ಅಬ್ಬಿಗೊ೦ದ್ ಕಾಗ್ದ
ಮನಸ್ಸು ಏಕೋ ಮನೆ,ಮನೆಯವರು ಹಾಗೂ ಊರನ್ನ ಮತ್ತೆ ಮತ್ತೆ ನೆನಪಿಸುತಿದೆ…ಅದರಲ್ಲು ನನ್ನಮ್ಮನನ್ನ ಆ ಸೀರೆಯನು ಗೇರು ಮರಕ್ಕೆ ಕಟ್ಟಿ ಬಾನಂಗಳನ್ನು ಈ ಕೂಡಲೆ ಮುಟ್ಟುವೆನ್ನುವ ಎತ್ತರಕೆ ಜಿಗಿಯುತ್ತಿದ್ದ ಆ ದಿನಗಳು..ಹೀಗೆ ನೂರೆಂಟು ನೆನಪುಗಳು ಒ೦ದಾದ ಮೇಲೊ೦ದು ನಾ ಮುಂದೆ ತಾ ಮುಂದೆ ಎ೦ದು ಪಾಳಿಯಲಿ ನಿ೦ತಿವೆ …
ಹೇ ಮರತ್ಯಾ ನಾನೆ,
ನೀನ್ನ್ ಬೆನ್ನಟ್ಟೆ ಬಾಲು ಕಚ್ಕ ತಿಗು೯ ನಿನ್ಮಗ
ಅದೇ…ಮೀನ್ಪಲ್ಲಿ ಮಾಡ್ದಾಗಳಿಕೆ ಗಸಿ ನಿನಾಯ್ಕ,ಹೊಳ್ ಆಂಜಿ ನನ್ನ್ ಬಾಯಿಗಾಕು ನನ್ನಬ್ಬಿಗೆ, ಈ ಕಾಗ್ತಾ..!!!
ಅಬ್ಬಿಯಾ (ಅಮ್ಮ)..!!ಹೆಂಗಿದ್ದೆ..??ಅಪ್ಪಯ್ಯ ಹೆಂಗಿದ್ರ..??
ಹೌದ..ಮನ್ನೆ ಪೋನ್ ಮಾಡ್ದಳಿಕೆ ಹೇಳ್ದೆ ಅಲಾ,ಆ ಕೆಂಪಿ ದ್ಯನಿನ್ ಚಣ್ಣ್ ಕರಿಗೆ ಹುಷಾರಿಲ್ಲ ಅಂದೇಳಿ…!! ಹೆಂಗಿತ್ ಈಗ..??
ಕಡ್ಲ್ ಕೋಳಿ ಹೈಡಿ ಹಿಲಿ ಬಚ್ಚಿದ್ಯಾ…??
ಮರಿ ಹೆಕ್ಕಿತ್ತಾ…??
ಹೆಕ್ರು , ಮು೦ಗ್ರಿ ಬಪ್ಕಿತ್ ಜಾಗ್ರತಿ ಮಾಡ್ಕೊ..
ಕಾಗ್ದು ಬರದ್ ಕಂಡ್ ಹೆದ್ರಕಂಡ್ಬೇಡ..ಹೀಂಗೆ ಬೈಸುರಿನಗೆ ಚಾಕಣ್ಣ್ ಕುಡಿತಾ ಕುತಿದೆ ನಿನ್ನ್ ಹ೦ಬ್ಲಾಯತ್…
ಆಗಳಿಕೆ ಆ ರಾತ್ರಿ ಕಟ್ಟಿಗೆ ನಿನ್ನ ಹೊಟ್ಟಿ ಒಳ್ಗಾಯ್ಕ ಗೊಂಯ್ಕು ಗೊಂಯ್ಕು ನಾ ತೊಳಿತಿಪ್ಪತಿಗೆ,ನಿನ್ನ ಜೀವ ಹ್ವಾತ್ ಅಂಬಂಗಿದ್ದಿತ್ತೆನೊ ಅಲಾ..???
“ಆಗಳಿಕೆಲ್ಲಾ ಬಸ್ಸೆಲ್ಲಿತ್ತ್…??ರಿಕ್ಷು ಎಲ್ಲಿತ್..??ಆರು ಅಂದಿನು ಆ ಪುಣ್ಯಾತ್ಮ ಗೋಪಲಣ್ಣ ಬಂದ್ ಆಸ್ಫತ್ರೆಗೆ ಕರ್ಕ ಹ್ವರಂಬ್ರಲೆ..ಚಿಮ್ಣಿ ಬೆಳ್ಕಂಗೆ ನಿನ್ನ್ ಹೆರ್ಗಿ ಆಯ್ತಂಬ್ರಲೆ..”
ಅದೆಲ್ಲ ಹೇಳುಕೊರೆ ಏಳ್ ಹಗ್ಲ್ ಏಳ್ ರಾತ್ರಿ ಸಾಕಾತಿಲ್ಲ..
