ಕುಂದಾಪುರ(ಜೂ.10): ತಾಲೂಕಿನ ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಟ್ವಾಡಿ ಬಿ.ಎಸ್.ಸೂರಪ್ಪ ಶೆಟ್ಟಿ ಯವರ ಮನೆಗೆ ಸ್ವಾತಂತ್ರ್ಯ ಹೋರಾಟಗಾರರ ಮನೆ ಎಂದು ನಾಮ ಫಲಕ ಅಳವಡಿಸುವ ಕಾರ್ಯಕ್ರಮ ಇತ್ತೀಚೆಗೆ ಜರಗಿತು.
ಸ್ವರಾಜ್ಯ 75 ತಂಡದ 24ನೇ ಸ್ವಾತಂತ್ರ್ಯ ಹೋರಾಟಗಾರರ ಮನೆ ನಾಮಫಲಕ ಅನಾವರಣ ಕಾಯ೯ಕ್ರಮಕ್ಕೆ ಕುಂದಾಪುರದ ಡಾ.ಬಿ.ಬಿ.ಹೆಗ್ಡೆ ಪ್ರಥಮ ದಜೆ೯ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ,ಹಸ್ತ ಚಿತ್ರ ಫೌಂಡೇಶನ್ ಕ್ವಾಡಿ,ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಘಟಕ,ಜನಸೇವಾ ಟ್ರಸ್ಟ್ ಮೂಡುಗಿಳಿಯಾರು ,ಉಸಿರು ಕೋಟ,ಶ್ರೀ ಸುಜಿತ್ ಶೆಟ್ಟಿ ಹಿಲಿಯಾಣ ಇವರ ಸಹಕಾರ ಕ ನೀಡಿದರು . ರಾಷ್ಟ್ರ ಧ್ವಜಕ್ಕೆ ಪುಷ್ಪ ನಮನ ಸಲ್ಲಿಕೆಯ ಮೂಲಕ ಕುಂದಾಪುರದ ಡಾ.ಬಿ.ಬಿ.ಹೆಗ್ಡೆ ಪ್ರಥಮ ದಜೆ೯ ಕಾಲೇಜಿನ ಉಪ ಪ್ರಾಂಶುಪಾಲರು ಹಾಗೂ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾದ ಶ್ರೀ ಚೇತನ್ ಶೆಟ್ಟಿ ಕೋವಾಡಿ ಚಾಲನೆ ನೀದಿದರು.
ಕಾಯ೯ಕ್ರಮ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ಜಿಲ್ಲೆಯ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗರು ವಹಿಸಿದ್ದರು. ಚಿನ್ಮಯಿ ಆಸ್ಪತ್ರೆ ಕುಂದಾಪುರ ಇದರ ವೈದ್ಯಕೀಯ ನಿರ್ದೇಶಕರಾದ ಶ್ರೀ ಉಮೇಶ್ ಪುತ್ರನ್ ರವರು ದೀಪ ಬೆಳಗಿ ಶುಭಕೋರಿದರು . ಉದಯವಾಣಿ ದಿನ ಪತ್ರಿಕೆಯ ಉಪ ಮುಖ್ಯ ವರದಿಗಾರರಾದ ಶ್ರೀ ಲಕ್ಷ್ಮೀ ಮಚ್ಚೀನ ರವರು ನಾಮಫಲಕ ಅನಾವರಣ ಮಾಡಿದರು.
ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕರಾವಳಿಯ ರ ಕೊಡುಗೆಯೊಂದಿಗೆ ಸಟ್ವಾಡಿ ಬಿ.ಎಸ್.ಸೂರಪ್ಪ ಶೆಟ್ಟಿ ಇವರ ಸೇವೆ ಯ ವಿಚಾರದ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಮತಿ ಸಂಧ್ಯಾ ಶೆಟ್ಟಿ ವಿಚಾರ ಹಂಚಿಕೊಂಡರು. ಶ್ರೀ ಮಹೇಂದ್ರ ಆಚಾಯ೯ ವಕ್ವಾಡಿ ಇವರು ಹೋರಾಟಗಾರರ ಚಿತ್ರಬಿಡಿಸಿ ಕುಟುಂಬಸ್ಥರಿಗೆ ಗೌರವ ನೀಡಿದರು.
ಮುಖ್ಯ ಅತಿಥಿಗಳಾಗಿ ಡಾ.ರಾಜೇಂದ್ರ ಕುಮಾರ್ ಶೆಟ್ಟಿ, ದಿನಕರ್ ಆರ್.ಶೆಟ್ಟಿ, ಸುಬ್ರಹ್ಮಣ್ಯ ಶೆಟ್ಟಿ ಆಗಮಿಸಿದ್ದರು . ಸ್ವರಾಜ್ಯ 75 ಕಾಯ೯ಕ್ರಮ ದ ಸಂಚಾಲಕರಾದ ಪ್ರದೀಪ ಕುಮಾರ್ ಬಸ್ರೂರು ಕಾರ್ಯಕ್ರಮ ಆಯೋಜಿಸಿದ್ದರು.