ಕುಂದಾಪುರ (ಏ, 28): ಕಳೆದ ಬಾರಿ ಲಾಕ್ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದವರಿಗೆ ಜೆ.ಸಿ.ಐ. ಸಿಟಿ ಕುಂದಾಪುರದ ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ ಮತ್ತು ಅವರ ಜೆಸಿಐ ಕುಂದಾಪುರ ಸಿಟಿ ತಂಡ ದಾನಿಗಳ ನೆರವಿನಿಂದ ಅಶಕ್ತರಿಗೆ ಸಹಾಯ ಹಸ್ತ ನೀಡಿದ್ದರು. 40 ದಿನಗಳ ಕಾಲ ಸರಿಸುಮಾರು 9,500 ಮಂದಿಗೆ ಊಟ ಕೊಟ್ಟು ಈ ತಂಡ ಮಾನವೀಯತೆ ಮೆರೆದಿದ್ದರು. ಹಾಗೆಯೇ ಕೊರೋನಾ ಎರಡನೇ ಅಲೆ ರಾಜ್ಯದಲ್ಲಿ ಪರಿಸ್ಥಿತಿ ಕೈ ಮೀರಿ ವ್ಯಾಪಕವಾಗಿ ಹರಡುತ್ತಿರುವ […]
Author: KundaVahini Editor
ಪಿಪಿಇ ಕಿಟ್ ಧರಿಸಿಯೇ ಸಪ್ತಪದಿ ತುಳಿದ ಜೋಡಿ – ವಿಡಿಯೋ ನೋಡಿ
ಇಂದೋರ್ (ಏ, 27): ಕೊರೋನಾ ಎರಡನೇ ಅಲೆ ದೇಶದಲ್ಲಿ ಪರಿಸ್ಥಿತಿ ಕೈ ಮೀರಿ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜನತೆ ಹಾಕಿಕೊಂಡ ಎಲ್ಲಾ ಯೋಜನೆ ಹಾಗೂ ಯೋಚನೆಗಳು ತಲೆಕೆಳಗಾಗಿದೆ. ಅದರಲ್ಲೂ ಮದುವೆ ಸಮಾರಂಭ ಆಯೋಜಿಸಿದವರು ಹೇಗಾದರೂ ಮಾಡಿ ಹಮ್ಮಿಕೊಂಡ ಕಾರ್ಯ ಸುಸೂತ್ರವಾಗಿ ನಡೆಸ ಬೇಕೆಂದು ಹರ ಸಾಹಸ ಪಡುತ್ತಿದ್ದಾರೆ. ಈ ಎಲ್ಲದರ ನಡುವೆ ಇಲ್ಲೊಂದು ವಿಶೇಷ ಮದುವೆ ನಡೆದಿದೆ. ವಧು- ವರರಿಬ್ಬರು ಪಿಪಿಇ ಕಿಟ್ ಧರಿಸಿ ಮದುವೆಯಾಗಿರುವ ಸಂಗತಿ ಮಧ್ಯಪ್ರದೇಶದ ರತ್ಲಾಂ […]
ಬಿಜೆಪಿ ಯುವಮೋರ್ಚಾ ಕುಂದಾಪುರ : ಯಶಸ್ವಿ ರಕ್ತದಾನ ಶಿಬಿರ
ಕುಂದಾಪುರ (ಏ, 27) : ದೇಶಾದ್ಯಂತ ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡುತ್ತಿರುವುದರಿಂದ ಮುಂದಿನ 60 ದಿನಗಳ ವೆರೆಗೆ ರಕ್ತದಾನ ಮಾಡಲು ಸಾಧ್ಯವಾಗದಿರುವುದರಿಂದ, ಆ ಸಮಯದಲ್ಲಿ ರಕ್ತದ ಅಭಾವ ಉಂಟಾಗುವ ಸಾಧ್ಯತೆ ಇರುವುದರಿಂದ ಬಿಜೆಪಿ ಯುವಮೋರ್ಚಾ ಕುಂದಾಪುರ ವತಿಯಿಂದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ- ರಕ್ತ ನಿಧಿ ಕೇಂದ್ರ ಕುಂದಾಪುರ ಇವರ ಸಹಯೋಗದೊಂದಿಗೆ ಏಪ್ರಿಲ್ 27 ರಂದು ಕುಂದಾಪುರದ ಆರ್ ಎನ್ ಶೆಟ್ಟಿ ಸಭಾಭವನದಲ್ಲಿ […]
ಏಪ್ರಿಲ್ 27 ರಂದು ಬಿಜೆಪಿ ಯುವಮೋರ್ಚಾ ಕುಂದಾಪುರ ಮಂಡಲ ವತಿಯಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ
ಕುಂದಾಪುರ (ಏ, 26): ದೇಶದಾದ್ಯಂತ ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡುತ್ತಿರುವ ಹಿನ್ನಲೆಯಲ್ಲಿ ಮುಂದಿನ 60 ದಿನಗಳ ವರೆಗೆ ರಕ್ತದಾನ ಮಾಡಲು ಸಾಧ್ಯವಾಗದಿರುವುದರಿಂದ ಹಾಗೂ ಆ ಸಂಧರ್ಬದಲ್ಲಿ ರಕ್ತದ ಅಭಾವ ಉಂಟಾಗುವ ಸಾಧ್ಯತೆ ಇರುವುದರಿಂದ ಬಿಜೆಪಿ ಯುವಮೋರ್ಚಾ ಕುಂದಾಪುರ ಮಂಡಲ ವತಿಯಿಂದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ- ರಕ್ತ ನಿಧಿ ಕೇಂದ್ರ ಕುಂದಾಪುರ, ಇವರ ಸಹಯೋಗದೊಂದಿಗೆ ಎಪ್ರಿಲ್ 27 ರ ಮಂಗಳವಾರ ಸಮಯ ಬೆಳಿಗ್ಗೆ […]
ಕುಂದಾಪುರ ಫ್ಲೆ ಓವರ್ ಏರುವ ಮುನ್ನ – ಗಮನಿಸಿ
ಕುಂದಾಪುರ (ಏ, 26) : ಕುಂದಾಪುರ ಭಾಗದ ಜನತೆಯ ದಶಕಗಳ ಕನಸಾಗಿದ್ದ ಫ್ಲೆ ಓವರ್ ನಲ್ಲಿ ಎಲ್ಲಾ ವಿಧದ ವಾಹನಗಳು ಓಡಾಟ ಪ್ರಾರಂಭಿಸಿದೆ. ಆದರೆ ಕುಂದಾಪುರ ಸಿಟಿಯನ್ನು ನೀವು ಪ್ರವೇಶಿಸಬೇಕಾದರೆ ಮೊದಲೇ ಜಾಗ್ರತೆ ವಹಿಸಬೇಕಾಗುತ್ತದೆ. ಏಕೆಂದರೆ ಒಮ್ಮೆ ನೀವು ಫ್ಲೆ ಓವರ್ ಏರಿದರೆ ಮತ್ತೆ ಇಳಿಯುವುದು ಕುಂದಾಪುರದ ಸಂತೆ ಮಾರುಕಟ್ಟೆ ಅಥವಾ ಸಂಗಮ ಬಳಿ. ಕುಂದಾಪುರ ಸಿಟಿ ಪ್ರವೇಶಿಸಬೇಕಾದರೆ ಉಡುಪಿ ಕಡೆಯಿಂದ ಬರುವವರು ಹಂಗಳೂರುನಲ್ಲಿಯೇ ಅಂದರೆ ದುರ್ಗಾಂಬಾ ಆಫೀಸ್ ಪಕ್ಕದ […]
ನಾಳೆಯಿಂದ 14 ದಿನಗಳ ವರೆಗೆ ಕರ್ನಾಟಕದಲ್ಲಿ ಕಂಪ್ಲಿಟ್ ಲಾಕ್ ಡೌನ್
ಬೆಂಗಳೂರು (ಏ. 26) : ಕೊರೋನಾ ಎರಡನೇ ಅಲೆ ರಾಜ್ಯದಲ್ಲಿ ಪರಿಸ್ಥಿತಿ ಕೈ ಮೀರಿ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಏಪ್ರಿಲ್ 27 ರಿಂದ 14 ದಿನಗಳ ಕಾಲ ಕರ್ನಾಟಕವನ್ನು ಲಾಕ್ ಡೌನ್ ಮಾಡಲು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನಿರ್ಧಾರ ತೆಗೆದುಕೊಂಡಿದ್ದಾರೆ. ಸಂಪುಟ ಸಭೆಯಲ್ಲಿ ಭಾಗಿಯಾಗಿದ್ದ ಎಲ್ಲಾ ಸಚಿವರೂ ಕೂಡ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಮಂಗಳವಾರ ಸಂಜೆಯಿಂದಲೇ ಈ ಆದೇಶ ಜಾರಿಗೆ ಬರಲಿದೆ […]
ರಾಜ್ಯದಲ್ಲಿ ವೀಕೆಂಡ್ ಕರ್ಪ್ಯೂ ಮುಂದಿನ ವಾರವೂ ಇದೆ – ಸಚಿವ ಜಗದೀಶ್ ಶೆಟ್ಟರ್