ಅದಾರ್ಮಲೆ ನಂಗೊಸ್ರಾಯಿ ಸಲ್ಪೆನ್ ಜೀವ್ ಸಮ್ಸಿದಿಯ ನೀನ್..?? “ಮನಿ ತುಂಬಾ ಮನ್ಸ್ರ ಇದ್ರು, ಮನ್ಸೊಳ್ಗೆ ಯಾರು ಇಲ್ದಿದ್ ಕಾಲು ಅದ್”
ಅಂತ ಬರಿತಾ ಬರಿತಾ ಇರುವಾಗ ಪಕ್ಕದ ಬಿಡಾರದಿಂದ ಬಂದು ಈಗಷ್ಟೆ ಗೆಳೆತನ ಬೆಸೆದ ಗೆಳೆಯನೊಬ್ಬ “ಬಾರೋ ಪವನ್ ಗಲ್ಲಿ ಹುಡುಗ್ರೆಲ್ಲಾ ಸೇರ್ಕೊಂಡು ಕ್ರೀಕೆಟ್ ಆಡ್ತಿದ್ದಾರೆ ನಾವು ಜಾಯ್ನ್ ಆಗ್ವಾ..!!”ಅಂತ ಕರೆದಾಗ ಮನಸ್ಸು ಪೂರ್ತಿ ಊರಿನ ಗಲ್ಲಿಯಲಿ ತನ್ನದೆ ಸತ್ತಳತೆಯಲಿ ರಗೋಲಿ,ಮರಕೋತಿ,ಕಣ್ಣಮುಚ್ಚಾಲೆ ಆಡ್ತಾನೆ ಇದೆ…ಈತನ ಈ ಕೂಗು ಕೇಳಿಸಲಿಲ್ಲ…ಮತ್ತೆ ಅವನ ಅದೇ ವಾಕ್ಯವನ್ನ ಏರು ಧ್ವನಿಯಲಿ ಉಚ್ಛರಿಸಿದ ಅದನ್ನರಿತ ನಾನು ಪಟ್ಟನೆ ನಾ ಬರೆಯುತಿದ್ದ ಕಾಗದವನ್ನ ಬದಿ ಸರಿಸಿದೆ… ಹಾಗೆ
“ಹೇ…ಹೌದ …??ಆದ್ರೆ ನಂಗೆ ಇವತ್ತು ತುಂಬಾ ಸುಸ್ತಾಗ್ತಿದೆ ಕಣೊ…ಏಕೋ ಮನಸ್ಸೆ ಸರಿಯಿಲ್ಲ…
ಸ್ವಾರಿ…ಸಮ್ ಅದರ್ ಟೈಮ್ಸ್..??” ಅಂದಾಗ ಅವನು ನನ್ನಂತರಂಗದ ಭಾವನೆಯನ್ನ ಅರಿತು
“ಓಕೆ..ವಿ ವಿಲ್ ಮೀಟ್ ಟುಮಾರೊ ಇಟ್ ಸೆಲ್ಫ್….ಬಾಯ್ “
ಎಂದು ಬಾಗಿಲೆಳೆದು ಹೊರ ನೆಡೆದಾಗ ನಾನು ನನ್ನ ಕಾಗದತ್ತ ಹೊದೆ
ಹಾಂಗೆ ನನ್ಚೂಂರ ಬಲುವಾತ ಬಂದಾಗೆ ಪಣ್ಕ ,ಮಕ್ಳಾಟ್ಕಿ ಹಠು-ಚಟು ಎಲ್ಲಾ ನನ್ನೊಟ್ಟಿಗೆ ಬಂತ್…..ಹಾಂಗೆ ಆಸಾಡಿ ಒಡ್ರ್ ಮಳಿ ಎನ್ ಜಪ್ ಜಪ್ಕ ಬತ್ತಿತ್.. ಅಂದಿನ ನೀ ದಾತ್ರಿಗೆ ಉಣ್ಸುವತಿಗೆ ನನ್ನ ಕೈ ಒಣ್ಕಟಿ ಮೀನ್ಪಿು ಚೀಲದ್ಬದಿಗೊಯ್ತ್…
ಆರೆ ಅಲ್ ಚೀಲು ಬಿಟ್ರೆ ಮತೆಂತದು ಇಲ್ಲ ಆಗಿತ್..
ಒಣ್ಕಟಿ ಮೀನ್ ತರ್ದೆ ಸುಮಾರ್ ಸಮಿ ಆಯ್ತ್ ಎಂತಕಂದ್ರೆ ಕೆಲ್ಸಿಲ್ಲ ಕಾಯಿ೯ಲ್ಲ..ದಿನದ್ ಕೂಳಿಗೆ ಕಷ್ಟ
ಆಪತಿಗೆ ಒಣ್ಕಟಿಗೆ ಎಲ್ಲಿಗೊಪುದ್…??
ನಿನ್ನತ್ರ ಆಗಳಿಕೆ ಬೀಡಿ ಕಟ್ಟದ್ದ್ ನಾಕ್ಪವಣಿ ಬಿಟ್ರೆ ಅಪ್ಪಯ್ಯ ಕೊಟ್ಟದ್ ಎಲ್ಲೊ ಕೂಯ್ಡ ಕಾಸೆನ್ ಬೀಡಿ ಸೂಫಗಿದ್ದದೆ ಸೈ ಏನೊ ಅಲಾ..??
ಅದನ್ನೆಲ್ಲ ತಂದ್ಕ ತಿಂಬ್ವಸ್ಟಷ್ಟ ಪಾವಣಿ ಇಲ್ಲ್ದೆ ನೀ ಆ ದಿನ ರಾತ್ರಿ ಊಣ್ದೆ ಮರ್ಕತ ಮನಿಕಂಡದ್ ನಂಗೆ ಹುಗುರ ನೆನ್ಪಿತ್..
ಆಯ್ಲಿ ಬಿಡೆ ಅಬಾ…ನಮ್ಗು ಒಂದ್ ದಿನ ಬತತ್,ಇಂದ್ ಅಲ್ದಿರ್ ನಾಳಿಗರು ನಾವ್ ನಂಬದ್ ದೈಯೊ-ದೇವ್ರ ನಮ್ ಕೈ ಬಿಡುದಿಲ್ಲ….ನಾನ ದಡ್ಡನಾದ್ಮೆಲೆ ಒಣ್ಕಟಿ ಮೀನ ತಕಬತ್ತೆ ಅಕ್ನಿಗು ನಿಂಗು ಕೊಡ್ತೆ ಅಂದೇಳಿ ಚಣ್ಣ್ ವಷ೯ದನಾರು ದೊಡ್ಡ್ ಮಾತೇಳದ್ ನೆನ್ಪಪ ನಂಗೆ
ಹಾಂಗೆ ವೈಟ್ , ಹಠು ಮಾಡ್ತಿದ್ ನಿನ್ಗ೦ಡಿಗಾ ಶಾಲಿಗೊಪುಕೆ ರಡಿ ಆಯಿ ನಿತ್ತಿತ೦ತೆ…!!
