ಕುಂದಾಪುರ (ಫೆ-16) : ಲಯನ್ಸ್ ಜಿಲ್ಲಾ ಗವರ್ನರ್ ನೀಲಕಂಠ ಮಂಜುನಾಥ್ ಹೆಗ್ಡೆಯವರ ಸಮ್ಮುಖದಲ್ಲಿ ಕೋಣಿ ಕ್ರಾಸ್ ಬಳಿ ಲಯನ್ಸ್ ಕ್ಲಬ್ ಬಸ್ರೂರು ಮೂಡ್ಲಕಟ್ಟೆ ವತಿಯಿಂದ ಬ್ಯಾರಿಕೇಡ್ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಕುಂದಾಪುರ ಪೋಲಿಸ್ ಠಾಣಾಧಿಕಾರಿ ಸದಾಶಿವ ಗವರೋಜಿ ಮತ್ತು ಪೋಲಿಸ್ ಅಧಿಕಾರಿಗಳು, ಲಯನ್ಸ್ ವಲಯಾಧ್ಯಕ್ಷರಾದ ಎಕನಾಥ ಬೊಳಾರ್, ಲಯನ್ ಜಯಪ್ರಕಾಶ್ ಶೆಟ್ಟಿ , ಲಯನ್ ಬಸವಮೆಂಡನ್, ಲಯನ್ ರಾಜೀವ್ ಶೆಟ್ಟಿ , ಲಯನ್ಸ್ ಕ್ಲಬ್ ಬಸ್ರೂರು ಮೂಡ್ಲಕಟ್ಟೆಯ ಅಧ್ಯಕ್ಷರು ಹಾಗೂ ಲಯನ್ಸ್ ಸಮ್ಮೇಳನ ಮತ್ತು ವಿಚಾರ ಸಂಕಿರಣಗಳ ಜಿಲ್ಲಾಧ್ಯಕ್ಷರಾದ ಲಯನ್ ಅಕ್ಷಯ ಹೆಗ್ಡೆ ಮೊಳಹಳ್ಳಿ ಮುಂತಾದವರು ಉಪಸ್ಥಿತರಿದ್ದರು.