ಕುಂದಾಪುರ( ಸೆ,16) : ಪಠ್ಯದ ಜೊತೆಯಲ್ಲಿ ಶಿಕ್ಷಕರು ಕೊಡುವ ಮೌಲ್ಯವೇ ವಿದ್ಯಾರ್ಥಿಯ ಬದುಕು ರೂಪಿಸುವಲ್ಲಿ ಅತಿಮುಖ್ಯ. ಶಿಕ್ಷಕ ವೃತ್ತಿಯಲ್ಲಿ ದೊರೆಯುವಷ್ಟು ಕರ್ತವ್ಯಪರತೆಯ ಖುಷಿ ಬೇರಾವುದೇ ಉದ್ಯೋಗದಲ್ಲಿಲ್ಲ, ಏಕೆಂದರೆ ಈ ವೃತ್ತಿಯಲ್ಲಷ್ಟೇ ಲಂಚ ಭೃಷ್ಟಾಚಾರಗಳಿಲ್ಲ ಎಂದು ಶಂಕರನಾರಾಯಣ ಸರಕಾರಿ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ| ಉದಯ್ ಕುಮಾರ್ ಶೆಟ್ಟಿ ಹೇಳಿದರು.
ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಸಂದರ್ಭ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿಯವರು ಶಿಕ್ಷಕರ ದಿನದ ಶುಭಾಶಯ ತಿಳಿಸಿದರು. ಉಪಪ್ರಾಂಶುಪಾಲರಾದ ಚೇತನ ಶೆಟ್ಟಿ ಕೋವಾಡಿ ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ರಕ್ಷಿತ್ ರಾವ್ ಗುಜ್ಜಾಡಿ ವಂದಿಸಿದರು. ಇಂಗ್ಲೀಷ್ ಉಪನ್ಯಾಸಕಿ ಶ್ರೀಮತಿ ದೀಪಿಕಾ ರಾಘವೇಂದ್ರ ಪ್ರಾರ್ಥನೆಗೈದರು. ಕನ್ನಡ ಉಪನ್ಯಾಸಕಿ ಶ್ರೀಮತಿ ರೇಷ್ಮಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.