ಹೆಮ್ಮಾಡಿ (ಅ, 03) : ಮೊಗವೀರ ಯುವ ಸಂಘಟನೆ (ರಿ) ಉಡುಪಿ ಜಿಲ್ಲೆ ಹೆಮ್ಮಾಡಿ ಘಟಕ ದ 2021 – 23 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಅಕ್ಟೋಬರ್,03 ರಂದು ಹೆಮ್ಮಾಡಿಯ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ “ಮತ್ಯಜ್ಯೋತಿ” ಸಭಾಂಗಣದಲ್ಲಿ ಆಯೋಜಿಸಿದ ಹೆಮ್ಮಾಡಿ ಘಟಕದ ವಾರ್ಷಿಕ ಮಹಾಸಭೆ ಮತ್ತು ಸದಸ್ಯತ ಅಭಿಯಾನ ಚಾಲನೆ 2020-21 ಕಾರ್ಯಕ್ರಮದಲ್ಲಿ ನಡೆಯಿತು. ಅಧ್ಯಕ್ಷರಾಗಿ ಲೋಹಿತಾಶ್ವ ಆರ್. ಕುಂದರ್ ಬಾಳಿಕೆರೆ, ಉಪಾಧ್ಯಕ್ಷರಾಗಿ ಚಂದ್ರಶೇಖರ ಪಡುಕೋಣೆ, ಕಾರ್ಯದರ್ಶಿಯಾಗಿ ಪ್ರವೀಣ್ ಮೊಗವೀರ ಗಂಗೊಳ್ಳಿ,ಜೊತೆ ಕಾರ್ಯದರ್ಶಿಯಾಗಿ ಜಗದೀಶ್ ನೆಂಪು, ಕೋಶಾಧಿಕಾರಿಯಾಗಿ ದಿನೇಶ್ ಕಾಂಚನ್ ಬಾಳಿಕೆರೆಯವರನ್ನು ಆಯ್ಕೆ ಮಾಡಲಾಗಿದೆ.
ಕಾರ್ಯಕ್ರಮದಲ್ಲಿ ಮೊಗವೀರ ಯುವ ಸಂಘಟನೆ ಜಿಲ್ಲಾಧ್ಯಕ್ಷರಾದ ಶಿವರಾಮ ಕೋಟ, ಕಾರ್ಯದರ್ಶಿ
ರಾಜೇಂದ್ರ ಹಿರಿಯಡ್ಕ, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿಯ ಮಾಜಿ ಅಧ್ಯಕ್ಷ ಎಮ್ ಎಮ್ ಸುವರ್ಣ, ಹಾಲಿ ಅಧ್ಯಕ್ಷ ಕೆ.ಕೆ ಕಾಂಚನ್., ಹೆಮ್ಮಾಡಿ ಘಟಕದ ಮಾಜಿ ಅಧ್ಯಕ್ಷರಾದ ಉದಯಕುಮಾರ್ ಹಟ್ಟಿಯಂಗಡಿ, ರಾಜಶ್ರೀಯಾನ್, ಹಾಲಿ ಅಧ್ಯಕ್ಷ ಪ್ರಭಾಕರ್ ಸೇನಾಪುರ, ಉಚ್ಚಿಲ ಮಹಾಲಕ್ಷ್ಮೀ ದೇವಳದ ಸ್ವರ್ಣ ಕಲಶ ಸಮಿತಿ ಕುಂದಾಪುರ ವಲಯದ ಕಾರ್ಯದರ್ಶಿ ಜಗದೀಶ ಮಾರ್ಕೋಡು ಮೊಗವೀರ ಸ್ತ್ರೀ ಶಕ್ತಿ ಸಂಘ ಬಗ್ವಾಡಿಯ ಅಧ್ಯಕ್ಷೆ, ಸುಮಿತ್ರ ಆನಂದ ಮೊಗವೀರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.