ಹೌದು ಸ್ನೇಹಿತರೇ,
ಗಾಳಿಬಂದ ಕಡೆಯಲ್ಲಿ ತೂರಿಕೊಂಡು ಅತೀ ಧಾವಂತದಲ್ಲಿ ಮುನ್ನೆಡೆಯುತ್ತಿರುವ ನಾವು ಹಾಗೂ ನಮ್ಮ ಯುವ ಪೀಳಿಗೆ ಸಂಸ್ಕಾರವನ್ನು ಮರೆಯುವತ್ತ ಹೆಜ್ಜೆಗಳನ್ನಿಡುತ್ತಿದ್ದೇವೆ..
ಇಲ್ಲಿವೆ ನೋಡಿ ಸಂಸ್ಕಾರದ ಪಾಠ
ಕೈಯಲ್ಲಿ ಕೋಟಿ ಇದ್ದರು ಗುರು ಹಿರಿಯರನ್ನು ಕಂಡೊಡನೆ ಕಾಲಿಗೆ ಬೀಳೋದು ಸಂಸ್ಕಾರ..!
ಎಷ್ಟೇ ಆಧುನಿಕತೆ ಬಂದರು ಹಣೆಯ ಮೇಲಿನ ಬೊಟ್ಟು ಸಂಸ್ಕಾರ..!
ಎಷ್ಟೇ ಆಧುನಿಕತೆಯ ಗಾಳಿ ಬೀಸಿದರು ಜಡೆಯ ತುಂಬ ಹೂವು ಸಂಸ್ಕಾರ..!
ಡಿಗ್ರಿ ಮೇಲೆ ಡಿಗ್ರಿ ಪಡೆದರು ಗುರು ಕಂಡೊಡನೆ ತೋರಿಸುವ ಭಯ ಭಕ್ತಿ ಸಂಸ್ಕಾರ..!
ಯಜಮಾನಿಕೆ ದೊಡ್ಡಸ್ತಿಕೆ ಇದ್ದರು ಚಿಕ್ಕವರಿಗೆ ತೋರಿಸೋ ಪ್ರೀತಿ ವಿಶ್ವಾಸ ಕಳಕಳಿ ಸಂಸ್ಕಾರ..!
ನಮ್ಮ ನಡವಳಿಕೆಯಲ್ಲಿರೋ ನಯ ವಿನಯ ನಾಜೂಕತನ ಸಂಸ್ಕಾರ..!
ಓದು ಬರಹ ಉದ್ಯೋಗದ ಹೊರತಾಗಿಯೂ ಹೊರುವ ಜವಾಬ್ದಾರಿ ಸಂಸ್ಕಾರ..!
ಖಾಯಿಲೆಯ ತಂದೆಯನ್ನು ಮಗನಂತೆಯೇ ಜೋಪಾನ ಮಾಡೋದು ಸಂಸ್ಕಾರ..!
ಸದಾ ಕುಟುಂಬದ ಕಣ್ಣಾದ ತಾಯಿಯ ಬೇಕು ಬೇಡ ಕೇಳಿ ಈಡೇರಿಸುವದು ಸಂಸ್ಕಾರ..!
ನಂಬಿ ಬಂದ ಹೆಂಡತಿಯನ್ನು ಹೊಡೆಯದೆ ಬೈಯದೆ ಪ್ರೀತಿಯಿಂದಲೇ ಸಂತೈಸುವುದು ಸಂಸ್ಕಾರ..!
ಮುದ್ದಿನ ಮಗ ತಪ್ಪು ಮಾಡಿದಾಗ ಮೃದು ಮಾತಿನಿಂದ ದಾರಿಗೆ ತರೋದು ಸಂಸ್ಕಾರ..!
ಅಡ್ಡ ದಾರಿ ತುಳಿತಾ ಇರೋ ವಯಸ್ಸಿಗೆ ಬಂದ ಮಗಳಿಗೆ ನಲ್ಮೆಯ ಮಾತುಗಳಿಂದ ಮನವೊಲಿಸುವುದು ಸಂಸ್ಕಾರ…!
ತನ್ನ ನೂರು ಕಷ್ಟಗಳ ಮಧ್ಯೆಯೂ ಸಹಾಯ ಬೇಡಿದೊಡನೆ ಸಹಾಯ ಮಾಡೊ ಗೆಳೆಯನ ಗುಣ ಸಂಸ್ಕಾರ..!
ಸಣ್ಣ ಸಂಪಾದನೆಯಲ್ಲಿ ತನ್ನ ಇಷ್ಟಾ ನಿಷ್ಟ ಮರೆತು ನಿಮ್ಮನ್ನೊಪ್ಪಿ ಬಂದು ಪ್ರೀತಿ ತೋರುವ ಹೆಂಡತಿಯ ಉದಾರ ಗುಣ ಸಂಸ್ಕಾರ..!
ಸಂಸ್ಕಾರ ಎಲ್ಲೆಲ್ಲೂ ಇದೆ..
ಅಂಗಳದ ರಂಗೋಲಿಯಲ್ಲಿ..
ದೇವರ ಮುಂದೆ ದೀಪದಲ್ಲಿ..
ಅಡುಗೆಯಾದೊಡನೆ ಬರುವ ಘಮದಲ್ಲಿ..
ಗೋಡೆಯ ಮೇಲೆ ಚಿತ್ರ ಕಲೆಯ ಚಿತ್ತಾರದಲ್ಲಿ..
ತುಳಸಿ ಕಟ್ಟೆ ಮುಂದೆ ಕೈ ಮುಗಿವ ಕೈಗಳಲ್ಲಿ..
ತಟ್ಟೆಯ ಮುಂದೆ ಕೂತಾಗ ಬಡಿಸುವವನ ಕೈಯಲ್ಲಿ..
ಹುಶಾರಿಲ್ಲದೆ ಮಲಗಿದಾಗ ಏನಾಯಿತು ಎಂದು ಮರಗುವವರ ಮನದಲ್ಲಿ..
ನಮ್ಮ ಮಾತು, ಹಾವ-ಭಾವ, ವರ್ತನೆ, ತೋರುವ ಪ್ರೀತಿ ಆದರಗಳ ನಡತೆಯಲ್ಲಿ ನಮಗೆ ಸಿಕ್ಕಿರುವ ಸಂಸ್ಕಾರ ಪ್ರತಿಫಲಿಸುತ್ತದೆ..
ಇಂದಿನ ಪೀಳಿಗೆಗೆ ಸಂಸ್ಕಾರದ ಪಾಠ ಅತೀ ಅಗತ್ಯವಿದ್ದು ಹೆತ್ತವರು ಮತ್ತು ಶಿಕ್ಷಕರು ಮಕ್ಕಳ ಬಾಳಿನಲ್ಲಿ ಇದನ್ನು ಬಿತ್ತುವ ಕೆಲಸ ಈಗಿಂದೀಗಲೇ ಮಾಡಿದರೆ ಮಾತ್ರ ನಾವು ನೀವುಗಳು ಭವ್ಯ ಭವಿಷ್ಯತ್ತನ್ನು ನೋಡಲು ಸಾಧ್ಯವಿದೆ..
ಹರೀಶ್ ಕಾಂಚನ್ ಬೀಜಾಡಿ, ಉಪನ್ಯಾಸಕರು ಕುಂದಾಪುರ