ಕುಂದಾಪುರ(ಸೆ.05): ಪದವಿ ಪೂರ್ವ ಕಾಲೇಜುಗಳ ಜಿಲ್ಲಾಮಟ್ಟದ ಟೇಬಲ್ ಟೆನಿಸ್ ಪಂದ್ಯಾವಳಿಯಲ್ಲಿ ಆರ್. ಎನ್. ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದಿದೆ. ರಾಜ್ಯಮಟ್ಟಕ್ಕೆ ಆಯ್ಕೆಯಾದ ಟೇಬಲ್ ಟೆನಿಸ್ ತಂಡದ ವಿದ್ಯಾರ್ಥಿನಿಯರಾದ ವಿಜ್ಞಾನ ವಿಭಾಗದ ಕ್ಷಮಾ ಗೌತಮ್, ಅಂಕಿತಾ ಹಾಗೂ ವಾಣಿಜ್ಯ ವಿಭಾಗದ ದೀಪ್ತಿಯವರಿಗೆ ಕಾಲೇಜಿನ ಸಂಚಾಲಕರಾದ ಶ್ರೀ ಬಿ.ಎಮ್.ಸುಕುಮಾರ್ ಶೆಟ್ಟಿಯವರು, ಆಡಳಿತ ಮಂಡಳಿ ಸದಸ್ಯರು, ಪ್ರಾಂಶುಪಾಲರು, ಉಪಪ್ರಾಂಶುಪಾಲರು ಹಾಗೂ ಬೋಧಕ ಬೋಧಕೇತರ ಸಿಬ್ಬಂಧಿಗಳು ಅಭಿನಂದನೆ […]
Author: KundaVahini Editor
‘ಸಂವಿಧಾನಾತ್ಮಕ ಮೌಲ್ಯಗಳು’: ರಾಜ್ಯ ಪಠ್ಯಕ್ರಮದ ಕಾರ್ಯಾಗಾರ
ಮೂಡುಬಿದಿರೆ(ಸೆ04): ‘ಸಂವಿಧಾನಾತ್ಮಕ ಮೌಲ್ಯಗಳು’ ರಾಜ್ಯ ಪಠ್ಯಕ್ರಮದ ಕಾರ್ಯಾಗಾರವು ಇಲ್ಲಿನ ಶ್ರೀ ದವಳ ಕಾಲೇಜಿನಲ್ಲಿ ಸೆ. 2ರಂದು ನಡೆಯಿತು. ಶ್ರೀ ಧವಳ ಕಾಲೇಜು ಮತ್ತು ಮಂಗಳೂರು ವಿ.ವಿ. ರಾಜ್ಯಶಾಸ್ತ್ರ ಶಿಕ್ಷಕರ ಸಂಘದ ಸಂಯುಕ್ತ ಆಶ್ರಯದಲ್ಲಿ ಶ್ರೀ ದವಳ ಕಾಲೇಜಿನ ಕಾನ್ಫರೆನ್ಸ್ ಹಾಲಿನಲ್ಲಿ ನಡೆದ ಕಾರ್ಯಾಗಾರವನ್ನು ಉದ್ಘಾಟಿಸಿದ ಡಿ ಜೆ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಅಭಿಜಿತ್ ಎಂ. ಅವರು ಮಾತನಾಡಿ ಸಂವಿಧಾನಾತ್ಮಕ ಮೌಲ್ಯಗಳು ಪ್ರತಿಯೊಬ್ಬನಿಗೆ ಕೂಡ ಬಹಳ ಅಗತ್ಯವಾದ ವಿಚಾರವಾಗಿದ್ದು ಸಾಮಾಜಿಕವಾಗಿ ಅದು […]
ಎಚ್ ಎಮ್ ಎಮ್ ಮತ್ತು ವಿ ಕೆ ಆರ್ ಶಾಲೆಗೆ ಖ್ಯಾತ ವಕೀಲೆ ಅಂಜಲಿ ರಾಮಣ್ಣ ಭೇಟಿ
ಕುಂದಾಪುರ (ಸೆ.2) : ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್ ಎಮ್ ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ ಕೆ ಆರ್ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗಳಲ್ಲಿ ಇಂದು ವಿದ್ಯಾರ್ಥಿಗಳಿಗಾಗಿ ” ಮಕ್ಕಳು ಮತ್ತು ಕಾನೂನಿನ ಅರಿವು “ ಎಂಬ ವಿಷಯದ ಆಧಾರದ ಮೇಲೆ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಾಗಾರ ನಡೆಯಿತು. ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಖ್ಯಾತ ವಕೀಲೆ, ಲೇಖಕಿ, ಅಂಕಣಗಾರ್ತಿ, ಜೀವನ ಕೌಶಲ್ಯ ತರಬೇತುದಾರೆ ಹಾಗೂ […]
