ಶಿರ್ವ(ಜ.29): ಸಂತ ಮೇರಿ ಮಹಾವಿದ್ಯಾಲಯದ 73ನೆ ಗಣರಾಜ್ಯೋತ್ಸವ ದಿನಾಚರಣೆ ಕಾಲೇಜಿನ ಎನ್.ಸಿ.ಸಿಯ ಭೂಯುವ ಸೇನಾದಳ ನೇತೃತ್ವದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಪ್ರೌಢಶಾಲೆಯ ಮುಖೋಪಾಧ್ಯಾಯರಾದ ಶ್ರೀ ಗಿಲ್ಬರ್ಟ್ ಪಿಂಟೋರವರು ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿ ಇಂದು ಈ ಗಣರಾಜ್ಯೋತ್ಸವ ದಿನಾಚರಣೆಯನ್ನು 75ನೇ ಸ್ವಾತಂತ್ರ್ಯ ಅಮೃತಮಹೋತ್ಸವ ಪ್ರಯುಕ್ತ ಸರ್ಕಾರದ ಆದೇಶದಂತೆ ಶಾಲಾ-ಕಾಲೇಜಿನಲ್ಲಿ ಕೋವಿಡ್ 19 ರ ಮಾರ್ಗಸೂಚಿ ಅನ್ವಯ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ರವರ ಭಾವಚಿತ್ರದೊಂದಿಗೆ ಆಚರಿಸುತ್ತಿದ್ದೇವೆ. ಇಂದು ನಮ್ಮ ರಾಷ್ಟ್ರ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದು ,ಪ್ರತಿಯೊಬ್ಬ ಭಾರತೀಯನಲ್ಲೂ ದೇಶದ ಬಗ್ಗೆ ಕಾಳಜಿ,ದೇಶಪ್ರೇಮ ಸದಾಜಾಗೃತವಾಗಿರಬೇಕು, ಎಲ್ಲ ರಂಗಗಳಲ್ಲಿ ಸರ್ಕಾರದ ಜೊತೆಗೆ ಸಹಕರಿಸಬೇಕು ಮತ್ತು ಮುಂದಿನ ಪೀಳಿಗೆಗಳಿಗೆ ಹಿಂದಿನ ಅಳಿದ ಮಹಾತ್ಮರ ಬಗ್ಗೆ ಗೌರವ, ಅಭಿಮಾನ ಅವರ ಸಾಧನೆಯ ಅರಿವು ಮಾಡಿಸಿಕೊಡುವುದು, ಶಿಕ್ಷಣದ ಜೊತೆಗೆ ವೈಜ್ಞಾನಿಕ ಮನೋಭಾವನೇ ಬೆಳೆಸಿಕೊಂಡು ಅನ್ನ ನೀಡುವ ರೈತರ – ದೇಶ ಕಾಯುವ ಯೋಧರ ಬಗ್ಗೆ ಅಪಾರ ಒಲವು ತೋರಿಸಬೇಕು ಎಂದು ಗಣರಾಜ್ಯೋತ್ಸವ ಸಂದೇಶ ನೀಡಿದ್ದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಹೆರಾಲ್ಡ್ ಐವನ್ ಮೋನಿಸ್, ಡಾನ್ ಬಾಸ್ಕೋ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪೌಲಿನ್ ಲೋಬೋ, ಸೆಕೆಂಡ್ ಆಫೀಸರ್ ಜಾನ್ ವಿಲಿಯಂ, ವಿವಿಧ ಘಟಕಗಳಾದ ಎನ್.ಸಿ.ಸಿ, ಎನ್.ಎಸ್.ಎಸ್, ರೊವರ್ಸ್-ರೇಂಜರ್ಸ್, ಪದವಿಕಾಲೇಜು, ಪದವಿ ಪೂರ್ವ ಕಾಲೇಜು, ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ಭೋಧಕ ಹಾಗು ಭೋಧಕೆತರ ಸಿಬಂದಿಗಳು ಉಪಸ್ಥಿತರಿದ್ದರು.
ಸೀನಿಯರ್ ಅಂಡರ್ ಆಫೀಸರ್ ವಿಶಾಲ್ ಎಸ್ ಮೂಲ್ಯ ಪರೆಡ್ ಕಮಾಂಡಿಂಗ್ ನೀಡಿದ್ದರು. ಜೂನಿಯರ್ ಅಂಡರ್ ಆಫೀಸರ್ ಹರ್ಷಿತಾ, ಸುರಕ್ಷಾ, ಕಂಪನಿ ಸರ್ಜೆಂಟ್ ಕ್ವಾರ್ಟರ್ ಮಾಸ್ಟರ್ ಮೋಹಿತ ಎನ್ ಸಾಲಿಯಾನ್,ಕಾರ್ಪೋರಲ್ ಧೀರಜ್, ಲ್ಲ್ಯಾನ್ಸ್ ಕಾರ್ಪೊರಲ್ ಲೋಬೋ ಆನ್ ರಿಯಾ ನೇವಿಲ್ ವಿದ್ಯಾರ್ಥಿಗಳಾದ ಅಕ್ಷಯ್, ಅನುಪ್ ನಾಯಕ, ಜಾನ್ಸಿ ಮತ್ತಿತರರು ಸಹಕರಿಸಿದರು.
ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಕೆ.ಪ್ರವೀಣ್ಕುಮಾರ್ ರವರು ಸರ್ವರನ್ನೂ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಂತ ಮೇರಿ ಪದವಿಪೂರ್ವ ಕಾಲೇಜಿನ ಉಸ್ತುವಾರಿ ಪ್ರಾಂಶುಪಾಲೆ ಶ್ರೀಮತಿ ಅಮಂಡಾ ಮ್ಯೂರಲ್ ಸಿಕ್ವೇರಾ ರವರು ವಂದಿಸಿದರು.