ಕುಂದಾಪುರ(ಜ.20): ಕುಂದಾಪುರ ಎಜ್ಯಕೇಷನ್ ಸೊಸೈಟಿ(ರಿ.) ಪ್ರವರ್ತಿತ ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಶಾಲೆಗಳ ಪ್ರಾಥಮಿಕ ವಿಭಾಗದ 3ನೇ ತರಗತಿಯ ವಿದ್ಯಾರ್ಥಿನಿ ವಿಹಾನಿ ಎ.ಶೆಟ್ಟಿಗಾರ್, ಉಡುಪಿಯ ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣಮಠ, ರಾಜಮಾತೆ ಅಹಲ್ಯಾಬಾಯಿ ಹೋಳ್ಕರ್ ಜನ್ಮತ್ರಿಶತಾಬ್ದಿ ಆಚರಣಾ ಮಹೋತ್ಸವ ಸಮಿತಿ ಹಾಗೂ ಪದ್ಮಶಾಲಿ ನೇಕಾರ ಪ್ರತಿಷ್ಠಾನ(ರಿ.) ವತಿಯಿಂದ ಉಡುಪಿಯ ಶ್ರೀ ಕೃಷ್ಣ ರಾಜಾಂಗಣದಲ್ಲಿ ಹಮ್ಮಿಕೊಂಡ ಕಿರಿಯರ ವಿಭಾಗದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ಈ ಪ್ರತಿಭೆಯನ್ನು ಸಂಸ್ಥೆಯ […]
Author: KundaVahini Editor
ಶ್ರೀ ಚೆನ್ನಬಸವೇಶ್ವರ ಯುವಕ ಮಂಡಲ: ಸುವರ್ಣ ಸಂಗಮ ಸಂಪನ್ನ
ನಾಯಕವಾಡಿ (ಜ,22) : ಸಂಸ್ಕಾರ ಭರಿತ ಸೃಜನಶೀಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ನೀಡಲು ಖಂಡಿತ ಸಾಧ್ಯವಿದೆ . ಅದಕ್ಕೆ ತಕ್ಕ ಇಚ್ಚಾ ಶಕ್ತಿಯನ್ನು ನಾವು ಅಳವಡಿಸಿಕೊಳ್ಳಬೇಕು ಎಂದು ಸಕಲೇಶಪುರದ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಅವರು ಅಭಿಪ್ರಾಯಪಟ್ಟರು. ಅವರು ನಾಯಕವಾಡಿ ಗುಜ್ಜಾಡಿಯ ಶ್ರೀ ಚೆನ್ನಬಸವೇಶ್ವರ ಯುವಕ ಮಂಡಲದ ಸುವರ್ಣ ಸಂಗಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡಿದರು. ಬೈಂದೂರು ವಿಧಾನಸಭಾ ಕ್ಷೇತ್ರದ […]
ಶ್ರೀ ಚೆನ್ನಬಸವೇಶ್ವರ ಯುವಕ ಮಂಡಲ ನಾಯಕವಾಡಿ ಗುಜ್ಜಾಡಿ: ಗಾನ ಸಂಭ್ರಮ
ಗಂಗೊಳ್ಳಿ (ಜ,20): ಶ್ರೀ ಚೆನ್ನಬಸವೇಶ್ವರ ಯುವಕ ಮಂಡಲ ನಾಯಕವಾಡಿ ಗುಜ್ಜಾಡಿಯ ಸುವರ್ಣ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಅಂತರ್ ಜಿಲ್ಲಾ ಮಟ್ಟದ ಕರೋಕೆ ಟ್ರ್ಯಾಕ್ ಗೀತ ಗಾಯನ ಸ್ಪರ್ಧೆ ಗಾನ ಸಂಭ್ರಮ 2025 ರ ಫೈನಲ್ ಸ್ಪರ್ಧೆ ಇತ್ತೀಚೆಗೆ ಸುವರ್ಣ ಸಂಗಮ ವೇದಿಕೆಯಲ್ಲಿ ನಡೆಯಿತು. ಸರಿಗಮಪ ಖ್ಯಾತಿಯ ಗಾಯಕರಾದ ಕಂಬದ ರಂಗಯ್ಯ, ಮತ್ತು ಪ್ರಥ್ವಿ ಭಟ್ ಹಾಗು ಸ್ಟಾರ್ ಸಿಂಗರ್ ಖ್ಯಾತಿಯ ವಿನುಷ್ ಭಾರದ್ವಾಜ್ ತೀರ್ಪುಗಾರರಾಗಿ ಭಾಗವಹಿಸಿದ್ದರು. ಸರಿಗಮಪ ಖ್ಯಾತಿಯ ಗಾಯಕರಾದ […]
