ವಂಡ್ಸೆ (ಜು, 8) : ಇತ್ತೀಚೆಗೆ ಬೈಕ್ ಅಪಘಾತಕ್ಕೆ ಒಳಗಾದ ಯಕ್ಷಗಾನ ಕಲಾವಿದ ಬಗ್ವಾಡಿಯ ಸುಬ್ರಹ್ಮಣ್ಯ ಮೊಗವೀರ ನ ಮನೆಗೆ ಬೈಂದೂರಿನ ಶಾಸಕರಾದ ಬಿ. ಎಂ. ಸುಕುಮಾರ ಶೆಟ್ಟಿಯವರು ಭೇಟಿ ನೀಡಿ ಸಾಂತ್ವನ ಹೇಳಿ ಧೈರ್ಯ ತುಂಬಿದರು. ಮೀನುಗಾರಿಕೆ ಇಲಾಖೆಯಿಂದ ಶೀಘ್ರವಾಗಿ ಮನೆ ನಿರ್ಮಿಸಿಕೊಡುವುದಾಗಿ ತಿಳಿಸಿ, ತಕ್ಷಣವೇ ಸಂಬಂಧಪಟ್ಟವರಿಗೆ ಶಾಸಕರು ಮಾತನಾಡಿದರು. ಜೊತೆಗೆ ಕಿರು ಮೊತ್ತದ ಆರ್ಥಿಕ ಸಹಾಯಧನ ನೀಡಿ ಧೈರ್ಯ ತುಂಬಿದ ಶಾಸಕರು ಮನೆ ನಿರ್ಮಿಸಲು ಬೇಕಾಗುವ ಹಂಚುಗಳನ್ನು […]
Author: KundaVahini Editor
ಹೆಣ್ಣು – ಮಣ್ಣು
ಇಡೀ ಭೂಮಂಡಲದಲ್ಲಿ ಸೃಷ್ಟಿಸುವ ಶಕ್ತಿ ಇರುವುದು ಹೆಣ್ಣಿಗೆ ….. ನಾನು ಅನ್ನುವ ಈ ಚರ್ಮದ ಹೊದಿಕೆಯ ದೇಹವು ಒಂದಲ್ಲ ಒಂದು ದಿನ ಸೇರಬೇಕು ಮಣ್ಣಿಗೆ….. ಜಗತ್ತು ಮಾಯಾಲೋಕದಂತೆ ಕಂಡಿರಬಹುವುದು ನಿನ್ನ ಕಣ್ಣಿಗೆ …… ಕೊನೆತನಕ ಚಿರಋಣಿಯಾಗಿರು ನಿನ್ನ ಸ್ರಷ್ಠಿಸಿದ ಹೆಣ್ಣಿಗೆ….. ತಾಯ್ನೆಲದ ಮಣ್ಣಿಗೆ ರಾಘವೇಂದ್ರ ಹಾರ್ಮಣ್ಇಡೂರು ಕುಂಜ್ಞಾಡಿ
ನೆನಪು
ಅದೆಷ್ಟೋ ರಾತ್ರಿ ನಿನ್ನ ನೆರಳ ಚಾದರ ಹೊದ್ದು ಮಲಗಿದ್ದೆ ನಾನು….ಕನಸು ಮಾರಿಕೊಂಡು ನಿನ್ನ ಸವಿನೆನಪ ಮೆರವಣಿಗೆಯಲ್ಲಿ….ಕಳೆದು ಹೋದ ಬಯಕೆಗಳ ಹುಡುಕಾಟದಲ್ಲಿ ಹುಟ್ಟಿದ ಭಾವನೆಗಳಿಗೆ ಲೆಕ್ಕವೇ ಇಲ್ಲ …ಚಾದರದ ಮುಸುಕಿನೊಳಗಿನ ಗುದ್ದಾಟಗಳಿಗೆ ಅರ್ಥವೇ ಇಲ್ಲ ….ಬರಿ ಹಸಿ, ಹಸಿ ನೆನಪುಗಳ ನೆಪದಲ್ಲೇ ಉಳಿದುಸಮಯ ಸಿಕ್ಕರೆ ಕನಸಲ್ಲೂ ಬಂದು ಬಿಡುನಿನ್ನ ಮರೆತು ಬಿಡುವ ಮೊದಲು…! ನೆನಪಲ್ಲೇ ಬೆಂದು ಸಾಕಾಗಿದೆ ನನಗೆ…!!! ಕಲ್ಪನೆ : ಈಶ್ವರ ಸಿ ನಾವುಂದ
ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯ : ನಿರ್ಮಾಣ ಕಾರ್ಯದಲ್ಲಿ ಆಧುನಿಕ ಪ್ರವೃತ್ತಿಗಳ ಕುರಿತ ಆನ್ಲೈನ್ ತರಬೇತಿ ಕಾರ್ಯಕ್ರಮ
