ಅರಾಟೆ (ಸೆ, 27) : ಬೈಂದೂರು ವಿಧಾನಸಭಾ ಕ್ಷೇತ್ರದ ಹೊಸಾಡು ಗ್ರಾಮಪಂಚಾಯತ್ ವ್ಯಾಪ್ತಿಯ ಅರಾಟೆ ಎಂಬಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯ ಮೂಲಕ ಮೂರು ಲಕ್ಷ ರೂಪಾಯಿ ವೆಚ್ಚದಲ್ಲಿ, ದೇಶ ಕಂಡ ಧೀಮಂತ ನಾಯಕ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಯವರ ಹೆಸರಿನಲ್ಲಿ ನಿರ್ಮಿಸಲಾದ ಪ್ರಯಾಣಿಕರ ತಂಗುದಾಣವನ್ನು ಬೈಂದೂರಿನ ಶಾಸಕರಾದ ಬಿ.ಎಂ ಸುಕುಮಾರ ಶೆಟ್ಟಿ ಯವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಭಾರತೀಯ ಜನತಾಪಕ್ಷದ ಬೈಂದೂರು ಮಂಡಲದ ಅಧ್ಯಕ್ಷರಾದ ದೀಪಕ್ ಕುಮಾರ್ ಶೆಟ್ಟಿ ಊರಿನ ಹಿರಿಯರಾದ ಎಂ ಎಂ ಸುವರ್ಣ,ಕೊಲ್ಲೂರು ದೇವಳದ ವ್ಯವಸ್ಥಾಪನ ಸಮಿತಿಯ ಸದಸ್ಯ ಗೋಪಾಲ ಕ್ರಷ್ಣ ನಾಡ, ಸ್ಥಳೀಯ ಬಿಜೆಪಿ ಮುಖಂಡರಾದ ರಮೇಶ್ ಆಚಾರ್ಯ, ಅರಾಟೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರರು, ರಾಘವೇಂದ್ರ ಆಚಾರ್ಯ, ಹರೀಶ್ ಮೇಸ್ತ , ಹರೀಶ್ ಶೆಟ್ಟಿ ,ನಾಗರಾಜ್ ಮೊಗವೀರ ಉಪಸ್ಥಿತರಿದ್ದರು.












