ಕುಂದಾಪುರ(ಮೇ,11): ಇಲ್ಲಿನ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಅತೀ ಹೆಚ್ಚು ಉದ್ಯೋಗವಕಾಶ ಕಲ್ಪಿಸುವ ಮತ್ತು ಹೊಸ ತಂತ್ರಜ್ಞಾನ ದ ಮೇಲೆ ತರಬೇತಿ ನೀಡುವ ಸಲುವಾಗಿ ಪ್ರತಿಷ್ಟಿತ ಐ ಸಿ ಟಿ ಅಕಾಡೆಮಿ ಜೊತೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಕಾಲೇಜಿನ ಪ್ರಾಂಶುಪಾಲ, ಡಾ .ಚಂದ್ರರಾವ್ ಮದಾನೆ ಮತ್ತು ಐ ಸಿ ಟಿ ಕಡೆಯಿಂದ ರೋಹಿತ್ ಕಜವ ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ । ಮೆಲ್ವಿನ್ ದ ಸೋಜಾ ಮತ್ತು ಡೀನ್ ಅಕಾಡೆಮಿಕ್ ಡಾ. ಪ್ರತಿಭಾ ಎಂ ಪಟೇಲ್ ಸಮ್ಮುಖದಲ್ಲಿ ಸಹಿ ಮಾಡಿ ದಾಖಲೆಗಳ ಹಸ್ತಾಂತರ ಮಾಡಲಾಯಿತು.
ಈ ಒಪ್ಪಂದದ ನಂತರ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಭೋಧಕರು ಅಕಾಡೆಮಿ ನಡೆಸಿಕೊಡುವ ಎಲ್ಲಾ ತರಬೇತಿ ಕಾರ್ಯಕ್ರಮ ಗಳಲ್ಲಿ ಭಾಗಾವಹಿಸಿ ಹೊಸ ವಿಷಯ ತಿಳಿದುಕೊಂಡು ತಮ್ಮ ಕೌಶಲ್ಯತೆ ಹೆಚ್ಚಿಸಿಕೊಳ್ಳಬಹುದು. ಹಾಗೆಯೇ ಕ್ಯಾಂಪಸ್ ಸಂದರ್ಶನ ಕ್ಕೆ ಹೆಚ್ಚು ಕಂಪನಿಗಳು ಭಾಗವಹಿಸಲು ಈ ಒಪ್ಪಂದ ಬಹಳಷ್ಟು ಸಹಕಾರಿಯಾಗಲಿದೆ.