ಕುಂದಾಪುರ (ಜು, 11): ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಮೂಡಬಿದಿರೆಯ ಆಡಳಿತಕ್ಕೆ ಒಳಪಟ್ಟ ಕುಂದಾಪುರದ ಎಕ್ಸಲೆಂಟ್ ಪಿಯು ಕಾಲೇಜು ಮತ್ತು ಸ್ಕೂಲ್ ಪ್ರಸ್ತುತ ವರ್ಷ ಎಸ್ಎಸ್ಎಲ್ ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗಾಗಿ “ಭವಿಷ್ಯದ ಬಾಗಿಲು” ಎನ್ನುವ ವಿನೂತನ ಕಾರ್ಯಕ್ರಮವನ್ನು ಆನ್ ಲೈನ್ ನಲ್ಲಿ ಜುಲೈ 12 ಮತ್ತು 13 ರಂದು ಹಮ್ಮಿಕೊಂಡಿದೆ.
ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಉಡುಪಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಾಗಿರುವ ಡಾ|| ಕಿಶೋರ್ ಕುಮಾರ್ ಶೆಟ್ಟಿ ಯವರು ಜುಲೈ 12ರಂದು ಬೆಳಿಗ್ಗೆ 9:00 ಗಂಟೆಗೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷರಾಗಿರುವ ಡಾ. ರಮೇಶ್ ಶೆಟ್ಟಿಯವರು ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ ಮತ್ತು ಟ್ರೆಷರರ್ ಭರತ್ ಶೆಟ್ಟಿ ಉಪಸ್ಥಿತರಿರಲಿದ್ದಾರೆ.
ಭವಿಷ್ಯದ ಬಾಗಿಲು:
ಕರೋನ ಕಾರಣದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗೆ ಬಲವಾದ ಹೊಡೆತ ಬಿದ್ದಿರುವ ಸಂದರ್ಭದಲ್ಲಿ ತರಗತಿಗಳು ಆನ್ ಲೈನ್ ಗೆ ಸೀಮಿತ ವಾಗಿರುವುದನ್ನು ಮನಗೊಂಡು ಎಕ್ಸಲೆಂಟ್ ಕಾಲೇಜಿನ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಜುಲೈನಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗಾಗಿ ಎರಡು ದಿನಗಳ ಎಸ್ಎಸ್ಎಲ್ ಸಿ ಎಂಸಿಕ್ಯೂ ಪ್ರಶ್ನೆಪತ್ರಿಕೆ ಬಿಡಿಸುವ ತಂತ್ರವನ್ನು ಉಚಿತವಾಗಿ ತನ್ನ ಉತ್ತಮ ಗುಣಮಟ್ಟದ ಶಿಕ್ಷಕರ ಮೂಲಕ ರಾಜ್ಯದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದೆ. ಜುಲೈ 12 ಮತ್ತು 13ರಂದು ವಿಜ್ಞಾನ , ಸಮಾಜವಿಜ್ಞಾನ ಮತ್ತು ಗಣಿತ ವಿಷಯಗಳಿಗೆ ಸಂಬಂಧಿಸಿದ ತರಗತಿಗಳು ಯೂಟ್ಯೂಬ್ ಮೂಲಕ ಎಲ್ಲಾ ವಿದ್ಯಾರ್ಥಿಗಳಿಗೂ ಲಭ್ಯವಿರುತ್ತದೆ. ಜುಲೈ 2021 ರಂದು ಎಸ್ಎಸ್ಎಲ್ ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು.
ಕೋವಿಡ್-19 ನ ಸಂದರ್ಭದಲ್ಲಿ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಎಕ್ಸಲೆಂಟ್ ಕಾಲೇಜ್ ಕುಂದಾಪುರ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ನಿರತ ವಾಗಿದ್ದು, ಅದರಲ್ಲಿ ಇದು ಒಂದು ಮುಖ್ಯವಾದ ಕಾರ್ಯಕ್ರಮವಾಗಿದೆ. ಪರೀಕ್ಷೆಗೆ ಕೆಲವೇ ದಿನ ಇರುವ ಸಂದರ್ಭದಲ್ಲಿ ಎಂಸಿಕ್ಯೂ ಪ್ರಶ್ನೆ ಬಿಡಿಸುವ ತಂತ್ರ ಬಹಳ ಅಗತ್ಯವಾಗಿ ಬೇಕಾಗಿರುವುದರಿಂದ ಈ ಒಂದು ಕಾರ್ಯಕ್ರಮಕ್ಕೆ ಕೈ ಹಾಕಲಾಗಿದೆ ಎಂದು ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷರು, ಎಕ್ಸಲೆಂಟ್ ಪಿಯು ಕಾಲೇಜಿನ ಪ್ರಾಂಶುಪಾಲರಾಗಿರುವ ಡಾ. ರಮೇಶ್ ಶೆಟ್ಟಿ ತಿಳಿಸಿದ್ದಾರೆ.
https://youtu.be/m40H9or_BcE ವಿದ್ಯಾರ್ಥಿಗಳು ಈ ಲಿಂಕ್ ನ ಮೂಲಕ ಯೂಟ್ಯೂಬ್ ನಲ್ಲಿ ತರಗತಿಯನ್ನು ವೀಕ್ಷಿಸಬಹುದು. ಹೆಚ್ಚಿನ ಮಾಹಿತಿಗಾಗಿ ಎಕ್ಸಲೆಂಟ್ ಕಾಲೇಜಿನ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.