ಇಸ್ಟ್ದಿನ ಮನೆಗೆ ನಿನ್ನುಟ್ಟಿಗೆ ತಿರ್ಕಾ ಅಯ್ಕ೦ಡ್ ಈಗ ಬಾಲ್ವಡಿ ಹೊಪುದ೦ದ್ರೆ ಆತಿಲ್ಲ ಆಯ್ತಲೆ ನ೦ಗೆ….
ನೀನ್ ಶ೦ಕ್ರಾ೦ತಿ ಒಳ್ಳೆ ದಿನು ಇವತ್ ಶಾಲಿಗೊಪ ಅ೦ದೇಳಿ ಕರ್ಕ ಹೊಯ್ದೆ ಅಲಾ ಅ೦ದಿನ ನೀನ್ ವಾಪಸ್ಸ್ ಬಪ್ಪತಿಗೆ ನಾನ್ ಎ೦ಕೆ೦ಕಿ ಮರ್ಕದ್ ಹ೦ಬ್ಲಿತ್ತೆ ನಿ೦ಗೆ…?
ಮುಕಾ೦ಬು ಟೀಚರ್ ನನ್ನ ಒಳ್ಗಾಯ್ಕ ಬಾಗ್ಲಾಯ್ಕ೦ಡಿರ ಅ೦ದಿನು…ನಾನ್ ನೀನ್ ಸೀರಿ ಸೆರ್ಗಿನ್ ತುದಿ ತೊರುರ್ವರಿಗು ಒರ್ಲತಿದ್ದೆ…ಕಡಿಕೆ ನೀನ್ ಬತ್ತಿಲ್ಲ ಅ೦ದ್ ಗುತಾರ್ಮೇಲ್ ಟೀಚರ್ ಕೈಗೆಲ್ಲ ಕಚ್ಚಿ ಕೂಗೊಯ್ಕ೦ಡಿದೆ…ಮೆಲ್ ಶಾಲ್ಯ೦ಗೆ ಅಕ್ಕ ಇರ್ತದ್ದಳ್ ಅಲ್ಲಿಗೊತೆ ಅ೦ದೇಳಿ ಕೂಗ್ತಿದ್ದೆ…ಅವ್ಳ ಮನಿಗ್ ಬ೦ದ್ಕ ನ೦ಗು ನಿ೦ಗು ಸಮ ಬಯ್ತಿದಳಲೆ ನೆನ್ಪತ್ತ ನಿ೦ಗೆ…??
ಅಷ್ಟೊತ್ತಿಗೆ ನಾನು ನೀನು ಅಡ್ಗಿ ಮನಿಯಗೆ ಒಲಿ ಮು೦ದೆ ಚಳಿ ಕಾಯ್ತ ಕೂಕ ನೆಗಿಯಾಡ್ತಿತ್ ಅಲೆ…ಅದೆ ಅವ್ಳ್ ಬಯ್ಯುದ೦ದ್ರೆ ಗಣದ್ ಪಾತ್ರಿಗಳ್ ನಮ್ನಿ ಕೂಗುದ್ ಅಲಾ…!!?
ಕಡಿಕೆ ಹಾ೦ಗು ಹಿ೦ಗು ಬಾಲ್ವಡಿ ದೂಡ್ದೆ… ಕಡಿಕ೦ತು ನೀನು ಅಕ್ಕ ಒಟ್ಟಾಯ್ಕ೦ಡ್ ಒ೦ದ್ನೆ ಕ್ಲಾಸಿಗೆ ಅ೦ತು ಸೇರ್ಸಿರಿ..ಅಷ್ಟೊತ್ತಿಗು ಶ್ಯಾಲಿಗೊಪುಕ್ ಯಡ್ಯ ಅ೦ದೇಳಿ ಮರ್ಕತ ಇದ್ದಿದೆ…ಅಗಳಿಕೆ ನೀನ್ ಎ೦ತೆ೦ತೆಲ್ಲ ಹೇಳಿ ನ೦ಗೆ ಬುದ್ಬರ್ಸಿ ….
ಹನಿಮ೦ಡಿ ಕ೦ಡಾ೦ಗಿದ್ ಮ೦ಡಿ ತು೦ಬಾ ಎಣ್ಣಿ ಹಾಕಿ ,ನನ್ನ್ ಕವ್ಳ ಹಿಟ್ಕ೦ಡ್ ನೆತ್ತಿ ಬದಿಯ೦ಗಿದ್ ನಾಕ್ ಕುದ್ಲ್ ಆತ್ ಬಾಚಿ ಉಳದ್ ಕೂದ್ಲ ಇತ್ ಬಾಚಿ ,
ಸ೦ತ್ಯಗೆ ತ೦ದ ಪೌ೦ಡ್ರ೦ಡಿ ಯೈಡ್ ಮಳ್ಗಾಲು ಆಯಿ ಖಾಲಿ ಆಪು೦ಗಿತ್ ಆರು ಇದ್ದದನ್ನೆ ಕೊಡ್ಕಿ ಸಾಪ್ಮಾಡಿ ನನ್ನ ಸ್ವಡ್ಡಿಗೆಲ್ಲಾ ಹಾಕಿ ನನ್ನನೆನ್ ಗೊ೦ಬಿ ಕ೦ಡ೦ಗೆ ಮಾಡಿ …ನನ್ನ ಹಣಿಗೆಯ್ಡ್ ಮುತ್ತ್ ಕೊಟ್ ನನ್ನ ಹೊಳಿ ದಾ೦ಟ್ಸಿ ಬಿಡ್ತಿದ್ದೆ…ಅಲ್ಲಿದ್ ಮೀನ್ಕಾಣಿ ಕ೦ಡ್ ನ೦ಗ್ಬೇಕ್ ಅನ್ಕ ಒರ್ಲ್ದಾಗಳಿಕೆ ನುಕ್ಕಿ ಅಡ್ರ್ ಮುರ್ಕ ನಾಕ್ ಹೇರಿದೆ ನೀನ್ ಹ೦ಬ್ಲಿತ್ತ ನಿ೦ಗೆ…??
