ಕೋಟೇಶ್ವರ( ನ.13): ಬೆಂಗಳೂರು ಖಾಸಗಿ ಸಾಫ್ಟವೇರ್ ಕಂಪೆನಿಯ ಉದ್ಯೋಗಿ, ಗೋಪಾಡಿ ನಿವಾಸಿ ಸುಶ್ಮಿತಾ ಮೆಂಡನ್ ರವರು
ಕನ್ನಡ ಚಿತ್ರರಂಗದ ಮಹಾನ್ ಕಲಾವಿದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಚಿತ್ರ , ವನ್ಯಜೀವಿ ಸಂಕುಲ,ಪ್ರಾಕೃತಿಕ ವೈಶಿಷ್ಟ್ಯದ ಕುರಿತು ತಿಳಿಸುವ ಹಾಗೂ ಪ್ಲಾಸ್ಟಿಕ್ ಬಳಕೆಯಿಂದ ಆಗುವ ದುಷ್ಪರಿಣಾಮ ಕುರಿತು ಸಂದೇಶ ಸಾರುವ ಗಂಧದ ಗುಡಿ ಚಲನಚಿತ್ರ ವೀಕ್ಷಣೆಯನ್ನು ಪಡು ಗೋಪಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಕೋಟೇಶ್ವರದ ಭಾರತ್ ಸಿನೆಮಾಸ್ ಚಿತ್ರಮಂದಿರದಲ್ಲಿ ಏರ್ಪಡಿಸಿದರು.
ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳೊಂದಿಗೆ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀನಿವಾಸ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಸುರೇಂದ್ರ ಕಾಂಚನ್ ಸಂಗಮ್, ಕಂಪ್ಯೂಟರ್ ಸಹ ಶಿಕ್ಷಕಿ ಕವಿತಾ, ಅಡುಗೆ ಮೇಲ್ವಿಚಾರಕಿ ಪ್ರೇಮ, ಪೋಷಕರಾದ ದಿನೇಶ್ ಮೆಂಡನ್, ಸಂತೋಷ್ ಗೋಪಾಡಿ ಪಡು, ಸಂದೀಪ್, ದೇವಕಿ, ಸುಮಿತ್ರ, ಜ್ಯೋತಿ,ಸೀತಾ ಮತ್ತು ಹಿರಿಯಣ್ಣ ಉಪಸ್ಥಿತರಿದ್ದರು.
ಗಂಧದ ಗುಡಿ ಸಿನಿಮಾ ನೋಡಲು ಮಕ್ಕಳಿಗೆ ಅವಕಾಶ ಕಲ್ಪಿಸಿದ ಸುಶ್ಮಿತಾ ಮೆಂಡನ್ ರವರಿಗೆ ಶಾಲೆಯ ಮುಖ್ಯೋಪಾಧ್ಯಾಯರು ,ಶಿಕ್ಷಕ ವ್ರoದ,ಶಾಲಾ ಅಭಿವೃದ್ಧಿ ಸಮಿತಿ ಮತ್ತು,ಮಕ್ಕಳ ಪೋಷಕರ ಪರವಾಗಿ ಧನ್ಯವಾದ ಸಲ್ಲಿಸಲಾಯಿತು.
ವರದಿ : ಸುರೇಂದ್ರ ಕಾಂಚನ್ ಸಂಗಮ್