ಕೋಟ (ಮಾ.16) : ಉಡುಪಿ ಜಿಲ್ಲಾ ಪದವಿಪೂರ್ವ ಕಾಲೇಜು ಅರ್ಥಶಾಸ್ತ್ರ ಪ್ರಾಂಶುಪಾಲರ ಮತ್ತು ಉಪನ್ಯಾಸಕರ ವೇದಿಕೆಯ ಒಂದು ದಿನದ ಪಠ್ಯ ಆಧಾರಿತ ಕಾರ್ಯಗಾರವು ಕೋಟ ವಿವೇಕ ಪದವಿಪೂರ್ವ ಕಾಲೇಜಿನಲ್ಲಿ ಜರಗಿತು. ಈ ಕಾರ್ಯಗಾರವನ್ನು ಉಡುಪಿ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಭಗವಂತ ಕಟ್ಟಿಮನಿಯವರು ಉದ್ಘಾಟಿಸಿದರು. ಕೋಟ ವಿವೇಕ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜಗದೀಶ್ ನಾವಡ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೋಟ ವಿದ್ಯಾಸಂಸ್ಥೆಗಳ ಜೊತೆ ಕಾರ್ಯದರ್ಶಿ ರಾಮದೇವ […]
Author: KundaVahini Editor
ಮೂಡ್ಲಕಟ್ಟೆ ಎಮ್.ಐ.ಟಿ. : ಕ್ಯಾಂಪಸ್ ಉದ್ಯೋಗ ಮೇಳ
ಕುಂದಾಪುರದ ಪ್ರತಿಷ್ಠಿತ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ವತಿಯಿಂದ ಇದೇ ತಿಂಗಳ 26 ಹಾಗೂ 27ನೇ ದಿನಾಂಕದಂದು ಕಾಲೇಜಿನ ಕ್ಯಾಂಪಸ್ ನಲ್ಲಿ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.
ಶ್ರೀ ಶಿವಶಂಕರಿ ದೇವಾಲಯ ವತಿಯಿಂದ ಗಾಯಕ ಗಣೇಶ್ ಗಂಗೊಳ್ಳಿರವರಿಗೆ ಸನ್ಮಾನ
ಕುಂದಾಪುರ (ಮಾ 16): ಮಹಾ ಶಿವರಾತ್ರಿಯ ಆಚರಣೆಯ ಪ್ರಯುಕ್ತ ಮಾರ್ಚ್ 12 ರಂದು ಕುಂದಾಪುರ ತಾಲೂಕಿನ ಸೌಕೂರು ಶ್ರೀ ಶಿವಶಂಕರಿ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿತು.ಈ ಸಂದರ್ಭದಲ್ಲಿ ಜಾನಪದ ಗಾಯಕ ಉಡುಪಿ ಜಿಲ್ಲಾ ಕನ್ನಡ ಜಾನಪದ ಪರಿಷತ್ ಇದರ ಜಿಲ್ಲಾಧ್ಯಕ್ಷರಾದ ಶ್ರೀ ಗಣೇಶ್ ಗಂಗೊಳ್ಳಿ ಇವರನ್ನು ದೇವಾಲಯದ ವತಿಯಿಂದ ಬೈಂದೂರು ಕ್ಷೇತ್ರದ ಮಾಜಿ ಶಾಸಕರಾದ ಗೋಪಾಲ ಪೂಜಾರಿ ಯವರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾಪಂಚಾಯತ್ ಅಧ್ಯಕ್ಷರಾದ ಶ್ರೀ […]
ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಈಜು ಪಟು ನಾಗರಾಜ ಖಾರ್ವಿ ಆಯ್ಕೆ
ಕರ್ನಾಟಕ ರಾಜ್ಯ ಮಾಸ್ಟರ್ಸ್ ಗೇಮ್ಸ್ ಅಸೋಸಿಯೇಷನ್(ರಿ.) ಇವರು ಬೆಂಗಳೂರಿನ ಡಿ ಕ್ಯೂಬ್ ಈಜುಕೊಳದಲ್ಲಿ ನಡೆಸಿದ ರಾಜ್ಯಮಟ್ಟದ ಈಜು ಸ್ಪರ್ಧೆಯಲ್ಲಿ ಗುಜ್ಜಾಡಿ ಗ್ರಾಮದ ಕಂಚುಗೋಡು ನಿವಾಸಿ ನಾಗರಾಜ ಖಾರ್ವಿ, 50 ಮೀ ಬಟರ್ ಪ್ಲೈನಲ್ಲಿ ಚಿನ್ನದ ಪದಕ, 100 ಮೀ ಬ್ರೆಸ್ಟ್ ಸ್ಟ್ರೋಕ್ನಲ್ಲಿ ಬೆಳ್ಳಿ ಪದಕ, 50 ಮೀ ಬ್ಯಾಕ್ ಸ್ಟ್ರೋಕ್ನಲ್ಲಿ ಬೆಳ್ಳಿ ಪದಕ ಪಡೆದು ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಮಿಲಾಗ್ರಿಸ್ ಪದವಿಪೂರ್ವ ಕಾಲೇಜು ಕಲ್ಯಾಣಪುರ : ವಾರ್ಷಿಕ ಕ್ರೀಡಾಕೂಟ