ಜ್ಞಾನಸುಧಾದಲ್ಲಿ ಕಂಪೆನಿ ಸೆಕ್ರೇಟರಿ ಪ್ರವೇಶ ಪರೀಕ್ಷಾ ಸಾಧಕರಿಗೆ ಸನ್ಮಾನ
ಕಾರ್ಕಳ(ಜ,23): ಇನ್ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೇಟರೀಸ್ ಇನ್ ಇಂಡಿಯಾ ಅವರು ನಡೆಸಿದ ಸಿ.ಎಸ್.ಇ.ಇ.ಟಿ(ಕಂಪೆನಿ ಸೆಕ್ರೇಟರಿ ಎಕ್ಸಿಕ್ಯೂಟಿವ್ ಎಂಟ್ರೆನ್ಸ್ ಟೆಸ್ಟ್) ಪರೀಕ್ಷೆಯಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳೊoದಿಗೆ ತೇರ್ಗಡೆ ಹೊಂದಿದ್ದು, ಸಾಧಕ 28 ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಉಡುಪಿಯ ಸಿ.ಎ ಮಹೇಂದ್ರ ಶೆಣೈ ಪಿ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಕಂಪೆನಿ ಸೆಕ್ರೇಟರಿ, ಚಾರ್ಟೆಂಟ್ ಅಕೌಂಟೆನ್ಸ್ನ ಅವಕಾಶಗಳ ಬಗ್ಗೆ ಹೇಳಿದರು. ಕಾರ್ಯಕ್ರಮದಲ್ಲಿ […]
ಪ್ರಾದೇಶಿಕ ಭಿನ್ನತೆಯನ್ನು ಮೀರಿ ಸಮುದಾಯದ ಸಾಮರಸ್ಯ ಗಟ್ಟಿಗೊಳ್ಳಲಿ:- ಶ್ರೀ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ
ಮಡಗಾವ್ (ಜ.19): ತುಳು, ಕನ್ನಡ ಎನ್ನುವ ಭಾಷಿಕವಾದ ಒಳ ಬಿನ್ನತೆ ಸಂಘಟನೆಯಲ್ಲಿ ಬರಬಾರದು. ಎಲ್ಲರೂ ಒಂದಾಗಿ ಕೆಲಸ ಮಾಡಬೇಕು. ಪ್ರಾದೇಶಿಕ ಭಿನ್ನತೆಯನ್ನು ಮೀರಿ ಬಂಟ ಸಮುದಾಯದ ಹಾಗೂ ಸಮಾಜದ ಶ್ರೇಯೋಭಿವೃದ್ಧಿಗಾಗಿ ಎಲ್ಲರೂ ಶ್ರಮಿಸಬೇಕು ಎಂದು ಶ್ರೀ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಗೋವಾದ ಲಕ್ಷ್ಮಿ ಎಂಪೈರ್ ಹೋಟೆಲ್ ನಲ್ಲಿ ಜನವರಿ 19 ರಂದು ಆಯೋಜಿಸಿದ ಗೋವಾ ಬಂಟರ ಸಂಘದ ರಜತ ಸಂಭ್ರಮ ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿ ಮಾತನಾಡಿದರು. […]
ಐಎಂಜೆ ಕಾಲೇಜು :ಪ್ಲೇಸ್ ಮೆಂಟ್ ತರಭೇತಿ ಕಾರ್ಯಗಾರ
