ಕೋಟೇಶ್ವರ (ಸೆ,24): ಸ್ಮಾರ್ಟ್ ಕ್ರೀಯೇಷನ್ಸ್ ಎಜುಕೇಶನ್ ಮತ್ತು ಜ್ಞಾನವಾಹಿನಿ ಯುಟ್ಯೂಬ್ ಚಾನೆಲ್ ರವರ ಸಹಭಾಗಿತ್ವದಲ್ಲಿ ಅಕ್ಟೋಬರ್ 2 ರ ಗಾಂಧಿ ಜಯಂತಿ ಅಂಗವಾಗಿ “ನಮ್ಮ ಬಾಪೂಜೀ” ಶೀರ್ಷಿಕೆ ಅಡಿಯಲ್ಲಿ ರಾಜ್ಯ ಮಟ್ಟದ ಅಂಚೆ ಕಾರ್ಡ್ ನಲ್ಲಿ ಗಾಂಧೀಜಿ ಚಿತ್ರ ಬರೆಯುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಈ ಸ್ಪರ್ಧೆಯಲ್ಲಿ ಪ್ರಾಥಮಿಕ ವಿಭಾಗ(ಎಲ್.ಕೆ.ಜಿ ಯಿಂದ 7ನೇ ತರಗತಿವರೆಗೆ), ಪ್ರೌಢ ವಿಭಾಗ (8ನೇ ತರಗತಿಯಿಂದ 10ನೇ ತರಗತಿ) ಹಾಗೂ ಪದವಿಪೂರ್ವ ವಿಭಾಗ ( ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿ) ವಿದ್ಯಾರ್ಥಿಗಳು ಭಾಗವಹಿಸಬಹುದು.
ಪ್ರತಿ ವಿಭಾಗದಲ್ಲಿ ಪ್ರಥಮ,ದ್ವಿತೀಯ ತೃತೀಯ ಬಹುಮಾನವಿದ್ದು (ಪುಸ್ತಕ ಬಹುಮಾನ ಮತ್ತು ಪ್ರಶಸ್ತಿ ಪತ್ರ) ,ಪ್ರತಿ ವಿಭಾಗದಲ್ಲಿ 2 ಸಮಾಧಾನಕರ ಬಹುಮಾನವಿರುತ್ತದೆ.
ಸ್ಪರ್ಧೆಯ ನಿಯಮಗಳು: ಪೆನ್ಸಿಲ್ ಮತ್ತು ಕ್ರೇಯಾನ್ಸ್ ಗಳಲ್ಲಿ ಮಾತ್ರವೇ ಚಿತ್ರ ಬಿಡಿಸುವುದು.
ಕಾರ್ಡ್ ನ ಹಿಂಬದಿಯಲ್ಲಿ ತಮ್ಮ ವಿಳಾಸ ಮತ್ತು ಮೊಬೈಲ್ ಸಂಖ್ಯೆ ಸರಿಯಾಗಿ ನಮೂದಿಸಿ.
ಅಂಚೆ ಕಾರ್ಡ್ ತಲುಪಲು ಕೊನೆಯ ದಿನಾಂಕ:11-10-2021
ವಿಳಾಸ: ಕೃಷ್ಣಮೂರ್ತಿ ಹೈಕಾಡಿ
ಶ್ರೀ ರಾಮ ಡಿಜಿಟಲ್ ಸ್ಟುಡಿಯೋ ಹಾಯ್ಕಾಡಿ.
ಹಿಲಿಯಾಣ ಗ್ರಾಮ ಉಡುಪಿ ತಾಲೂಕು ಉಡುಪಿ ಜಿಲ್ಲೆ –576212
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :9743682692