ಹಾಲಾಡಿ (ಅ,16): ಸ್ಮಾರ್ಟ್ ಕ್ರಿಯೇಶನ್ಸ್ ಎಜ್ಯುಕೇಶನ್ ಟ್ರಸ್ಟ್ (ರಿ) ಮತ್ತು ಹೆಗ್ಗುಂಜೆ ರಾಜೀವ ಶೆಟ್ಟಿ ಸರಕಾರಿ ಪದವಿ ಪೂರ್ವ ಕಾಲೇಜು ಹಾಲಾಡಿ ಇದರ ರಾಷ್ಟ್ರೀಯ ಸೇವಾ ಯೋಜನೆ ಘಟಕ ವತಿಯಿಂದ ಅ.10 ರಂದು ಸೋಮವಾರ ರಂಗಾಭಿನಯ ತರಬೇತಿ ಶ್ರೀಮತಿ ಸಾಧು ಅಧ್ಯಕ್ಷರು ಗ್ರಾಮ ಪಂಚಾಯತ್ ಹಾಲಾಡಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಶ್ರೀ ಪೆರ್ಡೂರು ಪ್ರಭಾಕರ ಕಲ್ಯಾಣಿ ಇವರು ಕಾರ್ಯಕ್ರಮದ ಉದ್ಘಾತಿಸಿದರು. ಗ್ರಾಮೀಣ ಭಾಗದಲ್ಲಿ ರಂಗ ಭೂಮಿಯ ಪರಿಚಯಿಸುತ್ತಾ ವಿದ್ಯಾರ್ಥಿಗಳಿಗೆ ಇದೇ ರೀತಿಯ ತರಬೇತಿ ಈ ಸಂಸ್ಥೆವತಿಯಿoದ ನಡೆಯಲಿ ಎಂದು ಹಾರೈಸಿದರು.
ಇದೇ ಕಾರ್ಯಕ್ರಮದಲ್ಲಿ ಸಂಸ್ಥೆಯು ರಾಜ್ಯಮಟ್ಟದ ಸಮೂಹ ಗೀತೆ ಗ್ರಂಥಾಯಲಕ್ಕೊoದು ಪುಸ್ತಕ ಎನ್ನುವ ಶೀರ್ಷಿಕೆ ಅಡಿಯಲ್ಲಿ ಸ್ಪರ್ಧೆ ನಡೆಸಿ ವಿಜೇತರಿಗೆ ಪ್ರೌಢ ಮತ್ತು ಪ್ರಾಥಮಿಕ ಪ್ರತ್ಯೇಕವಾಗಿ ಪ್ರಥಮ 3 ಸಾವಿರ, ದ್ವೀತಿಯ 2 ಸಾವಿರ, ತೃತೀಯ 1 ಸಾವಿರ ಮೌಲ್ಯದ ಪುಸ್ತಕ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಯಿತು.
ಸಮೂಹ ಗಾಯನ ಸ್ಪರ್ಧೆಯ ಪ್ರೌಢ ಶಾಲಾ ವಿಭಾಗದಲ್ಲಿ ಪ್ರಥಮ ಸರಕಾರಿ ಪದವಿಪೂರ್ವ ಕಾಲೇಜು ಬೋರ್ಡ್ ಹೈಸ್ಕೂಲ್ ಬ್ರಹ್ಮಾವರ, ದ್ವಿತೀಯ ಕರ್ನಾಟಕ ಪಬ್ಲಿಕ್ ಸ್ಕೂಲ್ ಮುನಿಯಾಲು, ತೃತೀಯ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗ ಶೃಂಗೇರಿ. ಪ್ರಾಥಮಿಕ ವಿಭಾಗದಲ್ಲಿ ಪ್ರಥಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸಾಡು ಬೈಂದೂರು, ದ್ವಿತೀಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಳಗಿನಕೊಪ್ಪ ಹಳಿಯಾಳ. ತೃತೀಯ ಕರ್ನಾಟಕ ಪಬ್ಲಿಕ್ ಸ್ಕೂಲ್ ಕೊಕ್ಕರ್ಣೆ ಪಡೆದುಕೊಂಡರು.
ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಉತ್ತಮ ನಿರೂಪಕ ಪ್ರಶಸ್ತಿಯನ್ನು ಆದರ್ಶ ಸೈಂಟ್ ಮೇರಿಸ್ ಸ್ಕೂಲ್ ಕನ್ನರ್ಪಾಡಿ ಉಡುಪಿ, ಕಲ್ಯಾಣಿ ಮತ್ತು ಪ್ರಾಪ್ತಿ ಹೆಗ್ಡೆ ವಿಎಸ್ ಎಸ್ ಸ್ಕೂಲ್ ಮುದ್ದೂರು,ಸಾನ್ವಿ ಕೆ.ಅಮೃತಭಾರತಿ ವಿದ್ಯಾಕೇಂದ್ರ ಹೆಬ್ರಿ,ಚಿತ್ರಾ ವಿ ಶೆಟ್ಟಿ ಕೆ.ಪಿ.ಎಸ್ ಮುನಿಯಾಲು,ಅಮೃತ ಮತ್ತು ದೀಕ್ಷಾ ಎಸ್ ಆರ್ ವಿ ಕೆ ಸ್ಕೂಲ್ ಕೋಡಿ,ಶ್ರೇಯಾ ಆರ್ ನಾಯ್ಕ ಸಂದೀಪನ ಸ್ಕೂಲ್ ನಾಗೂರು,ಸ್ಕಂದಶ್ರೀ ಪ್ರೌಢ ಶಾಲೆ ಶೃಂಗೇರಿ,ಇoಚರ ಸರಕಾರಿ ಪ್ರಾಥಮಿಕ ಶಾಲೆ ಕೆಂಚನೂರು,ಪ್ರಕೃತಿ ಗುಡಿಗಾರ್ ಕ್ರೈಸ್ಟ್ ಕಿಂಗ್ ಸ್ಕೂಲ್ ಕಾರ್ಕಳ,ಸಮನ್ಯು ಆರ್ ಸರಕಾರಿ ಪ್ರಾಥಮಿಕ ಶಾಲೆ ಗಂಡಗಟ್ಟ ಶೃಂಗೇರಿ, ರಶ್ಮಿ ಆರ್ ಬೋರ್ಡ್ ಹೈಸ್ಕೂಲ್ ಬ್ರಹ್ಮಾವರ, ಅಂಕಿತಾ ಸರಕಾರಿ ಪ್ರಾಥಮಿಕ ಶಾಲೆ ಕಾಳಗಿನಕೊಪ್ಪ ಹಳಿಯಾಳ,ವರ್ಷ ಸರಕಾರಿ ಪ್ರಾಥಮಿಕ ಶಾಲೆ ಹೊಸಾಡು ಬೈಂದೂರು ಇವರು ಪಡೆದುಕೊಂಡರು.
ಪುಸ್ತಕ ಬಹುಮಾನದ ಪ್ರಾಯೋಜಕತ್ವವನ್ನು ಶ್ರೀ ಸಂತೋಷ ಶೆಟ್ಟಿ ಅಯೋಧ್ಯ ಉಪಚಾರ್ ಕತ್ರಿಗುಪ್ಪೆ ಬೆಂಗಳೂರು, ಶ್ರೀ ಸಂದರ್ಶ ಶೆಟ್ಟಿ ಉದ್ಯಮಿ ಮುಂಬೈ, ಶ್ರೀಮತಿ ಪುಷ್ಪಲತಾ ಡಿಡಿಪಿಐ ಹಾಸನ ಇವರು ವಹಿಸಿಕೊಂಡರು . ರಂಗಾಭಿನಯ ತರಬೇತಿಗೆ ಶ್ರೀ ಅಶೋಕ್ ಕುಮಾರ್ ಶೆಟ್ಟಿ ಸದಸ್ಯರು ಹಾಲಾಡಿ ಗ್ರಾಮ ಪಂಚಾಯತ್, ಶ್ರೀ ರಾಘವ ನಾಯಕ್ ಬ್ಯಾಂಕ್ ಉದ್ಯೋಗಿ ಮಂಗಳೂರು ಇವರು ಸಹಾಯ ಹಸ್ತ ಚಾಚಿದರು.