ಕುಂದಾಪುರ(ಜ.21): ಇಲ್ಲಿನ ಮೂಡ್ಲಕಟ್ಟೆ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯ ಟ್ರೈನಿಂಗ್ ಅಂಡ್ ಪ್ಲೇಸ್ಮೆಂಟ್ ವಿಭಾಗದ ವತಿಯಿಂದ ಕೋಡ್ ಲ್ಯಾಬ್ ಸಿಸ್ಟಮ್ ಮಂಗಳೂರು ಇವರ ಸಹಯೋಗದೊಂದಿಗೆ ಯು.ಐ/ ಯು. ಎಕ್ಸ್ ಅಭಿವೃದ್ದಿ ರಿಯಾಕ್ಟ್ ಜಾವಾ ಸ್ಕ್ರಿಪ್ಟ್ ವಿಷಯದ ಕುರಿತು ಒಂದು ವಾರದ ತರಬೇತಿ ಕಾರ್ಯಗಾರ ನಡೆಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರತಿಭಾ ಎಂ ಪಟೇಲ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತ, ಆಧುನಿಕ ಐ.ಟಿ ಔದ್ಯೋಗಿಕ ಕ್ಷೇತ್ರದಲ್ಲಿ […]
ಶ್ರೀ ಗಣೇಶ ಮೊಗವೀರರಿಗೆ ಸರ್ದಾರ್ ಪಟೇಲ್ ಯುನಿಟಿ ಅವಾರ್ಡ್ಸ್
ಕುಂದಾಪುರ(ಜ.23): ಪ್ರತಿಷ್ಠಿತ ಟೊಪ್ನೆಟೆಕ್ ಫೌಂಡೇಷನ್ ಕೊಡಮಾಡುವ ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಸರ್ದಾರ್ ಪಟೇಲ್ ಯುನಿಟಿ ಅವಾರ್ಡ್ಸ್ 2025-“ಶಿಕ್ಷಣ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಅತ್ಯಂತ ಸ್ಪೂರ್ತಿದಾಯಕ ವ್ಯಕ್ತಿತ್ವ” ಈ ಪ್ರಶಸ್ತಿಗೆ ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು ಹಾಗೂ ಜನತಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಗಣೇಶ ಮೊಗವೀರರವರು ಆಯ್ಕೆಯಾಗಿದ್ದಾರೆ. ಶ್ರೀಯುತರು ಇದುವರೆಗೆ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಹಾಗೂ ಸೇವೆಯನ್ನು ಪರಿಗಣಿಸಿ ಆಯ್ಕೆ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಲಾಗಿದ್ದು, ಏಪ್ರಿಲ್ […]
ಕ್ರಿಯೇಟಿವ್ ಪಿ ಯು ಕಾಲೇಜಿನಲ್ಲಿ ‘ನಮ್ಮ ಸಂವಿಧಾನ -ನಮ್ಮ ಹೆಮ್ಮೆ’- ವಿಶೇಷ ಸಂವಾದ ಕಾರ್ಯಕ್ರಮ ಮತ್ತು ಚಿತ್ರೀಕರಣ