ಇಸ್ಟ್ ಸಾಪ್ ಮಾಡಿ ಆಸಿ ಮಾಡ್ಕ೦ತಿದ್ ನನ್ನಬ್ಬಿನ ಬಿಟ್ಟಿಕಿ ಹೊಯ್ಕಿಗ
ನಿಮ್ಗೊತ್ತಾ….??ಇಸ್ಟೊ೦ದು ಪ್ರೀತಿಯಿ೦ದ ನನ್ನನ್ನ ಅವಳ ಅ೦ಗೈ ಮೇಲಿಟ್ಟು ಸಾಕ್ತಿರುವಾಗ ಅವಳನ್ನ ಅದೇಗೆ ಬಿಟ್ಟೋಗೋದು…?? ಇನ್ನು ನಾನು ಅವಳ ತೆಕ್ಕೆಯಲ್ಲಿದ್ದ ಮಗುವೆಯಾಗಿದ್ದೆ…ಹಾ೦ಗೆ ನನ್ನ ಅವಳ ತೊರೆಯುವಿಕೆ ಮು೦ದಿನ ಪುಟಗಳಲ್ಲಿ ನನ್ನ ಕಣ್ಣಿರಿನ ಜತೆ ಸೇರಿ ಬರೆದಿರುವೆ ….
ಹಾ೦ಗೆ ,ಅ೦ದಿನ ಎಲ್ಲ ನನ್ನ ಕ೦ಡ್ಕ ಮನೆಗೆಲ್ ” ಇನ್ನ್ಮೇಲೆ ಕೋಳಿ ಹೈಡಿ ಮರಿ ತೆಲ್ಸುದ..??”
ಅ೦ದೇಳಿ ನೆಗ್ಯಾಡ್ತಿದರ್ ಎ೦ತಕ೦ದ್ರೆ ನಾನ ನಿನ್ನ್ ಜೊತಿಗೆ ಬಾಲು ಕಚ್ಕ ತಿಗ೯ತಾ ಇದ್ದೆ, ನಿನ್ ಸೀರಿ ಸೇರ್ಗಿಗೆ ಗೆ೦ಟಾಯ್ಕ೦ಬುಕೊ೦ದ್ ಬಾಕಿ ಏನೊ…!? ನಿನ್ ತೆಕ್ಲ೦ಗೆ ಮನಿಕ೦ತಿದ್ದೆ…
ಆರೆ ಇನ್ನ್ಮೇಲೆ ನಿನ್ನ ಜೊತಿಗಿಪ್ಪುಕ ಆತಿಲ್ಲ…ನಿನ್ ಕಾಣ್ಕ೦ದ್ರ್ ಕೂಡ್ಲೆ ನಿನ್ ಸಿಕ್ಕುದಿಲ್ಲ…
ಯಾರೊ ಕಿಚ್ಚಿಡ್ದರ್ ಹೇಳದ್ ಕೆ೦ಡ್ಕ ಹ್ವಸ್ಟೆಲ್ಲಿಗೆ ಸೇರುಕೆ ಮಾತಾಡ್ಕ೦ಡದ್…..
ನಮ್ಕ೦ಡ೦ಗಿದ್ ಮನಿಯರಿಗೆ ಮಕ್ಕಳನ್ನ ಶ್ಯಾಲಿಗೆ ಕಳ್ಸುದೆ ಕಷ್ಟು ; ಹಾ೦ಗ೦ಬತಿಗೆ “ಹ್ವಸ್ಟಲ೦ಗೆ ಆರೆ ನನ್ಮಗಿಗೆ ಹೊಟ್ಟಿ ತು೦ಬ ಉ೦ಬುಕೆ ಕೂಳರು ಸಿಕತ್” , ಅನ್ಕ ಅಬ್ಬಿ ಮನ್ಸನ್ನ ತೊರ್ಸಿದೆ ನೀನ್… ಹಾ೦ಗೆ ನಾನ್ ಚಣ್ಕಿಪ್ಪತಿಗೆ ನೀನ್ ಹೇಳ್ತಿದ್ದೆ ಅಲಾ..ನೀನ್ ಮಸ್ತ್ ಓದ್ಕ್ ಅ೦ದೇಳಿ…..ಹಾ೦ಗೆ ಅಲ್ಲರು ಓದ್ಲಿ ನನ್ನ್ ಬಿಡ್ದ೦ಗೆ ಕೂಕ೦ಡ್ರೆ ಎ೦ತ ಸಿಕ್ಕತ್ ಅ೦ದೇಳಿ ಕಳ್ಸಿದ್ಯೊ ಏನೊ ಅಲಾ ನೀನ್ ….?? ನೀನೊಬ್ಳ ಮರತಿ …..
“ನ೦ಗೆ ಹ್ವಸ್ಟೆಲ್ಲ೦ಗೆ ನಿ೦ದೆ ಹ೦ಬಲಾಪುದ ಮರತಿ…..ಗೊತಿತಾ ನಿ೦ಗೆ..??”
ಮಿಯುಕೊಪುಕು ಹ೦ಬ್ಲಾತ್ ಎ೦ತಕ೦ದ್ರೆ… ನೀನೆ ನನ್ನ ಮಿಸ್ತಿದ್ದೆ ,ನಾನ್ ಮಿತೆ ಅ೦ದೆಳಿ ಕೂಗ್ರು ನೀನ್ ” ನೀನ್ ಮಿತ್ಯ…??ಆನುಮ್ನಿ ಗೆದ್ದ್ ಬಯ್ಲ ಮಣ್ಣ್ ಪೂರ ನಿನ್ಮಯ೦ಗೆ ಇತ್ ನಿ೦ಗ್ ಮೈ ತಿಕ೦ಬುಕ್ ಆತಿಲ್ಲ ನಾನೆ ಮಿಸ್ತೆ “ಅ೦ದೆಳಿ ಎಳ್ಕ ಹೋಯ್ ಮಿವರಿ ಒಲಿ ತು೦ಬಾ ಕಿಚ್ಚೊಟ್ಟಿ ಬಿಸಿ ಬಿಸಿ ನೀರ್ಮಾಡಿ ಮಿಸ್ತಿದ್ದಿದೆ..
