ಡಾ. ಬಿ.ಬಿ. ಹೆಗ್ಡೆ ಕಾಲೇಜಿನ 72ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ಬೈಂದೂರಿನ ಶಾಸಕರು ಹಾಗೂ ಕಾಲೇಜಿನ ಅಧ್ಯಕ್ಷರಾದ ಶ್ರೀ ಬಿ.ಎಮ್. ಸುಕುಮಾರ್ ಶೆಟ್ಟಿ ನೆರವೇರಿಸಿದರು. ಕಾಲೇಜಿನ ನೂತನ ಗವರ್ನಿಂಗ್ ಕೌನ್ಸಿಲ್ ಸದಸ್ಯರಾದ ಉದ್ಯಮಿ ಹುಂತ್ರಿಕೆ ಸುಧಾಕರ್ ಶೆಟ್ಟಿ ಹಾಗೂ ನಿವೃತ್ತ ಯೋಧ ಶ್ರೀ ಗಣಪತಿ ಖಾರ್ವಿ ಬಸ್ರೂರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ, ಉಪಪ್ರಾಂಶುಪಾಲ ಶ್ರೀ ಚೇತನ್ ಶೆಟ್ಟಿ ಕೋವಾಡಿ, ಎನ್.ಸಿ .ಸಿ. ಅಧಿಕಾರಿ ಶಿವರಾಜ್. ಸಿ. ನಾವುಂದ ಉಪಸ್ಥಿತರಿದ್ದರು .ಕಾಲೇಜಿನ ಎನ್ಎಸ್ಎಸ್ ಸಹ ಯೋಜನಾಧಿಕಾರಿ ಉಪನ್ಯಾಸಕಿ ಶ್ರೀಮತಿ ರೇಶ್ಮಾ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಎನ್.ಸಿ. ಸಿ. ಘಟಕದ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ಆಯೋಜಿಸಲಾಗಿತ್ತು.