ಉಡುಪಿ (ಜು, 6) : ಉಡುಪಿಯ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಆಶ್ರಯದಲ್ಲಿ “ನಿರ್ಮಾಣ ಕಾರ್ಯದಲ್ಲಿ ಆಧುನಿಕ ಪ್ರವೃತ್ತಿ” ವಿಷಯದ ಕುರಿತು ಐದು ದಿನಗಳ ಆನ್ಲೈನ್ ತರಬೇತಿ ಕಾರ್ಯಕ್ರಮವನ್ನು ಜೂನ್ 28ರಿಂದ ಜುಲೈ 2ರವರೆಗೆ ಆಯೋಜಿಸಿಲಾಗಿತ್ತು. ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯದ ಡಾ.ರಾಘವೇಂದ್ರ ಹೊಳ್ಳ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಸಿವಿಲ್ ಇಂಜಿನಿಯರಿಂಗ್ನಲ್ಲಿ ಕಟ್ಟಡ ನಿರ್ಮಾಣದಲ್ಲಿ ಮಾದರಿ ತಯಾರಿಸುವ ಬಗ್ಗೆ ಮಾಹಿತಿ ನೀಡಿದರು ಮತ್ತು ಕೌಶಲ್ಯವನ್ನು […]
ಬಂಟಕಲ್ ತಾಂತ್ರಿಕ ಮಹಾವಿದ್ಯಾಲಯ : ಜುಲೈ 9ರಿಂದ 11ರವರೆಗೆ ರಾಷ್ಟ್ರಮಟ್ಟದ ಹ್ಯಾಕಥಾನ್ – “ಹ್ಯಾಕೋತ್ಸವ”
ಉಡುಪಿ (ಜು, 6): ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಗಣಕ ಯಂತ್ರವಿಭಾಗದ ಕೋಡ್ ಟ್ರೂಪರ್ಸ್ ಸಂಘ ಮತ್ತು ಐಇಇಇ ವಿದ್ಯಾರ್ಥಿ ಘಟಕಗಳ ಸಂಯುಕ್ತ ಆಶ್ರಯದಲ್ಲಿ 48ಘಂಟೆಗಳ ರಾಷ್ಟ್ರಮಟ್ಟದ ಹ್ಯಾಕಥಾನ್ “ಹ್ಯಾಕೋತ್ಸವ”ವನ್ನು ಜುಲೈ 9ರಿಂದ 11ರವರೆಗೆ ಆಯೋಜಿಸಲಾಗಿದೆ. ಇದರ ಉದ್ಘಾಟನೆಯನ್ನು ಬೆಂಗಳೂರಿನ ವೋಲ್ವೋ ಸಮೂಹದ ಸುಧೀಂದ್ರ ಕೌಶಿಕ್ ನೆರವೇರಿಸಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ರತ್ನಕುಮಾರ್ ವಹಿಸಲಿದ್ದಾರೆ. ದೇಶದ ವಿವಿಧ ಭಾಗಗಳಿಂದ ಸುಮಾರು 280ಕ್ಕೂ ಹೆಚ್ಚು ವಿದ್ಯಾರ್ಥಿಗಳು […]
ಲಾಕ್ಡೌನ್ ನಲ್ಲಿ ಅರಳಿದ ಪ್ರತಿಭೆ – ಸಮೃದ್ಧಿ ಉಡುಪ
ಕರೋನಾ ಲಾಕ್ ಡೌನ್ ನಿಂದಾಗಿ ಅನೇಕ ಪ್ರತಿಭೆಗಳು ಬೆಳಕಿಗೆ ಬಂದಿವೆ. ಇಲ್ಲೊಬ್ಬಳು ತನಗೆ ಸಿಕ್ಕ ಬಿಡುವಿನ ಅವಕಾಶವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡು ಉತ್ತಮ ಕಲಾವಿದೆಯಾಗಿ ಮೂಡಿ ಬಂದಿದ್ದಾಳೆ. ಸಾಲಿಗ್ರಾಮ – ಗುಂಡ್ಮಿ ಗ್ರಾಮದ ಯಕ್ಷಗಾನ ಕೇಂದ್ರದ ಬಳಿಯ ಭಟ್ಟ ಮಾಣಿ ದೇವಸ್ಥಾನ ಸಮೀಪದ ಶ್ರೀ ವೆಂಕಟೇಶ್ ಉಡುಪ ಮತ್ತು ರೇಷ್ಮಾ ದಂಪತಿಗಳ ಪುತ್ರಿ 2ನೇ ವರ್ಷದ ಇಂಜಿನಿಯರಿಂಗ್ ಓದುತ್ತಿರುವ ಆ ಬಹುಮುಖ ಪ್ರತಿಭೆಯೇ ಸಮೃದ್ಧಿ ಉಡುಪ. ಇವಳ ಕಲಾಕೃತಿಗಳನ್ನು “ardent_doodles” […]
ಕಂಟೈನರ್ ಗೆ ಕಾರು ಡಿಕ್ಕಿ : ಛಾಯಾಗ್ರಾಹಕ ಅಶೋಕ್ ಶೆಟ್ಟಿ ಹಾಗೂ ಪುತ್ರ ಗಂಭೀರ
ಬೈಂದೂರು (ಜು, 5): ನಾವುಂದದ ಮಾನಸ ಸ್ಟುಡಿಯೋ ಮಾಲಕ ಅಶೋಕ್ ಕುಮಾರ್ ಶೆಟ್ಟಿ ಮದುವೆ ಕಾರ್ಯಕ್ರಮವೊಂದರ ಚಿತ್ರೀಕರಣಕ್ಕಾಗಿ ಮಗ ಪನ್ನಗ ಹಾಗೂ ಕುಮಾರ್ ರೊಂದಿಗೆ ತನ್ನ ಕಿಯಾ ಸೊನೆಟ್ ಕಾರಿನಲ್ಲಿ ಬೆಂಗಳೂರಿಗೆ ಹೋಗಿದ್ದರು. ಕಾರ್ಯಕ್ರಮ ಮುಗಿಸಿ ವಾಪಾಸ್ಸು ಊರಿಗೆ ಬರುತ್ತಿದ್ದ ವೇಳೆ ದಾವಣಗೆರೆಯಲ್ಲಿ ಸೋಮವಾರ ನಸುಕಿನ ವೇಳೆ ಸುಮಾರು 3 ಗಂಟೆಗೆ ಕಂಟೈನರ್ ಲಾರಿಗೆ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಅಶೋಕ್ ಶೆಟ್ಟಿ (58) ಹಾಗೂ ಪುತ್ರ […]
ಸೋತವನ ಗೆಲುವುಗಳು
ಗೆಲ್ಲಲೇಬೇಕೆಂದು ಮನದೊಳಗೆಪಣತೊಟ್ಟವನೊಬ್ಬಅಡಿಗಡಿಗೆ ಸೋತ, ಮತ್ತೆ ಸೋತಸೋಲುತ್ತಲೇ ಹೋದಕೆಲವೊಮ್ಮೆ ನಿಕೃಷ್ಟವಾಗಿಅವನು ಪ್ರತೀ ಸೋಲಿನಿಂದಲೂ ಕಲಿತದ್ದುಹೇಗೆಲ್ಲ ಸೋಲಬಹುದು ಎಂಬುದನ್ನು.ಸೋತಾಗಲೆಲ್ಲ ಪಟ್ಟಿಮಾಡಿಕೊಂಡತಪ್ಪು ಹೆಜ್ಜೆ ತಪ್ಪು ಊಹೆತಪ್ಪು ಲೆಕ್ಕಾಚಾರ ತಪ್ಪು ಯೋಜನೆಎಲ್ಲವನ್ನೂ ಟಿಪ್ಪಣಿ ಮಾಡಿಕೊಂಡ ತಪ್ಪುಗಳಿಗೆಲ್ಲ ಉತ್ತರ ಹುಡುಕುತ್ತಾಸರಿಯಾಗಿಸುತ್ತಾ ಸಾಗಿದಸೋಲಿನೆಲ್ಲಾ ದಾರಿಯನ್ನೂ ಕಂಡುಕೊಂಡಸೋಲಿನ ಪಾಠಗಳಿಗೆ ವೀಷಯವಾಗಿಯೇ ಗುರುವಾಗಿಬಿಟ್ಟ ಈಗ ಅವನಿಗೆ ನೂರಾರು ಶಿಷ್ಯರುಎಲ್ಲರೂ ಗೆಲ್ಲುತ್ತಿದ್ದಾರೆಒಂದೊಂದು ಗೇಲುವೂ ಮೈಲಿಗಲ್ಲೇಸೋತವನೊಬ್ಬನ ಗೆಲುವುಗಳುಬೆಳಕನ್ನು ಹರಿಸುತ್ತಿವೆ ಕತ್ತಲ ದಾರಿಯಲ್ಲಿಎಂದೂ ಸೋಲರಿಯದಂತೆ….. ಕಿಗ್ಗಾಲು.ಜಿ.ಹರೀಶ್