ಬಿ. ಬಿ. ಹೆಗ್ಡೆ ಕಾಲೇಜು: ಎನ್.ಎಸ್.ಎಸ್. ಯುವಜನೋತ್ಸವದಲ್ಲಿ ಸುಜಯ್ ಶೆಟ್ಟಿಗೆ ಪ್ರಶಸ್ತಿ
ಕುಂದಾಪುರ (ಆ, 31): ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ಆಗಸ್ಟ್ 27ರಿಂದ 31ರವರೆಗೆ ನಡೆದ ರಾಜ್ಯಮಟ್ಟದ ಎನ್.ಎಸ್.ಎಸ್. ಯುವಜನೋತ್ಸವದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ತಂಡವನ್ನು ಪ್ರತಿನಿಧಿಸಿದ ಕುಂದಾಪುರದ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ಸ್ವಯಂಸೇವಕ ಸುಜಯ್ ಶೆಟ್ಟಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ವೈಯಕ್ತಿಕವಾಗಿ ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ, ಗುಂಪು ಸ್ಪರ್ಧೆಯಲ್ಲಿ ಪ್ರಹಸನ ಮತ್ತು ಸಮೂಹಗಾನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. 21 ವಿಶ್ವವಿದ್ಯಾನಿಲಯಗಳು […]
ಮೂಡ್ಲಕಟ್ಟೆ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆ
ಕುಂದಾಪುರ (ಸೆ ,04): ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜು ಮಂಗಳೂರು, ಇವರು ಆಗಸ್ಟ್ ,31 ರಂದು ಆಯೋಜಿಸಿದ ರಾಷ್ಟ್ರಮಟ್ಟದ ಐಟಿ ಮತ್ತು ಕಲ್ಚರಲ್ ಫೆಸ್ಟ್ ‘ಟೆಕ್ನೋ ಕಾರ್ಟ್ಸ್ ಜೋಶಿಯಾನ 13.0’ ಕಾರ್ಯಕ್ರಮದಲ್ಲಿ ಮೂಡ್ಲಕಟ್ಟೆ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿ, ಐಟಿ ವೆಬ್ ಡಿಸೈನ್ ಸ್ಪರ್ಧೆಯಲ್ಲಿ ಅಂತಿಮ ಬಿಸಿಎ ವಿದ್ಯಾರ್ಥಿಗಳಾದ ರೋಹನ್ ಮತ್ತು ನಿತಿನ್ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ ಹಾಗೂ ಐಟಿ ಕ್ವಿಜ್ ಸ್ಪರ್ಧೆಯಲ್ಲಿ ಅಂತಿಮ […]
ಬ್ಯಾರಿಸ್ ಪ್ರಥಮ ದರ್ಜೆ ಕಾಲೇಜು ಕೋಡಿ : ಯುವ ರೆಡ್ ಕ್ರಾಸ್ ಘಟಕ ಉದ್ಘಾಟನೆ
