ಮಂಗಳೂರು (ಅ.10): ಅವನಿ ಪ್ರಕಾಶನ, ಮಂಗಳೂರು ಇವರ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ “ಕುಂದಗನ್ನಡದ ನನ್ನ ಊರು – ಜನ – ಸಂಸ್ಕೃತಿ – ಪರಂಪರೆ” ಎನ್ನುವ ವಿಷಯದ ಕುರಿತು ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ. ಹೈಸ್ಕೂಲ್ ವಿಭಾಗ,ಕಾಲೇಜು ವಿಭಾಗ ಹಾಗೂ ಸಾರ್ವಜನಿಕ ವಿಭಾಗ ಎಂದು ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು ,ಪ್ರತಿ ವಿಭಾಗದಲ್ಲೂ ಪ್ರಥಮ, ದ್ವಿತೀಯ , ತೃತೀಯ ಮತ್ತು ಮೂರು ಪ್ರೋತ್ಸಾಹಕರ ಬಹುಮಾನ ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ .
ಕುಂದಗನ್ನಡ ಭಾಷೆ ಮಾತಾಡುವ ಪ್ರದೇಶದ (ಉತ್ತರದಲ್ಲಿ ಶಿರೂರಿನಿಂದ ಕಲ್ಯಾಣಪುರ ಹೊಳೆವರೆಗೆ, ಪೂರ್ವದಲ್ಲಿ ಹುಲಿಕಲ್ಲ್ , ಹೊಸಂಗಡಿ , ಆಗುಂಬೆ ಘಟ್ಟದ ತಳದವರೆಗಿನ ಊರು) ನಿಮ್ಮ ಊರು , ಅಲ್ಲಿನ ಐತಿಹಾಸಿಕ ಮತ್ತು ಪೌರಾಣಿಕ ಐತಿಹ್ಯ, ಪದ್ಧತಿ, ಆಚರಣೆ, ಸಂಪ್ರದಾಯ, ಸಂಸ್ಕೃತಿ, ದೈವಸ್ಥಾನ, ಆಚಾರ ವಿಚಾರ, ಸಾಹಿತ್ಯ, ರಂಗಭೂಮಿ, ಯಕ್ಷಗಾನ, ಯಾವುದೇ ಕಲೆ, ಸಾಂಪ್ರದಾಯಿಕ ವೃತ್ತಿ – ಅವನತಿ ಹೊಂದಿದ & ಹೊಂದುತ್ತಿರುವ ವೃತ್ತಿ ಸಹಿತ, ವ್ಯಕ್ತಿ ಪರಿಚಯ – ಪ್ರಚಾರ ಸಿಗದ ಯೋಗ್ಯ , ‘ಎಲೆಮರೆಯ ಕಾಯಿ’ಯಂತಹ ಸಾಧಕರೂ ಸೇರಿದಂತೆ , ಯಾವುದೇ ವಿಷಯದ ಬಗ್ಗೆ ಬರೆಯಬಹುದು ಎಂದು ತಿಳಿಸಲಾಗಿದೆ .
ಸ್ಪರ್ಧಾ ವಿವರಗಳು ಈ ಕೆಳಗಿನಂತಿದೆ 1.ಒಂದು ಲೇಖನ / ಪ್ರಬಂಧದಲ್ಲಿ ಎಷ್ಟು ವಿಚಾರವನ್ನೂ ಸೇರಿಸಬಹುದು.
2. ಪ್ರೌಢಶಾಲೆ ಮತ್ತು ಕಾಲೇಜು ವಿಭಾಗದವರು ವಿದ್ಯಾಭ್ಯಾಸದ ಬಗ್ಗೆ ID ಅಥವಾ ವಿದ್ಯಾ ಸಂಸ್ಥೆಯ ದೃಢೀಕರಣ ಪತ್ರ ನೀಡಬೇಕು.
3. ಕೈಬರಹ ಅಥವಾ DTP ಮಾಡಿ ಕನಿಷ್ಠ ಹತ್ತು ಪುಟಗಳಿರಬೇಕು.ಗರಿಷ್ಠ ಇಪ್ಪತ್ತು ಪುಟಗಳನ್ನು ಮೀರಿರಬಾರದು.
4. ಮಾಹಿತಿ ನೀಡಿದ ವ್ಯಕ್ತಿಯ ಹೆಸರು ಅಥವಾ ಮಾಹಿತಿ ಮೂಲವನ್ನು ಕಡ್ಡಾಯವಾಗಿ ಕೊನೆಯಲ್ಲಿ ನಮೂದಿಸಬೇಕು.
5. ವಿಭಾಗದ ವಿಂಗಡಣೆಗಾಗಿವಯಸ್ಸಿನ ದಾಖಲೆ ಲಗತ್ತಿಸಿರಬೇಕು.
6. ಪೂರ್ಣ ವಿಳಾಸ, ದೂರವಾಣಿ ಸಂಖ್ಯೆ ಜೊತೆಯಲ್ಲಿ ಲೇಖನ/ ಪ್ರಬಂಧವನ್ನು ಕಳುಹಿಸಬೇಕಾದ ವಿಳಾಸ :- ಶ್ರೀಪತಿ ಆಚಾರ್ಯ C/o. ಕಲಾಕ್ಷೇತ್ರ ಕುಂದಾಪುರ ಎ.ವಿ.ಎನ್. ಬಿಲ್ಡಿಂಗ್ ಮುಖ್ಯ ರಸ್ತೆ ಕುಂದಾಪುರ 576210
ಪ್ರಬಂಧ ಕಳುಹಿಸಲು ಕೊನೆಯ ದಿನಾಂಕ 30-10-2022.
ತೀರ್ಪುಗಾರರ ತೀರ್ಮಾನವೇ ಅಂತಿಮ.
ಅಂತೆ ಕಂತೆಗಳಿಗಿಂತ ವಿಷಯ ಸ್ಪಷ್ಟತೆಗೆ ಆಧ್ಯತೆ.
ವಿಜೇತರಿಗೆ ನಗದು ಬಹುಮಾನದ ಜೊತೆಗೆ ಆಕರ್ಷಕ ಶಾಶ್ವತ ಫಲಕ , ಪ್ರಶಂಸಾ ಪತ್ರ ನೀಡಲಾಗುತ್ತದೆ.
ಭಾಗವಹಿಸುವ ಎಲ್ಲರಿಗೂ ಪ್ರಶಂಸಾ ಪತ್ರ ಮತ್ತು ವಿಶೇಷ ಉಡುಗೊರೆ ನೀಡಲಾಗುತ್ತದೆ.
ನವೆಂಬರ್ ಕೊನೆಯ ವಾರದಲ್ಲಿ ಕುಂದಾಪುರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಶ್ರೀಪತಿ ಆಚಾರ್ಯ,ಅವನಿ ಪ್ರಕಾಶನ.ದೂರವಾಣಿ: 9972312855
ReplyForward |