ಉಡುಪಿ ಡಯೆಟ್ ಯೂಟ್ಯೂಬ್ ಚಾನೆಲ್ – ಉಡುಪಿ ಜಿಲ್ಲಾ ಶಿಕ್ಷಣ ಇಲಾಖೆ ಕೈಗೊಂಡ ಮಹತ್ವಪೂರ್ಣ ಹೆಜ್ಜೆ : ಶಿಕ್ಷಕ ಗಣೇಶ್ ಸಿ. ಎನ್. ಅಭಿಪ್ರಾಯ
ಉಡುಪಿ (ಜು, 4) : ಉಡುಪಿ ಡಯೆಟ್ ಯೂಟ್ಯೂಬ್ ಚಾನೆಲ್ ಇದು ಉಡುಪಿ ಜಿಲ್ಲಾ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ಕಲಿಕೆಗೆ ಅನುಕೂಲವಾಗಲು ಕೈಗೊಂಡ ಮಹತ್ವ ಪೂರ್ಣ ಹಾಗೂ ಅದ್ಭುತ ಹೆಜ್ಜೆ.ಈ ಕರೋನಾದಂತಹ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಮಕ್ಕಳನ್ನು ಕಲಿಕೆಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಇದು ಶಿಕ್ಷಕರಿಗೆ ಮತ್ತು ಪೋಷಕರಿಗೆ ಸಹಕಾರಿಯಾಗುತ್ತದೆ. ಈ ಯೂಟ್ಯೂಬ್ ಚಾನೆಲ್ಗೆ ಚಂದಾದಾರರಾಗಲು ಮತ್ತು ಮಕ್ಕಳಿಗೆ ಇಂಗ್ಲಿಷ್ ಕಲಿಯಲು ಸಹಾಯ ಮಾಡಲು ನಾನು ಎಲ್ಲ ಪೋಷಕರನ್ನು ಕೋರುತ್ತೇನೆ ಎಂದು […]
ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು : ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ಪ್ರಾರಂಭ
ಕುಂದಾಪುರ (ಜು, 4): ಡಾ.ಬಿ.ಬಿ .ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕಾಲೇಜು ಕುಂದಾಪುರ ಹಾಗೂ ಕುಂದಾಪುರದ ಪ್ರಸಿದ್ಧ ತರಬೇತಿ ಸಂಸ್ಥೆ ಸೃಷ್ಟಿ ಇನ್ಫೋಟೆಕ್, (ಕಿಯೋನಿಕ್ಸ್ ಕುಂದಾಪುರ, ಚಿನ್ಮಯಿ ಆಸ್ಪತ್ರೆಯ ಹತ್ತಿರ) ಇವರ ಸಂಯುಕ್ತ ಆಶ್ರಯದಲ್ಲಿ ಕುಂದಾಪುರದಲ್ಲಿ ಪ್ರಪ್ರಥಮ ಬಾರಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವನ್ನು 2021-22 ರ ಶೈಕ್ಷಣಿಕ ವರ್ಷದಲ್ಲಿ ಪ್ರಾರಂಭಿಸಲಾಗುತ್ತಿದೆ. ಪದವಿ ಕೋರ್ಸುಗಳ ಜೊತೆಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ವಿದ್ಯಾರ್ಥಿಗಳಿಗೆ ಇದು ಅನುಕೂಲಕರವಾಗಿದ್ದು ಉನ್ನತ […]