ಕುಂದಾಪುರ(ಮಾ.7) : ಮಕ್ಕಳನ್ನು ಮೊಬೈಲ್ ದಾಸರನ್ನಾಗಿ ಮಾಡಬೇಡಿ, ಸಾಧ್ಯವಾದಷ್ಟು ಅವರನ್ನು ಹೊರಗಡೆ ಆಟವಾಡಲು ಬಿಡಿ, ಆಟವಾಡುವಾಗ ಎದ್ದು ಬಿದ್ದು ಕಲಿತ ಪಾಠವೇ ಅವರ ಜೀವನವನ್ನು ರೂಪಿಸಬಲ್ಲುದೇ ಹೊರತು ಮೊಬೈಲ್ ನೋಡುವುದರಿಂದ ಅಲ್ಲ, ಎಂದು ಸಂಸ್ಥೆಯ ಹಳೆ ವಿದ್ಯಾರ್ಥಿಶ್ರೀ ಪವನ್ ಕುಮಾರ್ ಶೆಟ್ಟಿ ಹೇಳಿದರು.

ಅವರು ಕುಂದಾಪುರ ಎಜುಕೇಶನ್ ಸೊಸೈಟಿ (ರಿ) ಪ್ರವರ್ತಿತ ಎಚ್. ಎಮ್. ಎಮ್. ಪೂರ್ವ ಪ್ರಾಥಮಿಕ ವಿಭಾಗದ ʼಗ್ರ್ಯಾಜುಯೇಷನ್ ಡೇ ʼಯ ಮುಖ್ಯ ಅತಿಥಿಯಾಗಿ ವಿಧ್ಯಾರ್ಥಿಗಳಿಗೆ ಪ್ರಮಾಣಪತ್ರ ವನ್ನು ವಿತರಿಸಿ ಈ ಮಾತುಗಳನ್ನು ಹೇಳಿದರು..
ಪುಟಾಣಿಗಳಾದ ಶುಭನ್ ಪಿ, ಝುಬೇದ ನೈಝ, ಋತ್ವಿ, ದೈವಿಕ್ ತಮ್ಮ ಅನುಭವವನ್ನು ಹಂಚಿಕೊಂಡರು. ಸಂಸ್ಥೆಯ ಉಪ ಪ್ರಾಂಶುಪಾಲೆ ಶ್ರೀಮತಿ ಶುಭ ಕೆ ಎನ್ ಅವರು ಪ್ರಾಸ್ತಾವಿಕ ಮಾತುಗಳಾನ್ನಾಡಿದರು. ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ಲತಾ ಜಿ ಭಟ್ ಹಾಗೂ ವಿವಿಧ ವಿಭಾಗದ ಮುಖ್ಯಸ್ಥರು, ಶಿಕ್ಷಕರು, ಶಿಕ್ಷಕೇತರರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕಿ ಪ್ರಿಯಾಂಕ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.