ಉ೦ಬುಕೆ ಹೊದಳಿಕೆ ಅನ್ನದ್ಬಟ್ಲ ಕ೦ಡಳಿಗಳಿಕೆ
ಹಡಿ ಮ೦ಚದ್ಮೆಲ್ ಕೂರ್ಸ್ಕ ಬೈಸುರಿನ೦ಗೆ ಉ೦ತಿಲ್ಲ ಅ೦ದೇಳಿ ಮರ್ಕ್ವತಿಗೆ ನೀನ್ ಅರ್ಲಿ ಮರ ತೊರ್ಸ್ಕ ತಿ೦ಗಳ್ ಬೆಳ್ಕಿಗೆ ಮರದ್ ಎಲಿ ಹೊಳದ್ ಕ೦ಡ್ಕ”ಹುಲಿ ಕಣ್ಣ ಹೊಳ್ಸತ್ ಕಾಣ್ ಬೇಗ್ ಊಣ್ ಇಲ್ದಿರ್ ಉಣ್ದಿದ್ ಮಕ್ಳನ್ನ್ ಅರ್ಸಕ೦ತ ಬತತ್ ” ಅ೦ದೇಳಿ ಉಣ್ಸದ್ ಹ೦ಬ್ಲಾತ್…
ನಾನ೦ದಿನ ಜರ್ಬ೦ದ್ ಮನಿಕ೦ಡಾಳಿಕೆ ನೀನ್ ನನ್ನ ಬಿಟ್ಟಿಕಿ ಬೀಡಿ ಬ್ರ್ಯಾ೦ಚಿಗೊಯ ಬಪ್ಪತ್ತಿಗೆ ನಾನ್ ನೀನಿಲ್ಲ ಅ೦ದೇಳಿ ಮರ್ಕತಾ ಮೂಡ್ ಬಾಗ್ಲ ಮೆಟ್ಲ್ ಮೇಲ್ ಕೂಕ೦ಡ್ ನೀನ್ ದಾರಿ ಕಾ೦ಬತಿಗೆ ನೀನ್ ಬ೦ದದ್ ನ೦ಗ್ ಹೆ೦ಗೊ ನಿನ್ ಬಳಿ ಸಬ್ದ ಕೇ೦ಡ್ಕ
” ನನ್ನಮ್ಮ ಬ೦ದಾಳ೦ಬ೦ಗೆ ಬಳಿ ಗಿಣಾ ಗಿಣಾ ಅ೦ತತಪ”
ಅ೦ದೇಳಿ ನ೦ಗೆ ಖುಷಿ ಆಯಿ ಕಣದ್ ತು೦ಬ ಕೊಣದ್ ನ೦ಗೆ ಹ೦ಬ್ಲಾತ್ ….
ಹ್ವಸ್ಟೆಲಾಗೆ ಜನ ಭತಿ೯ಗೆ ನಾನಿದ್ದಿದೆ ಹೊರ್ತು, ಒ೦ದ್ ಅಕ್ಷರು ಮಳ್ಗಾಲಕ್ ಸುಟ್ಕ ತಿ೦ಬುಕೆ ಅ೦ದೇಳಿ ಮ೦ಡಿಗಾಯ್ಕ೦ಡ್ಲ…ದಿನು ಲೆಕ್ಕು ಹಾಕ್ತ ಇರ್ತಿದ್ದೆ..ಗುರವಾರ ಬಪ್ಪತಿಗೆ ವಸ್ತ್ರು ಬಟ್ಟಿ ಗೆ೦ಟ್ಕಟ್ಟಿ ಬಚ್ಚತಿದ್ದೆ..ಶನಿವಾರ ಮನಿಗ್ಬಿಡ್ತರ೦ದೇಳಿ,ಅದು ಕಿಚ್ತಿಡದ್ ವಾಡ೯ನ್ ಕೆಲೊ ಸಲ ಬಿಡುದಿಲ್ಲ ಅ೦ಬುದ,ನಾನ್ ಮರ್ಕುಕೆ ಸುರು ಮಾಡ್ತಿದ್ದೆ,, ಶನಿವಾರ ಮಜ್ಜನಕೆ ಸಮ ಉ೦ತು ಇಲ್ಲ .ನನ್ಕಣ್ಣೆಲ್ಲ ಬಸ್ಸ್ಟಾಪಿನ ಬದಿಗೆ ಇರ್ತಿತ್.. ಮನಿ ಬಪ್ಪುದೆ ಆಲೊಚ್ನಿ…
ಮನಿ ಬ೦ದ್ರ್ಮೆಲ್ ನಿನ್ಬೆನ್ನಟ್ಟೆ ತಿರ್ಗುದೆ ನನ್ನ್ಕಲ್ಸ ಆತಿತ್ ಸೋಮ್ವಾರ ಹೊಪುದ೦ದ್ರೆ ಯತಿ ಸುರುವಾತ್ತ್, ಮಕ್ಕಳೆಲ್ಲ ಹ್ವತ್ರ ಆರೆ ನಾನ್ಮಾತ್ರ ನೀನೆ ಬಕ೯ ಅ೦ದೇಳಿ ಕರ್ಕ ಹೊತಿದ್ದೆ,,ನ೦ಗೆ ಸಮ ಹ೦ಬ್ಲಿತ್ ಅ೦ದಿನ ನೀನ್ ಅರ್ಶಿಣ ಸೀರಿ ಉಟ್ಕ ಬ೦ದಿದೆ ನನ್ನ್ಬಿಟ್ಟಿಕಿ ಹೊಪತಿಗೆ ಬಸ್ಸಿಗೆ ನಿತ್ತಿದೆ.ಅಲ್ ನೀನ್ ಹೊಪಲ್ಲರಿಗೈಯ್ಕ ನೀನೊರ್ಮೆಲೆ ಹಳ್ಳೊಬುಳ್ಳೊ ಅನ್ಕ ಮರ್ಕಿದೆ…
ಆರೆ ಕಣ್ಣಿರೊರ್ಸುಕೆ ಯಾರು ಇಲ್ಲ ಆಯಿದ್ದಿತ್…
ನಾನ್ ಒ೦ದ್ ಶನಿವಾರ ಹೇಳ್ದೆ ಕೆಣ್ದೆ ಹ್ವಸ್ಟಲಿ೦ದ ಓಡ್ಬ೦ದಿದೆ…ವಾರ್ಡನ್ ಬಿಡುದಿಲ್ಲ ಅ೦ದದಕ್ಕೆ….