ಕಾರ್ಕಳ ( ಜ.21): ಕ್ರಿಯೇಟಿವ್ ಪದವಿ ಪೂರ್ವ ಕಾಲೇಜು ಕಾರ್ಕಳ ಮತ್ತು ವಾರ್ತಾಭಾರತಿ ಡಿಜಿಟಲ್ ಚಾನಲ್ ಇವರ ಸಹಯೋಗದೊಂದಿಗೆ ಗಣರಾಜ್ಯೋತ್ಸವದ ಪ್ರಯುಕ್ತ ನಡೆಸುವ ‘ನಮ್ಮ ಸಂವಿಧಾನ – ನಮ್ಮ ಹೆಮ್ಮೆ’ ವಿಶೇಷ ಸಂವಾದ ಕಾರ್ಯಕ್ರಮ ಮತ್ತು ಚಿತ್ರೀಕರಣ ಜನವರಿ 20 ರಂದು ಕ್ರಿಯೇಟಿವ್ ‘ಚಿಂತಕರ ಚಾವಡಿ’ ಸಪ್ತಗಿರಿ ಕ್ಯಾಂಪಸ್ ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸಂವಾದಕರಾಗಿ ನಿವೃತ್ತ ಪ್ರಾಧ್ಯಾಪಕರು ಹಾಗೂ ಖ್ಯಾತವಾಗ್ಮಿಗಳು ಶ್ರೀ ಸುರೇಂದ್ರ ಶೆಟ್ಟಿ ಕೊಕ್ಕರ್ಣೆ ಭಾಗವಹಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದವನ್ನು […]
ಆಲ್ ಇಂಡಿಯಾ ಚೆಸ್ ಟೂರ್ನಮೆಂಟ್ – ಶ್ರಾವ್ಯ ದ್ವಿತೀಯ ಸ್ಥಾನ
ಕುಂದಾಪುರ(ಜ.21): ಕುಂದಾಪುರ ಎಜ್ಯುಕೇಶನ್ ಸೊಸೈಟಿ (ರಿ.) ಪ್ರವರ್ತಿತ ಎಚ್. ಎಮ್. ಎಮ್. ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ. ಕೆ. ಆರ್. ಆಚಾರ್ಯ ಸ್ಮಾರಕ ಪ್ರೌಢ ಶಾಲೆಗಳ 9ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಶ್ರಾವ್ಯ ಎ. ಪಿ. ಇವಳು ಕಶ್ವಿ ಚೆಸ್ ಸ್ಕೂಲ್ ಕುಂದಾಪುರ ಇವರು ಆಯೋಜಿಸಿದ ಯುವ ಆಲ್ ಇಂಡಿಯಾ ಫ್ಲಡ್ ಲೈಟ್ – 2025ರ ಒಪನ್ ರಾಪಿಡ್ ಚೆಸ್ ಟೂರ್ನಮೆಂಟ್ ನ 15ರ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ […]
ಗಂಗೊಳ್ಳಿ : ಅಜಿತ್ ಕುಮಾರ ಅವರ ಪುಣ್ಯತಿಥಿ -‘ಸೇವಾ ದಿನಾಚರಣೆ’
ಗಂಗೊಳ್ಳಿ(ಜ.21): ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ, ಪ್ರೀತಿ, ಶಿಸ್ತು ಇರಬೇಕು. ರಾಮಾಯಣ, ಮಹಾಭಾರತ ಹಾಗೂ ಪುರಾಣ ಮತ್ತು ಗ್ರಂಥಗಳಲ್ಲಿ ಅಡಕವಾಗಿ ಅನೇಕ ವಿಷಯಗಳು ಇಂದಿನ ಮಕ್ಕಳಿಗೆ ತಿಳಿದಿಲ್ಲ. ಪಠ್ಯ ಪುಸ್ತಕದಲ್ಲಿ ಇರುವ ವಿಷಯಗಳನ್ನು ಮಾತ್ರ ಮಕ್ಕಳಿಗೆ ಹೇಳಲಾಗುತ್ತಿದೆ. ಇದರಿಂದ ನಮ್ಮ ಇತಿಹಾಸ ನಮ್ಮ ಮಕ್ಕಳಿಗೆ ತಿಳಿಯುತ್ತಿಲ್ಲ. ಹೀಗಾಗಿ ಪುರಾಣಗಳನ್ನು, ಧಾರ್ಮಿಕ ಗ್ರಂಥಗಳನ್ನು ಪಠಣ ಮಾಡಬೇಕು. ಮುಂದಿನ ಪೀಳಿಗೆಗೆ ದಾರಿದೀಪವಾಗಬೇಕು ಎಂದು ಮಹಾಬಲೇಶ್ವರ ಐತಾಳ್ ಉಪ್ಪುಂದ ಹೇಳಿದರು. ಸೇವಾ ಸಂಗಮ ನಿವೇದಿತಾ […]