ಉಡುಪಿ (ಮಾ.14) ಮಿಲಾಗ್ರಿಸ್ ಪದವಿಪೂರ್ವ ಕಾಲೇಜು ಕಲ್ಯಾಣಪುರ ಇದರ 2020-21 ನೇ ಸಾಲಿನ ವಾರ್ಷಿಕ ಕ್ರೀಡಾಕೂಟ ಮಾರ್ಚ್ 10ರಂದು ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಿತು. ಈ ಕ್ರೀಡಾಕೂಟದ ಅಧ್ಯಕ್ಷತೆಯನ್ನು ಮಿಲಾಗ್ರಿಸ್ ಸಂಸ್ಥೆಗಳ ಸಂಚಾಲಕರಾದ ಅತೀ ವಂದನೀಯ ಫಾ.ವೆಲೆರಿಯನ್ ಮೆಂಡೋನ್ಸಾ ರವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಬಿ.ಎಸ್.ಎನ್.ಎಲ್ ಉಡುಪಿ ವಲಯದ ನಿರ್ವಹಣಕಾರರಾದ ಎನ್ .ಸಂದೀಪ್ ರವರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಸವಿತಾ ಹೆಬ್ಬಾರ್, ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ವಿನ್ಸೆಂಟ್ […]
ಮಿಲಾಗ್ರಿಸ್ ಪದವಿಪೂರ್ವ ಕಾಲೇಜು ಕಲ್ಯಾಣಪುರ : ವಿಚಾರಗೋಷ್ಠಿ
ಉಡುಪಿ (ಮಾ.14) ಮಿಲಾಗ್ರಿಸ್ ಪದವಿಪೂರ್ವ ಕಾಲೇಜು ಕಲ್ಯಾಣಪುರ ಇದರ ಮಾನವಿಕ ಸಂಘ ಆಶ್ರಯದಲ್ಲಿ ಮಾನವ ಹಕ್ಕುಗಳು ಮತ್ತು ಮಹಿಳಾ ಸಬಲೀಕರಣ ಎನ್ನುವ ವಿಷಯದ ಕುರಿತು ವಿಚಾರಗೋಷ್ಠಿಯನ್ನು ಸಂಸ್ಥೆಯ ಕಲಾವಿಭಾಗದ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿತ್ತು.ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಸವಿತಾ ಹೆಬ್ಬಾರ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಸಂಸ್ಥೆಯ ಹಳೆವಿದ್ಯಾರ್ಥಿ ಸಂಘದ ಶ್ರೀ ಸಂಜಯ್ ಸಂಜಯ್ ನಾಯಕ್ ಆಗಮಿಸಿದ್ದರು. ಕಾಲೇಜಿನ ಮಾನವಿಕ ಸಂಘದ ಸಂಯೋಜಕರಾದ ಉಪನ್ಯಾಸಕಿ ಲೋಯಿಲೀಸಾ ಹಾಗೂ ಸಹ ಸಂಯೋಜಕರಾದ […]
ಕುಂದಾಪುರ ತಾಲೂಕು ಯುವ ಬಂಟರ ಸಂಘ : ಸಿ.ಎ. ಸಾಧಕ ಸಂಪತ್ ಶೆಟ್ಟಿಯವರಿಗೆ ಸನ್ಮಾನ
ಸಿ.ಎ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಕಾವ್ರಾಡಿಯ ಮುಕ್ಕನಾಡಿ ಮನೆ ಸಂಪತ್ ಶೆಟ್ಟಿಯವರಿಗೆ ಅವರ ಸ್ವಗೃಹದಲ್ಲಿ ಕುಂದಾಪುರ ತಾಲೂಕು ಯುವ ಬಂಟರ ಸಂಘದಿಂದ ಸನ್ಮಾನಿಸಲಾಯಿತು.