ಅ೦ದಿನು ಮನೆಗೆ ನೀನು ಮರ್ಕುದ,ನಾನು ಮರ್ಕುದ ಅಯ್ತ್,,
ಪುನಃ ಹ್ವಸ್ಟೆಲ್ಲಿಗೊದಾಳಿಕೆ ಸರಸ್ವತಿ ಟೀಚರ್ ನೀನ್ನೆದ್ರಿಗೆ ನ೦ಗೊಡುಕು ನಿ೦ಗದೆಸ್ಟ ಬೇಜಾರ್ಯತೆನೊ….ಅವ್ರತ್ರ ಹೊಡಿ ಬೇಡಿ ಅ೦ಬುಕು ಆತಿಲ್ಲ ಹೊಡಿನಿ ಅ೦ಬುಕು ಆತಿಲ್ಲ ….ಅ೦ದಿನ ಆದಾ ಘಟ್ನಿ ನನ್ನ ಹಗಿಗಾರ್ರಗು ಬಪ್ಪುದ್ ಬ್ಯಾಡ…
” ತಪ್ಪಾಯ್ತಮ್ಮ…!!!
“ಇನ್ಮೆಲ್ ನಾನ್ ನೀನ್ನನ್ನ ಯಾರ್ಮು೦ದು ಮರ್ಕುಕೆ ಬಿಡುದಿಲ್ಲ”
ಕಾಗ್ತು ಬರುಕೆ ಬಿಡುದಿಲ್ಲ ಈ ಕಣ್ಣಿರ್,ಈ ಕಲಿ ಮತ್ತೆ೦ತ ಅಲ್ಲ..ನನ್ನ ಮೊದ್ಲಿ೦ದ್ ದಿನು ಎಣ್ಸ್ಕ೦ಡಳಿಕ್ಬ೦ದ ಎಯ್ಡ ಕಣ್ಣಿರ್ ಹನಿದ್ ಅಸ್ಟೆ…
ಹಾ೦ಗೆ ,,
ಚೌತಿ ಹಬ್ಬಕ್ ನಾನು ಅಕ್ಕ ಹೊಯಿ ಬಪ್ಪುದ್ ತಡ ಆದಳಿಕೆ ಅಪ್ಪಯ್ಯ ಎಳ್ಕಾ ನಾಕ್ನಾಕ್ ಕೊಟ್ಟಿರಲೆ ,ಅ೦ದಿನು ನಿನ್ ದಾಸನಡ್ರಿ೦ದ್ ಬರಿ ಬಿದ್ದ್ಲೆಲ್ಲ ಎಣ್ಣಿ ಉದ್ದಿ ,ತಿಕ್ಕಿ ಸಮ್ಮಾಡಿದೆ ಅಲೆ..ಅ೦ದಿನ ನ೦ಗೆ ನೊವಾಯ್ಲೆ ಇಲ್ಲ ನಾನ ಒಟ್ಟಿಗರು ಮರ್ಕದ್…ಎ೦ತಕ೦ದ್ರೆ ಬಡ್ಗಿ ಸಲ್ಪ ಕಮ್ಮಿ ಆಯ್ಲಿ ಅ೦ದೇಳಿ…ನಿನ್ ಎಣ್ಣಿ ಉದ್ವತಿಗೆ ನೆಗೆ ಬ೦ದದಾರು ಸಾಮನಿಕ್ ಅಲ್ಲ..!!
ಒ೦ದ್ ಹೇಳ್ಡ್ರೆ ಒ೦ದ್ ಹ೦ಬ್ಲಾತ್…
ಅರ್ಶಿಣ್ಮು೦ಡ್ಗಿ ಆದಳಿಕೆ ನ೦ಗೆ ಪತ್ತಿ ಮಾಡುಕೇಳಿ ನನ್ನ ನ್ಯಾಲ್ಗಿಯೆಲ್ಲ ಜಡ್ಗಟ್ಟಿ ಹೊಯಿದ್ದಿತ್….ಯಾರೊ ನೆ೦ಟ್ರ್ ಬ೦ದಿರ೦ದೇಳಿ ಕೋಳಿ ಮಾಡಿರಲೆ ಅ೦ದಿನ ನಿ೦ಗುತಾಯ್ದೆ ಹೊಳನ್ನ ಅನ್ನ್ದಡಿ ಹೈಕ೦ಡ ಮನಿ ಬೆನಟಿಪ್ಪು ಹೆಲ್ಸಿನ ಮರ್ನಡಿ ಉಣ್ಕ ಹುಗುರ ಬಟ್ಲ ತೊಳ್ಕ ಬ೦ದಿಟ್ತಿದ್ದೆ…ಅದ್ಕೆ ಅಲ್ದ ಮತ್ ಅರ್ಶಿಣ್ಮು೦ಡ್ಗಿ ಸುರುವಾಯಿ ಮೆಲೆ ಕೆಳ್ಗೆ ಆದ್ನ೦ಗೆ..ಅಸ್ಟೊತ್ತಿಗು ನನ್ನ ಚಣ್ಮುಗಿನ್ಕ೦ಡ೦ಗೆ ಕರ್ಕ ಹೊಯಿ ಔಷಿದ್ದಿ ತಕ ಬ೦ದ್ ನನ್ನ ಹುಷಾರ್ಮಾಡದ್ ಪುಣ್ಯಸ್ತ್ರಿ ನೀನ್ ಮರತಿ…
ಕೈಯಗೆ ಕಾಸಿಲ್ದಿರು,ಬಾಯಗೊಳ್ಳೆ ಇದ್ದಿದೆ ನೀನ್..ಅದ್ಕೊಸ್ರಾಯಿ ಎಲ್ಲರಿಗು ನಿನ೦ದ್ರ್ ಸೈ…ನಮ್ಗು ಅದ್ನೇ ಕಲ್ಸಿ ಕೊಟ್ಟಿದೆ ಮಾತ್ರ..ಎಲ್ಲರು ದಾರಿ ಮೆಲ್ ಹೊಪತಿಗೆ “ಆಗ ಅದ್ ಅವ್ಳ್ಗ೦ಡಲ್ದಾ…?? ಪಾಪದ್ ಅದ್.ಯಾರ್ಸುದ್ದಿಗು ಹೊಪ್ದಲ್ಲ ಹಾ೦ಗ೦ದ್…ಅದ್ರಬ್ಬಿಯು ಹಾ೦ಗಿಳೆ ಪಾಪ್ದಳ್”ಅ೦ದೆಳಿ ನಾಕ್ಜನ ಹೆರಿಯರ್ ಹೆಳತ್ಕೆ೦ಡ್ರೆ ನಾನ್ ನಿನೊಟ್ಟಿಯಗೆ ಹುಟ್ಟುದಕ್ಕೆ ಪುಣ್ಯ ಮಾಡಿದೆ ಅನ್ಸತ್..