ಹುಬ್ಬಳ್ಳಿ (ಏ, 25) : ರಾಜ್ಯದಲ್ಲಿ ವೀಕೆಂಡ್ ಕರ್ಪ್ಯೂ ಮುಂದಿನ ವಾರವೂ ಇದೆ. ಲಾಕ್ಡೌನ್ ಬಗ್ಗೆಯೂ ಚರ್ಚೆ ನಡೆಸಲಾಗುತ್ತಿದೆ. ಏಪ್ರಿಲ್ 26 ರ ಬೆಳಿಗ್ಗೆ 11 ಗಂಟೆಗೆ ಕ್ಯಾಬಿನೆಟ್ ಸಭೆ ನಡೆಯಲಿದ್ದು, ಕ್ಯಾಬಿನೆಟ್ನಲ್ಲಿ ಸಿಎಂ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಶಿಶಿರ್ ಸುವರ್ಣ : ಶಿಖರದಷ್ಟೇ ಅಚಲ – ಸುವರ್ಣದಷ್ಟೇ ಮೆರುಗಿನಂತಹ ಪ್ರಖರ ವ್ಯಕ್ತಿತ್ವ
ಕಳೆದ ಅಕ್ಟೋಬರ್ 10, 2020 ರಿಂದ ಆರಂಭಗೊಂಡು ಜನವರಿ 15, 2021ರ ವರೆಗೂ ನಡೆದ ಇಂಡಿಯನ್ ಏರ್ ಫೋರ್ಸ್ ನ ಔದ್ಯೋಗಿಕ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡು, ನಡೆದ ಎರಡು ಹಂತದಲ್ಲಿನ ( Phase 1: Physical, Written. Phase 2; GD, Psychological and Medical Test) ವಿವಿಧ ಪರೀಕ್ಷೆಗಳಲ್ಲಿ ಸಫಲರಾಗಿ ಇಂಡಿಯನ್ ಏರ್ ಫೋರ್ಸ್ ನ ಏರ್ ಮನ್ (ಟೆಕ್ನಿಕಲ್) ಹುದ್ದೆಗೆ ಆಯ್ಕೆಯಾಗಿ, ಪ್ರಸ್ತುತ ಬೆಳಗಾಂನಲ್ಲಿ ತರಬೇತಿಯಲ್ಲಿರುವ ಶಿಶಿರನ […]
ಕುಂದಾಪುರದ ಅಮಾಸೆಬೈಲು ಗ್ರಾಮದ ಯುವಕ ಸುದೀಪ ಶೆಟ್ಟಿ ಭಾರತೀಯ ಸೈನ್ಯಕ್ಕೆ ಆಯ್ಕೆ
ಕುಂದಾಪುರ (ಏ, 25): ತಾಲೂಕಿನ ಅಮಾಸೆಬೈಲು ಗ್ರಾಮದ ಯುವಕ ಸುದೀಪ ಶೆಟ್ಟಿ ಭಾರತೀಯ ಭೂ ಸೈನ್ಯಕ್ಕೆ ಆಯ್ಕೆ ಆಗಿರುತ್ತಾರೆ. ಅಮಾಸೆಬೈಲು ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಪಡೆದಿರುವ ಇವರು ಬಿದ್ಕಲ್ಕಟ್ಟೆ ಪದವಿಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುತ್ತಾರೆ. ಅಮಾಸೆಬೈಲಿನ ದೇವಿಕಾನು ಒಳಬೈಲು ಗ್ರಾಮದ ಹೊಳೆಬಾಗಿಲು ಮನೆ ಶೇಖರ ಶೆಟ್ಟಿ ಹಾಗೂ ಹೇಮಾ ಶೆಡ್ತಿ ಯವರ ಪುತ್ರ .
ಲಯನ್ ಅಕ್ಷಯ ಹೆಗ್ಡೆ ಮೊಳಹಳ್ಳಿಗೆ ಮಲ್ಟಿಪಲ್ ಯಂಗ್ ಲಯನ್ ಪ್ರಶಸ್ತಿ
ಉಡುಪಿ (ಏ, 25) : ಇತ್ತೀಚೆಗೆ ನಡೆದ ಲಯನ್ಸ್ ಮಲ್ಟಿಪಲ್ ಅವಾರ್ಡ್ ನಲ್ಲಿ ಗೋವಾ, ಆಂಧ್ರ ಪ್ರದೇಶ ಮತ್ತು ಕರ್ನಾಟಕ ರಾಜ್ಯಗಳನ್ನೊಳಗೊಂಡ ಲಯನ್ಸ್ ಮಲ್ಟಿಪಲ್ ಜಿಲ್ಲೆ 317 ನ “ಮಲ್ಟಿಪಲ್ ಯಂಗ್ ಲಯನ್ “ ಪ್ರಶಸ್ತಿ ಯನ್ನು ಲಯನ್ಸ್ ಕ್ಲಬ್ ಬಸರೂರು ಮೂಡ್ಲಕಟ್ಟೆಯ ಅಧ್ಯಕ್ಷ ಹಾಗೂ ಲಯನ್ಸ್ ವಿಚಾರ ಸಂಕೀರ್ಣ ಮತ್ತು ಸಮ್ಮೇಳನಗಳ ಜಿಲ್ಲಾಧ್ಯಕ್ಷ ಲಯನ್ ಅಕ್ಷಯ ಹೆಗ್ಡೆ ಮೊಳಹಳ್ಳಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಲಯನ್ಸ್ ಅಂತಾರಾಷ್ಟ್ರೀಯ ನಿರ್ದೇಶಕರಾದ ಆರ್. […]










