ಸಿದ್ದಾಪುರ (ಜೂ, 16): ಇಲ್ಲಿನ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ವಿಶೇಷಚೇತನರಿಗೆ ಫುಡ್ ಕಿಟ್ ವಿತರಣೆ ಮತ್ತು ಅರಿವು ಕಾರ್ಯಕ್ರಮವನ್ನು ಎಪಿಡಿ ಸಂಸ್ಥೆಯ ಜೀವನೋಪಾಯ ಕಾರ್ಯಕ್ರಮದಡಿ ಹಮ್ಮಿಕೊಳ್ಳಲಾಯಿತು. ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜೂನ್ ,16 ರಂದು ಆಯೋಜಿಸಲಾದ ಕಾರ್ಯಕ್ರಮದಲ್ಲಿ ಎಪಿಡಿ ಸಂಸ್ಥೆಯ ನೋಡಲ್ ಅಧಿಕಾರಿ ಹರೀಶ ಶೆಟ್ಟಿ ಯವರು ಮಾತನಾಡಿ, ನಮ್ಮ ಸಂಸ್ಥೆ ಸುಮಾರು 62 ವರ್ಷದಿಂದ ವಿಶೇಷ ಚೇತನರಿಗೆ ಶಿಕ್ಷಣ, ತರಬೇತಿ, ವೈದ್ಯಕೀಯ ಪುನಶ್ಚೇತನ ಹಾಗೂ ಉದ್ಯೋಗ ಸೌಲಭ್ಯವನ್ನು ನೀಡಿ ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ವಿಜೇತರು ಮತ್ತು ತಾಲೂಕಿನ MRW ಮಂಜುನಾಥ ಹೆಬ್ಬಾರ್, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಶೇಖರ ಕುಲಾಲ್, ಉಪಾಧ್ಯಕ್ಷರು, ಸರ್ವ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ರವೀಂದ್ರ,VRW ಕಾವೇರಿ ಪ್ರಸಾದ್, ಪ್ರತಿನಿಧಿ ವಿಘ್ನೇಶ್ ಶೆಟ್ಟಿ ಆಜ್ರಿ ಮತ್ತು ಸಿದ್ದಾಪುರ ಜಿಲ್ಲಾಪಂಚಾಯತ್ ಯುವಮೋರ್ಚಾದ ಅಧ್ಯಕ್ಷ ಹರೀಶ್ ಮೊಗವೀರ ಮತ್ತು ವಿಶೇಷ ಚೇತನರು ಉಪಸ್ಥಿತರಿದ್ದರು. VRW ಆಕಾಶ್ ಶೆಟ್ಟಿ ಸ್ವಾಗತಿಸಿ, ನಿರೂಪಿಸಿದರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಂದಿಸಿದರು.