ಕುಂದಾಪುರ(ಜು,19): ನೂತನವಾಗಿ ರಾಜ್ಯಸಭೆ ಸದಸ್ಯರಾಗಿ ನಾಮನಿರ್ದೇಶನಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಬೈಂದೂರು ಶಾಸಕರಾದ ಶ್ರೀ ಬಿ.ಎಂ .ಸುಕುಮಾರ ಶೆಟ್ಟಿಯವರು ಧರ್ಮಸ್ಥಳದಲ್ಲಿ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು.
ಕ್ಷೇತ್ರದ ಅಭಿವೃದ್ಧಿ ಕೆಲಸಗಳನ್ನು ಗುರುತಿಸಿ ದೇಶವ್ಯಾಪಿ ಹಲವು ಜನಪರ ಯೋಜನೆಗಳನ್ನು ವಿಸ್ತರಿಸಲು ಇದೀಗ ಅನುವು ಮಾಡಿಕೊಟ್ಟ ಬಗ್ಗೆ ಹರ್ಷ ವ್ಯಕ್ತಪಡಿಸಿದರು.