ಕುಂದಾಪುರ (ಜು15): ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೆ ಕೃಷಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ನೆಟ್ಟಿ ಮಾಡಿದ ಮಕ್ಕಳ ಆಸಕ್ತಿ ಮತ್ತು ಉತ್ಸಾಹ ನಮಗೆ ಸಂತಸವನ್ನು ನೀಡಿದೆ ಎಂದು ಕುಂದಾಪುರದ ಕೃಷಿಕರಾದ ಕೋಟ್ಯಾನ್ ಮನೆಯವರು ಹೇಳಿದರು.
ಎಚ್ ಎಮ್ ಎಮ್ ಮತ್ತು ವಿ ಕೆ ಆರ್ ಶಾಲೆಗಳಲ್ಲಿ ನೋಡುತ್ತ ತಿಳಿ ಮಾಡುತ್ತ ಕಲಿ ಎನ್ನುವ ಆಶಯದೊಂದಿಗೆ ಹಮ್ಮಿಕೊಂಡ ನಮ್ಮ ನಡೆ ಕೃಷಿ ಭೂಮಿ ಕಡೆ ಎನ್ನುವ ವಿದ್ಯಾರ್ಥಿಗಳ ಕಾರ್ಯ ಚಟುವಟಿಕೆ ಕುರಿತು ಅವರು ಮಾತನಾಡಿದರು. ಕಲಿಕೆ ಕೇವಲ ತರಗತಿ ಕೋಣೆಯೊಳಗೆ ಮಾತ್ರವಲ್ಲದೆ ಪ್ರಕೃತಿಯ ಮಡಿಲಲ್ಲೂ ಕೂಡ ಸಾಧ್ಯ ಎಂಬ ಅರಿವನ್ನನ್ನು ವಿದ್ಯಾರ್ಥಿಗಳು ಪಡೆದರು.
ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ಕಾರ್ಯಕ್ರಮವನ್ನು ಸಂಯೋಜಿಸಿದ್ದರು. ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಶುಭ ಕೆ ಎನ್ ,ಸ್ಕೌಟ್ ಮತ್ತು ಗೈಡ್ ಶಿಕ್ಷಕರಾದ ರೇಖಾ ಕೆ ಯು , ವೀರೇಂದ್ರ ನಾಯಕ್ ಮಾರ್ಗದರ್ಶನ ನೀಡಿದರು. ಮಳೆಗಾಲದ ಈ ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ಸರೋಜಾ ಆರ್, ಸ್ವಪ್ನ ಸತೀಶ್, ಕವಿತಾ ಪಿ ಮತ್ತು ಪ್ರಕಾಶ್ ಎಸ್ ವಿದ್ಯಾರ್ಥಿಗಳೊಂದಿಗೆ ಭಾಗವಹಿಸಿದ್ದರು.