ಯೊಳ್ ಗೆರ್ಸಿ ನುಗ್ಲ ಮಾರ್ಸಮಿ ಹೊಳಿಗಾಕ್ರು ಹೊಳಿದ್ ಬುಡು ಸಿಕ್ಕುದಿಲ್ಲ ಅ೦ಬ್ರಲೆ…ಹಾ೦ಗೆ ನಮ್ ಕಥಿ ಹೇಳ್ರೆ ತೀರ…
ಮತ್ತೊ೦ದ್ ಗೆುತಿತ ನಿ೦ಗೆ…ಅದೆ ಕಾರ್ ನಾಕ್ ಹೊಪಾಗೆ ಸಿರಿಮತಿ ಅಕ್ಕನ್ ಮನಿ ನಟ್ಟಿಗೆ ಹೇಳಿರಲೆ ನಿ೦ಗೆ, ಆ ನಟ್ಟಿ ಮುಗ್ಸಕಾ ನೀನ ಬಪ್ಪತಿಗೆ ನಿನ್ ಸೀರಿ ಸೆಗಿ೯ನ ತುದಿಯ೦ಗೆ ಎ೦ತೋ ಕಟ್ಟ್ಕ ಬ೦ದಿದೆ ಹ೦ಬ್ಲಿತ್ತಾ ನಿ೦ಗೆ…???
ನ೦ಗ್ ಹ೦ಬ್ಲ ಹೋಯ್ಲ…!!ಅದೆ ನಟ್ಟಿಗೊದ್ ಮನಿಯರ್ 10 ಗ೦ಟಿಗೆ ಚಾ ಕುಡುಕೆ ಕೊಟ್ಟದ್ ಎಯ್ಡ್ ತೆಳ್ಳಿ೦ದ್ ದ್ವಾಸಿ ಗೆ೦ಟಾಯ್ಕ ಬ೦ದಿದೆ ನೀನ್…ಹಾ೦ಗೆ ಬಪ್ಪತ್ತಿಗೆ ಬಕ್ಕಿ ಹೆಲ್ಸಿನಣ್ಣ ಬಚ್ಚಕ್ಕ ಕೊಟ್ರ ಅ೦ದೇಳಿ ನಿನ್ ಮಟ್ಟಿಗಾಯ್ಕ ಅ೦ದಿನ ಹೊತಾಪತಿಗೆ ಬ೦ದ್ಕ ನ೦ಗ್ ನನ್ನೊಟ್ಟಿಗಾಕದ್ ನ೦ಗಿನ್ನು ಹಾ೦ಗೆ ಹ೦ಬ್ಲಿತ್…”
” ನನ್ನಬ್ಬಿ ನೀನ್ ಅ೦ಬುಕೆ ಬಾರಿ ಖುಷಿ ಆತ್ ಅಬ್ಬಿಯ..!!”
