ಕಾರ್ಕಳ (ಜು,20): ಜುಲೈ 17 ಮತ್ತು ಜುಲೈ 19 ರಂದು ಕ್ರಿಯೇಟಿವ್ ಪಿಯು ಕಾಲೇಜಿನ ವಾಣಿಜ್ಯ ವಿದ್ಯಾರ್ಥಿಗಳಿಗಾಗಿ ಸಿ.ಎ, ಸಿ.ಎಸ್.ಇ.ಇ.ಟಿ ಮಾಹಿತಿ ಕಾರ್ಯಗಾರವನ್ನು ಕ್ರಿಯೇಟಿವ್ ಪಿ ಯು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸಿ.ಎ ಕಾರ್ಯಗಾರದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರೋಫೆಸರ್ ರಾಜ್ ಗಣೇಶ್ ಕಾಮತ್ ಆಗಮಿಸಿ, ಪ್ರಸ್ತುತ ವಿದ್ಯಮಾನದಲ್ಲಿ ಚಾರ್ಟರ್ಡ್ ಅಕೌಂಟ್ ಕೋರ್ಸ್ ಗೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ವಿಫುಲ ಅವಕಾಶಗಳಿದ್ದು ವಿದ್ಯಾರ್ಥಿಗಳು ಕಾಲೇಜುನಲ್ಲಿ ಒದಗಿಸುವ ಈ ಕೋರ್ಸ್ ನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಸಿ.ಎಸ್.ಇ.ಇ.ಟಿ ಬಗ್ಗೆ ಖ್ಯಾತ ಕಂಪೆನಿ ಸೆಕ್ರೇಟರಿ ಸಂತೋಷ ಪ್ರಭು ವಿದ್ಯಾರ್ಥಿಗಳಿಗೆ ಕಂಪೆನಿ ಸೆಕ್ರೇಟಿಯ ಕಾರ್ಯವೈಖರಿ ಹಾಗೂ ಅಗತ್ಯತೆಗಳ ಬಗ್ಗೆ ವಿವರಿಸಿದರು. ಸಂಸ್ಥೆಯ ಸಂಸ್ಥಾಪಕರದ ಅಶ್ವತ್ ಎಸ್.ಎಲ್ ಹಾಗೂ ಗಣಪತಿ ಭಟ್ ಕೆ.ಎಸ್ ವಿದ್ಯಾರ್ಥಿಗಳಿಗೆ ಕೋರ್ಸ್ ನ ಮಹತ್ವವನ್ನು ನೀಡಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶ್ರೀ ರಾಘವೇಂದ್ರ ಬಿ.ರಾವ್, ಶ್ರೀ ಉಮೇಶ್, ಶ್ರೀ ಚಂದ್ರಕಾಂತ್ , ಶ್ರೀ ಜ್ಞಾನೇಶ್ ಕೋಟ್ಯಾನ್ ಮತ್ತಿತರಿದ್ದರು. ವಿದ್ಯಾರ್ಥಿನಿ ಸಾನ್ವಿ ಎಸ್.ರಾವ್ ಕಾರ್ಯಕ್ರಮ ನಿರೂಪಿಸಿದರು ಹಾಗೂ ನಮನ್ ವಂದಿಸಿದರು.