ವಂಡ್ಸೆ( ಮೇ,10): ಶ್ರೀ ಬ್ರಹ್ಮ ಮತ್ತು ಯಕ್ಷಿ ಸಹಪರಿವಾರ ದೇವಸ್ಥಾನ ಪಡೂರು, ಭಟ್ರಮಕ್ಕಿ ಇದರ ಅಷ್ಟಬಂಧ ಪುನ:ಪ್ರತಿಷ್ಠೆ ಮೇ7 ಹಾಗೂ 8 ರಂದು ನಡೆಯಿತು. ಅರ್ಚಕರಾದ ಪ್ರಶಾಂತ್ ಭಟ್ ರವರ ನೇತೃತ್ವದಲ್ಲಿ ಅಷ್ಟಬಂಧ ಪುನ:ಪ್ರತಿಷ್ಠೆಯ ಧಾರ್ಮಿಕ ವಿಧಿ -ವಿಧಾನಗಳು ನೇರವೇರಿತು. ಧಾರ್ಮಿಕ ಸಭಾ ಕಾರ್ಯಕ್ರಮ ನೆಂಪು ಸೀತಾರಾಮ ಶೆಟ್ಟಿ ವೇದಿಕೆಯಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಬಹಳ ಅರ್ಥಪೂರ್ಣವಾಗಿ ನಡೆಯಿತು.
ಶ್ರೀ ಬ್ರಹ್ಮ ಮತ್ತು ಯಕ್ಷಿ ಸಹಪರಿವಾರ ದೇವಸ್ಥಾನದ ಗೌರವಾಧ್ಯಕ್ಷರಾದ ಶೀನ ಗಾಣಿಗ ಚೂಡಿಕಟ್ಟೆ ಹಾಗೂ ನರಸಂಹ ನಾಯ್ಕ ಹೊಸಟ್ಟಿ ಅಧ್ಯಕ್ಷರಾದ ರವಿ ಗಾಣಿಗ ಹಾಗೂ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನೆಂಪು ರವರು ಈ ಧಾರ್ಮಿಕ ಕಾರ್ಯಕ್ರಮದ ಮಂದಾಳತ್ವವನ್ನು ವಹಿಸಿದ್ದರು.ಗ್ರಾಮಸ್ಥರು ಹಾಗೂ ವಿನಾಯಕ ಯುವಕ ಸಂಘ(ರಿ). ನೆಂಪು ಇದರ ಸ್ವಯಂಸೇವಕರು ಕಾರ್ಯಕ್ರಮದಲ್ಲಿ ಸ್ವಯಂ ಸೇವಕರಾಗಿ ಸಕ್ರಿಯವಾಗಿ ಭಾಗವಹಿಸಿದರು.