ಮಾರ್ಚ್ 15 ಮತ್ತು 16 ರಂದು ಬ್ಯಾಂಕ್ ಮುಷ್ಕರ
ಕೇಂದ್ರ ಸರ್ಕಾರವು ಈಗಾಗಲೇ ಎರಡು ಸರ್ಕಾರಿ ಬ್ಯಾಂಕ್ ಗಳ ಖಾಸಗೀಕರಣಕ್ಕೆ ಮುಂದಾಗಿದ್ದು, ಇದನ್ನು ವಿರೋಧಿಸಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್ಬಿಯು) ಮಾ. 15 ಮತ್ತು 16 ರಂದು ಬ್ಯಾಂಕ್ ನೌಕರರು ಅಖಿಲ ಭಾರತ ಮುಷ್ಕರಕ್ಕೆ ಕರೆ ನೀಡಿದೆ ಎಂದು ಭಾರತೀಯ ಬ್ಯಾಂಕ್ಗಳ ಸಂಘ (ಐಬಿಎ) ತಿಳಿಸಿದೆ.
ಎಂ.ಐ.ಟಿ. ಮೂಡ್ಲಕಟ್ಟೆ : ಮಾರ್ಚ್ 26 ಹಾಗೂ 27 ರಂದು ಉದ್ಯೋಗ ಮೇಳ
ಮೂಡ್ಲಕಟ್ಟೆ ಎಂ.ಐ.ಟಿ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇದೇ ಮಾರ್ಚ್ 26 ಹಾಗೂ 27 ರಂದು ಉದ್ಯೋಗ ಮೇಳವನ್ನು ಆಯೋಜಿಸಿರುತ್ತಾರೆ.
ಇ ಸಿ ಆರ್ ಕಾಲೇಜು : ಪ್ರತಿದಿನವೂ ಮಹಿಳಾ ದಿನ
ಮಧುವನ (ಮಾ.14) : ವರ್ಷದಲ್ಲಿ ಒಂದು ದಿನ ಸಾಂಕೇತಿಕವಾಗಿ ಮಹಿಳಾ ದಿನಾಚರಣೆಯನ್ನು ಆಚರಿಸದೇ ಪ್ರತಿ ದಿನವೂ ಮಹಿಳೆಯರ ದಿನ ಆಚರಿಸುವಂತಾಗ ಬೇಕು.ತಾಯಿಯಾಗಿ, ತಂಗಿಯಾಗಿ, ಅಕ್ಕನಾಗಿ, ಮಗಳಾಗಿ, ಹೆಂಡತಿಯಾಗಿ ಹೀಗೆ ಮುಂತಾದ ಪಾತ್ರಗಳನ್ನು ನಿರ್ವಹಿಸುವ ಮಹಿಳೆಯರಿಗೆ ಅದಕ್ಕೆ ಪೂರಕವಾದ ಸಮಾಜದ ನಿರ್ಮಾಣವಾಗಬೇಕು ಎಂದು ಸೌಖ್ಯ ನರ್ಸಿಂಗ್ ಕಾಲೇಜು ಪ್ರಾಂಶುಪಾಲರಾದ ಪ್ರೊ, ಲಿಸಾ ಲಿಯೋ ಹೇಳಿದರು. ಅವರು ಇ ಸಿ ಆರ್ ಕಾಲೇಜಿನ ಮಹಿಳಾ ದೌರ್ಜನ್ಯ ತಡೆ ಘಟಕ ಯೋಜಿಸಿದ್ದ “ವಿಶ್ವ ಮಹಿಳಾ […]










