ಬೈಂದೂರು (ಸೆ,22): ಉಡುಪಿ ಜಿಲ್ಲೆಯ ಹಿಂದುಳಿದ ಹಾಗೂ ಗ್ರಾಮೀಣ ಪ್ರದೇಶವನ್ನು ಹೊಂದಿರುವ ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಂದಾಜು 9000 ವಸತಿ ರಹಿತರಿದ್ದು, ಅವರಿಗೆ ಶಾಶ್ವತ ನೆಲೆ ಕಂಡುಕೊಳ್ಳಲು ಹೆಚ್ಚುವರಿ ಮನೆಗಳನ್ನು ಮಂಜುರು ಮಾಡಬೇಕು,ಹಿಂದೆ ಪ್ರತಿ ಗ್ರಾಮ ಪಂಚಾಯತ್ ಗೆ ನೀಡಿರುವ 20 ಮನೆಗಳ ಆದೇಶ ಆದಷ್ಟು ಶೀಘ್ರವಾಗಿ ಶೀಘ್ರ ನೀಡಬೇಕು ಎಂದು ಬೈಂದೂರಿನ ಶಾಸಕ ಬಿ.ಎಂ .ಸುಕುಮಾರ ಶೆಟ್ಟಿ ಸದನದಲ್ಲಿ ವಸತಿ ಸಚಿವ ಶ್ರೀ ವಿ. ಸೋಮಣ್ಣ ಬಳಿ ವಿನಂತಿಸಿದರು.
ಕ್ಷೇತ್ರದಲ್ಲಿನ ಕೆರೆ ಹಾಗೂ ಇತರ ನೀರಿನ ಮೂಲಗಳ ಅಂತರ್ಜಲ ಮಟ್ಟ ಏರಿಸಲು ಸೂಕ್ತ ಕ್ರಮ ಹಾಗೂ ನೀರಾವರಿ ಯೋಜನೆಯನ್ನು ಜಾರಿಗೆ ತರಬೇಕು ಎಂದು ಸಚಿವ ಗೋವಿಂದ ಕಾರಜೋಳರಲ್ಲಿ ವಿನಂತಿಸಿಕೊಂಡರು.
ಜೊತೆಗೆ ಬೈಂದೂರು ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಭಾಗದ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹೆಚ್ಚಿನ ಪ್ರವೇಶ ಆಗಿದೆ. ಆದರೆ ಅಧ್ಯಾಪಕರ ಕೊರತೆ ಎದ್ದು ಕಾಣುತ್ತಿದ್ದು ಹಾಗಾಗಿ ಕೋವಿಡ್ ನಿಮಿತ್ತ ಗಡಿ ಭಾಗದ ಚೆಕ್ ಪೋಸ್ಟ್ಗಳಲ್ಲಿ ಕಾರ್ಯ ನಿರ್ವಹಿಸುವ ಶಿಕ್ಷಕರನ್ನು ಭೌತಿಕ ತರಗತಿಗೆ ನೇಮಿಸಬೇಕು ಮತ್ತು ಅತಿಥಿ ಶಿಕ್ಷಕರನ್ನು ನೇಮಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಶಾಸಕರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಬಿ.ಸಿ. ನಾಗೇಶ್ ರವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.