ಕುಂದಾಪುರ( ಸೆ: 3): ಬ್ಯಾರಿಸ್ ಪ್ರಥಮ ದರ್ಜೆ ಕಾಲೇಜು ಕೋಡಿ ಕುಂದಾಪುರ ಮತ್ತು ಭಾರತೀಯ ರೆಡ್ ಕ್ರಾಸ್ ಸೊಸೈಟಿ ಕುಂದಾಪುರದ ಸಹಯೋಗದೊಂದಿಗೆ ಯುವ ರೆಡ್ ಕ್ರಾಸ್ ಘಟಕದ ಉದ್ಘಾಟನೆ ನೆರವೇರಿತು. ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರದ ಅಧ್ಯಕ್ಷರಾದ ಶ್ರೀಯುತ ಜಯಕರ್ ಶೆಟ್ಟಿಯವರು ಉದ್ಘಾಟಿಸಿ, ‘ಪ್ರತಿಯೊಂದು ಕಾಲೇಜುಗಳಲ್ಲಿ ಯುವ ರೆಡ್ ಕ್ರಾಸ್ ಘಟಕಗಳು ಪ್ರಾರಂಭಗೊಳ್ಳಬೇಕು. ಮಾನವೀಯತೆಯ ನೆಲೆಯಲ್ಲಿ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು. ಯಾವುದೇ ಜಾತಿ, ಮತ, ಧರ್ಮ ಭೇದವಿಲ್ಲದೆ ಯಾರು […]
ರಾಮಕೃಷ್ಣ ಬಿ.ಜಿ.ಯವರಿಗೆ ಉತ್ತಮ ಪ್ರಾಚಾರ್ಯ ರಾಜ್ಯ ಪ್ರಶಸ್ತಿ
ಕುಂದಾಪುರ (ಸೆ. 04): 2024-25ನೇ ಸಾಲಿನ ಉತ್ತಮ ಪ್ರಾಚಾರ್ಯ ರಾಜ್ಯ ಪ್ರಶಸ್ತಿಗೆ ಕುಂದಾಪುರದ ಪ್ರತಿಷ್ಠಿತ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ರಾಮಕೃಷ್ಣ ಬಿ.ಜಿ.ಯವರು ಭಾಜನರಾಗಿದ್ದಾರೆ. ಇವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬೆಳೆಯೂರಿನ ಶ್ರೀ ಗಣಪತಿ ಬಿ.ಆರ್. ಹಾಗೂ ಶ್ರೀಮತಿ ಜಯಲಕ್ಷ್ಮಿಯವರ ಪುತ್ರ. ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಬೆಳೆಯೂರಿನಲ್ಲಿ, ಪದವಿ ಮತ್ತು ಸ್ನಾತಕೋತ್ತರ ಅಧ್ಯಯನವನ್ನು ಮೈಸೂರು ವಿಶ್ವವಿದ್ಯಾಲಯದಿಂದ ಪಡೆದರು. ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಪ್ರಥಮ […]
ಶ್ರೀ ಕೃಷ್ಣ ಜನ್ಮಾಷ್ಠಮಿ: ಎಲ್ ಕೆ ಜಿ ವಿದ್ಯಾರ್ಥಿನಿಯಿಂದ ಕಾರ್ಯಕ್ರಮ ಉದ್ಘಾಟನೆ
ಹೈಕಾಡಿ( ಸೆ,01): ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೈಕಾಡಿ ಮತ್ತು ಸ್ಮಾರ್ಟ್ ಕ್ರೀಯೇಶನ್ಸ್ ಎಜ್ಯುಕೇಶನ್ ಟ್ರಸ್ಟ್(ರಿ) ಹೈಕಾಡಿ ಇವರ ಸಹಭಾಗಿತ್ವದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಕೃಷ್ಣ ವೇಶ ಸ್ಪರ್ಧೆಆಗಸ್ಟ್ 23 ರ ಶುಕ್ರವಾರ ಹೈಕಾಡಿಯ ಶಾಲೆಯ ಸಭಾಂಗಣದಲ್ಲಿ ನಡೆಯಿತು. ಶಾಲೆಯ ಎಲ್ ಕೆ ಜಿ ಮತ್ತು ಯುಕೆಜಿ ಎಲ್ಲಾ ವಿದ್ಯಾರ್ಥಿಗಳ ಹೆಸರನ್ನು ಬರೆದು ಶಾಲೆಯ ವಿದ್ಯಾರ್ಥಿ ನಾಯಕ ಶ್ರೇಯಸ್ ಚೀಟಿ ಎತ್ತುವುದರ ಮೂಲಕ ಆಯ್ಕೆ ಮಾಡಿದ ಕುಮಾರಿ ಐಝಾ […]
