ್ತವರು ತಿಳಿಸಿದ್ದಾರೆ.