ಕುಂದಾಪುರ (ಮೇ,15) :ಜೆಸಿಐ ಕುಂದಾಪುರ ಸಿಟಿ ಘಟಕ ಸತತ 17 ನೇ ದಿನದ ಲಾಕ್ ಡೌನ್ ಸಂದರ್ಭದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಇವರ ಸಹಭಾಗಿತ್ವದಲ್ಲಿ ಡಾ|ಉಮೇಶ್ ಪುತ್ರನ್ ರವರ ಪ್ರಾಯೋಜತ್ವ ದಲ್ಲಿ ಕುಂದಾಪುರ ಪರಿಸರದ ಕೂಲಿಕಾರ್ಮಿಕರಿಗೆ ಆಸ್ಪತ್ರೆಯ ರೋಗಿಗಳಿಗೆ, ಲಾರಿ ಚಾಲಕರು ಸೇರಿದಂತೆ ಸುಮಾರು 220 ಕ್ಕಿಂತಲೂ ಹೆಚ್ಚು ಜನ ಹಸಿದವರಿಗೆ ಊಟ ವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಜೆಸಿಐ ಕುಂದಾಪುರ ಸಿಟಿಯ ಅಧ್ಯಕ್ಷ ವಿಜಯ ಭಂಡಾರಿ ,ಸ್ಥಾಪಕಾಧ್ಯಕ್ಷ ಹುಸೇನ್ ಹೈಕಾಡಿ, ವಲಯಾಧಿಕಾರಿ ಪ್ರಶಾಂತ್ ಹವಾಲ್ದಾರ್ ಪೂರ್ವ ಅಧ್ಯಕ್ಸರಾದ ರಾಘವೇಂದ್ರ ಚರಣ್ ನಾವಡ, ಶ್ರೀಧರ್ ಸುವರ್ಣ, ಕಾರ್ಯದರ್ಶಿ ಗುರುರಾಜ್ ಕೊತ್ವಾಲ್ ಜೇಸಿರೇಟ್ ಡಾ| ಸೋನಿ, ಉಪಾಧ್ಯಕ್ಷ ಅಭಿಲಾಷ್ ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಯ ಕಾರ್ಯದರ್ಶಿ ವೈ ಸೀತಾರಾಮ ಶೆಟ್ಟಿ, ಸದ್ಯಸ್ಯರಾದ ಗಣೇಶ್ ಆಚಾರ್ಯಉಪಸ್ಥಿತರಿದ್ದರು