ಹೆಮ್ಮಾಡಿ: ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಸಂಪನ್ನ
ಹೆಮ್ಮಾಡಿ (ಸ.01): ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ ಹೆಮ್ಮಾಡಿ ಘಟಕ,ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ.) ಅಂಬಲಪಾಡಿ, ಉಡುಪಿ ಇವರ ನೇತೃತ್ವದಲ್ಲಿ ರಕ್ತನಿಧಿ ವಿಭಾಗ ಮಣಿಪಾಲ ಹಾಗೂ ಜಿಲ್ಲಾಡಳಿತ ಉಡುಪಿ ಇವರ ಸಹಯೋಗದೊಂದಿಗೆ ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ(ನಿ.) ಹೆಮ್ಮಾಡಿ,ಬಗ್ವಾಡಿ ಹೋಬಳಿ ಮೊಗವೀರ ಸ್ತ್ರೀ ಶಕ್ತಿ, ಇತರೆ ಸಹಕಾರಿ ಸಂಘಗಳ ನೌಕರರ ಒಕ್ಕೂಟ(ರಿ.)ಕುಂದಾಪುರ. ಲಯನ್ಸ್ ಕ್ಲಬ್ ನಾವುಂದ ಮಹಾವಿಷ್ಣು ಯುವಕ ಮಂಡಲ(ರಿ.) ಹರೆಗೋಡು, ಮಾನಸ ಯುವತಿ […]
ಮೂಡ್ಲಕಟ್ಟೆ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆ:ರಾಷ್ಟ್ರೀಯ ಕ್ರೀಡಾ ದಿನಾಚರಣೆ
ಮೂಡ್ಲಕಟ್ಟೆ (ಆ.29) : ಇಲ್ಲಿನ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯಲ್ಲಿ ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಯಿತು. ಮೇಜರ್ ಧ್ಯಾನ್ ಚಂದ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯುದರ ಮೂಲಕ ಕಾರ್ಯಕ್ರಮ ಪ್ರಾರಂಭಗೊಂಡಿತು. ಕುಂದಾಪುರದ ಪ್ರಸಿದ್ಧ ಏರೋಬಿಕ್ಸ್ ಟ್ರೈನರ್ ಶ್ರೀಮತಿ ರೇವತಿ ಡಿ. ಯವರು ವಿದ್ಯಾರ್ಥಿಗಳಿಗೆ ಏರೋಬಿಕ್ಸ್ ನ್ನು ಪ್ರಾಯೋಗಿಕವಾಗಿ ಮಾಡಿಸುವುದರ ಜೊತೆಗೆ ಅದರ ಪ್ರಯೋಜನವನ್ನು ಮತ್ತು ಸರಿಯಾಗಿ ಮಾಡುವ ಕ್ರಮಗಳನ್ನು ತಿಳಿಸಿಕೊಟ್ಟರು. ಇದೆ ಸಂದರ್ಭದಲ್ಲಿ ಕಾರ್ಯಕ್ರಮದ ಇನ್ನೊಂದು ಭಾಗವಾಗಿ ವಿದ್ಯಾರ್ಥಿಗಳಿಗೆ ಪ್ರಬಂಧ […]