ಕಾರ್ಯಕ್ರಮದಲ್ಲಿ ಸ್ಮಾರ್ಟ್ ಕ್ರಿಯೇಶನ್ಸ್ ಅಧ್ಯಕ್ಷರಾದ ಕೃಷ್ಣಮೂರ್ತಿ ಹೈಕಾಡಿ ಪ್ರಾಸ್ತಾವಿಕ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ಸಭೆಯಲ್ಲಿ ಹಾಲಾಡಿ ಗ್ರಾ. ಪಂ. ಉಪಾಧ್ಯಕ್ಷರಾದ ಶ್ರೀ ಜನಾರ್ಧನ್ ಹಾಲಾಡಿ, ಸದಸ್ಯರಾದ ಶ್ರೀ ಗುರುಪ್ರಸಾದ್ ಶೆಟ್ಟಿ, ಹಾಲಾಡಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಬಾಲಕೃಷ್ಣ ಭಟ್, ಕಿರುತೆರೆ ಕಲಾವಿದರು ಶ್ರೀ ರಾಘವೆಂದ್ರ ಮಡಿವಾಳ ಗೋರಾಜೆ, ರಂಗಭೂಮಿ ಕಲಾವಿದರು ಮತ್ತು ತರಬೇತಿ ಶಿಕ್ಷಕರಾದ ಶ್ರೀ ಯೋಗೀಶ್ ಕೊಳಲಗಿರಿ,ಶ್ರೀ ಗಣಪತಿ ಶಿಕ್ಷಕರು, ವಿದ್ಯಾರ್ಥಿ ನಾಯಕ ಅವಿನ್ ಕುಮಾರ್ ಉಪಸ್ಥಿತರಿದ್ದರು. ಶ್ರೀ ಯೋಗೀಶ್ ಕೊಳಲಗಿರಿ ಇವರಿಂದ3 0 ವಿದ್ಯಾರ್ಥಿಗಳಿಗೆ ರಂಗಾಭಿನಯ ತರಬೇತಿ ನೀಡಿದರು.
ಸ್ಮಾರ್ಟ್ ಕ್ರಿಯೇಶನ್ಸ್ ಎಜ್ಯುಕೇಶನ್ ಸಂಸ್ಥೆಯ ಕಾರ್ಯದರ್ಶಿ ಶ್ರೀ ಮಹೇಶ್ ಹೈಕಾಡಿ ಸರ್ವರನ್ನು ವಂದಿಸಿದರು. ಸ.ಪ್ರಾ.ಶಾಲೆ ಕಲ್ಕಟ್ಟೆ ಶೃಂಗೇರಿ ಶಿಕ್ಷಕಿ ಶ್ರೀಮತಿ ನೇತ್ರಾವತಿ ವಿನಯ್ ಕುಮಾರ್ ಮತ್ತು ಸ.ಪ್ರಾ.ಶಾಲೆ ಯಡದಾಳು ಶೃಂಗೇರಿಯ ಶಿಕ್ಷಕ ಶ್ರೀ ವಿನಯ್ ಕುಮಾರ್ ಕರ್ಯಕ್ರಮ ನಿರೂಪಿಸಿದರು.
ಸಂಸ್ಥೆಯ ಗ್ರಾಮೀಣ ಭಾಗದ ವಿದ್ಯರ್ಥಿಗಳಿಗೆ ಹಲವಾರು ತರಬೇತಿ ಕಾರ್ಯಕ್ರಮ ಆಯೋಜಿಸಲಿದ್ದು ಸಂಸ್ಥೆಗೆ ನೆರವು ನೀಡಲು ಈ ಸಂಖ್ಯೆಗೆ 9743682692 ಕರೆ ಮಾಡಲು ಈ ಮೂಲಕ ಕೋರಲಾಗಿದೆ.