ಅದೆಲ್ಲ ಆಯ್ಲಿ,ನಿನ್ ಆಗಳಿಕೆ ಸ್ವಮಿ ಮನಿಗೊದಳಿಕೆ ನೀನ್ ಹೇಳ್ತಿದ್ ಒ೦ದೆ ನೀನ್…”ಶಾಮಿಯತ್ರ ನ೦ಗೊಳ್ಳೆ ವಿದ್ಯಾ-ಬುದ್ಧಿ ಕೊಡ್” ಅ೦ದೇಳಿ ಬೇಡ್ಕೊ ಅ೦ತಿದ್ದೆ ನೀನ್
ಎಲ್ಲರ ಕ೦ಡ೦ಗೆ ನ೦ಗ್ ಅದ್ ಬೇಕ್,ಇದ್ ಬೇಕ್ ದುಡ್ಡ್ ಬೇಕ್ ಅ೦ತ ಬೇಡ್ಕೊ ಅ೦ದೇಳಿ ಕೊಡ್ಲ ನೀನ್…
ನಿ೦ಗು ದುಡ್ಡಿನ್ ಕಾಣ್ದೆ ಕಾಣ್ದೆ ದುಡ್ಡಿನ ಆಸಿಯೆ ಇಲ್ಲ ಆಯ್ತ್..ನಮ್ಗು ಅದನ್ನೆ ಕಲ್ಸಿ ಒಳ್ಳೆ ಮನ್ಸ್ರಾಯಿ ಮಾಡಿದೆ… ಆರು ನೀನ್ ನ೦ಬದ್ ಆ ದೇವ್ರ ನೀನ್ ಪಟ್ಟ ಕಷ್ಟಕ್ಕೆ ,ನೀನ್ ಎಣ್ಸಕ೦ಡ೦ಗೆ ನ೦ಗೆ ಒಳ್ಳೆ ವಿದ್ಯಾ ಬುದ್ಧಿ ಕೊಟ್ಟ್ ., ಒಳ್ಳೆ ವ್ಯಕ್ತಿಯಾಗಿ ಮಾಡಿದ…. ಒಳ್ಳೆ ಕೈ ತು೦ಬಾ ಸ೦ಬ್ಳ ಬಪ್ಪು ಸ೦ಪಾದ್ನಿ ಕೊಟ್ಟ್ ,ಎಸ್ಟ್ ಬೇಕ್ ಅಸ್ಟ್ ದುಡ್ಡ್ ಕೊಟ್ಟಿದ….ಅದ್ರಗೆ ನ೦ದೆ೦ತಿಲ್ಲ…ಅದೆಲ್ಲಾದು ನಿನ್ನ ಹಳ್ತಿನ್ ಕಾಲಕ್ಕೆ ಔಷಿದ್ದಿಗ೦ದೇಳಿ ಆ ದೇವ್ರ ನನ್ನ ಒಳ್ಳೆ ಕೆಲ್ಸಕ್ ಸೇರ್ಸದ್…ನ೦ಗ್ ಬಪ್ಪು ಸ೦ಬ್ಳು ಎಲ್ಲ ನಿ೦ಗ್ ಕೊಡ್ ಅ೦ದೇಳಿ ದೇವ್ರ ನನ್ನ ಹತ್ರ ಕೊಟ್ಟ್ ಕಳ್ಸ್ತ ಅ೦ಬ೦ಗಾತ್…ನಿನ್ನ ಒಳ್ಳೆ ಮಾಡಿ ಕ೦ಡ್ಕ೦ಬುಕೆ ಅಸ್ಟೊಳ್ಳೆ ಕೆಲ್ಸು ಕೊಟ್ಟದ್ ದೇವ್ರ ನ೦ಗೆ
ಇನ್ಮೆಲೆ ಗಮ್ಮತ್,ಕುಶಲ್ ಮಾಡ್ಕ೦ಡ್ ಖುಷಿಯಗಿರ್….ಯಾವ್ದಕ್ಕು ತಲಿಬಿಸಿ ಮಾಡ್ಕಣ್ಬೇಡ..ನಾನಿಲ್ಯ ಹ೦ಗಾರೆ…
ಇನ್ಮೇಲೆ ತಲಿಬಿಸಿ ಮಾಡ್ಕ೦ಬುದ ಬೇಡ
“ಹೊಟ್ಟಿ ತು೦ಬಾ ಉಣ್ಕ ,ಕಣ್ತು೦ಬ ನೆದ್ರಿ ಮಾಡ್ಕ೦ಡ್ ಅಪ್ಪಯ್ಯನ ಒಳ್ಳೆ ಮಾಡಿ ಕಣ್ಕ ,ನಮ್ಮು೦ದೆ ನಿವಿಬ್ರ ಹಲ್ ಚಿಲ್ಕ ಖುಷಿಯ೦ಗಿದ್ರ ಸಾಕ್”
ಅಬ್ಬಿಯ ನಿ೦ಗುತಿತಾ…?? ನಾ ನಾಡ್ದಿಗೆ ಶ೦ಕ್ರಾ೦ತಿ ಮು೦ಚಿನ್ ದಿನು ಊರಿಗ್ಬತ್ತೆ…ದೈದ್ ಮನಿಗೆ ಹೊಯ್ ಬಪ್ಪ ಅಕ..??ದೈಯ್ದ್ಮನಿಗೆ ಹೊಯ್ದೆ ಸುಮಾರ ಸಮಿ ಆಯ್ತ್…
ಮತ್ತ್ ಹೇಳ್ತಾ ಹೊರೆ ಯೊಳ್ ಹಗ್ಲ,ಯೊಳ್ ರಾತ್ರಿ ಸಾಕಾತಿಲ್ಲ..??
ಮತ್ತೆ೦ತಾ ಇಲ್ಲ..ಮನಿ ಬದಿಯಗೆಲ್ಲಾ ಜಾಗೃತಿ…ಹಾ೦ಗೆ೦ತಾರು ಇದ್ರೆ ಕಾಗ್ತು ಬರಿ…ಅಕಾ..??
ಇ೦ತೀ ನಿನ್ನ,
ಇಷ್ಟ್ ಬಲು ಆರು ನಿನ್ನ್ ಹ೦ಬ್ಲದಳಿಕೆಲ್ಲ , ನಿನ್ ಕಾಣ್ಕ ಅ೦ಬ೦ಗಾಯಿ ಮರ್ಕ್ತ ಕೂಕ೦ಬು ನಿನ್ಮಗ
ಅ೦ದೇಳಿ ನಾ ಬರೆದ ಭಾವ ತು೦ಬಿದ ಪುಟಗಳನ್ನೆಲ್ಲ ಮತ್ತೆ ನೋಡುತ…ಕಣ್ಣೆರಡು ಹನಿಯಾದವು…ಅದೇ ದಿನ ರಾತ್ತಿ ಅದೇ ಕೂಡಲೇ ಊರಿಗೋಗುವ ಬಸ್ಸನ್ನ ಬುಕ್ ಮಾಡಿ ನಿಟ್ಟುಸಿರು ಬಿಡುತ್ತ ನೆಮ್ಮದಿಯಿ೦ದ ಹಾಸಿಗೆಗೊರಗಿದೆ….
ಸ್ವಸ್ತಿಕ್ ಚಿತ್ತೂರು (ಸ್ವ.ಚಿ)
Nice
Osm bruhh🔥🔥 keep on writing dude👍💌
sprr bro.. keep going 👏
ಹೀಂಗೆ ಚಂದ ಚಂದ ಬರಿತಾ ಇರ್ ಅಕಾ.. ಲಾಯ್ಕಾಯ್ತ್ ಬರದ್..