ಕುಂದಾಪುರ(ಅ, 24): ಕುಂದಾಪುರ ತಾಲೂಕು ಮಟ್ಟದ ಅಥ್ಲೆಟಿಕ್-2024 ರ 14 ವರ್ಷದೊಳಗಿನ ಹುಡುಗರ ವಿಭಾಗದಲ್ಲಿ ಕುಂದಾಪುರ ಟ್ರ್ಯಾಕ್ ಮತ್ತು ಫೀಲ್ಡ್ ನ ಪ್ರಥ್ವಿನ್ ಚಾಂಪಿಯನ್ ಆಗಿ ಮೂಡಿಬಂದಿದ್ದಾರೆ. 100 ಮೀಟರ್ ಪ್ರಥಮ ಸ್ಥಾನ 200 ಮೀಟರ್ ಪ್ರಥಮ ಸ್ಥಾನ ,4×100 ಬಾಲಕರ ರಿಲೇ ಚಿನ್ನದ ಪದಕ ಪಡೆದು ಉಡುಪಿ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ಗೆ ಆಯ್ಕೆಯಾಗಿದ್ದಾರೆ. ಇವರಿಗೆ ಕುಂದಾಪುರದ ಟ್ರ್ಯಾಕ್ & ಫೀಲ್ಡ್ ಕ್ರೀಡಾ ತರಬೇತಿ ಸಂಸ್ಥೆಯ ಪ್ರಶಾಂತ ಶೆಟ್ಟಿ […]
Author: KundaVahini Editor
ಬಾಳಿಕೆರೆ : ಅಶಕ್ತ ಕುಟುಂಬಕ್ಕೆ ಸಹಾಯ ಧನ ಹಸ್ತಾಂತರ
ಹೆಮ್ಮಾಡಿ(ಆ,21): ದಿವಂಗತ ಶೀನ ಮೊಗವೀರ ಬಾಳಿಕೆರೆ ಅರ್ಸುಮಕ್ಕಿ ಇವರ ಕುಟುಂಬಕ್ಕೆ ಇಂದು ದಾನಿಗಳ ನೆರವಿನಿಂದ ಸಂಗ್ರಹವಾದ ಹಣವನ್ನು ಮೊಗವೀರ ಯುವ ಸಂಘಟನೆ(ರಿ.),ಉಡುಪಿ ಜಿಲ್ಲೆ ಹೆಮ್ಮಾಡಿ ಘಟಕದ ಅಧ್ಯಕ್ಷರಾದ ದಿನೇಶ್ ಬಿ ಕಾಂಚನ ರವರ ನೇತ್ರತ್ವದಲ್ಲಿ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಬಾಳಿಕೆರೆ ಮೊಗವೀರ ಗ್ರಾಮ ಸಭಾ ಕುಡಿಗೆಯ ಅಧ್ಯಕ್ಷರಾದ ಸುಧಾಕರ್ ಕಾಂಚನ್ , ಕೂಡಿಗೆಯ ಗೌರವ ಸಲಹೆಗಾರರಾದ ಗಣೇಶ ಟಿ. ಕಾಂಚನ್ , ಹೆಮ್ಮಾಡಿ ಘಟಕ ಮಾಜಿ ಅಧ್ಯಕ್ಷರಾದ ಲೋಹಿತಾಶ್ವ ಆರ್ […]
ಬಗ್ವಾಡಿ: ಸುಧಾ ಮೊಗವೀರರಿಗೆ ಸನ್ಮಾನ
ಬಗ್ವಾಡಿ( ಆ,21): ಶ್ರೀ ಕ್ಷೇತ್ರ ಕೊಲ್ಲೂರು ಮುಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾಗಿ ಆಯ್ಕೆಯಾದ ಸುಧಾ ಮೊಗವೀರರವರು ಶ್ರೀ ಕ್ಷೇತ್ರ ಬಗ್ವಾಡಿ ಮಹಿಷಾಸುರಮರ್ದಿನಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರನ್ನು ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮೊಗವೀರ ಮಹಜನ ಸೇವಾ ಸಂ(ರಿ.), ಬಗ್ವಾಡಿ ಹೋಬಳಿ ಕುಂದಾಪುರ ಶಾಖಾ ಅಧ್ಯಕ್ಷರಾದ ಉದಯ್ ಕುಮಾರ್ ಹಟ್ಟಿಯಂಗಡಿ ಮಾತನಾಡಿ ಈ ಹಿಂದಿನ ಕೊಲ್ಲೂರು ದೇವಳದ ಆಡಳಿತ ಮಂಡಳಿಯ ವ್ಯೆವಸ್ಥಾಪನ […]
ಹೆಮ್ಮಾಡಿ ಜನತಾ ಪಿ ಯು ಕಾಲೇಜಿನ ವಿದ್ಯಾರ್ಥಿಗಳು ಯೋಗಾಸನ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ
ಹೆಮ್ಮಾಡಿ( ಆ,21): ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ ವಿಭಾಗ) ಬೆಂಗಳೂರು, ದೇವರಾಜ್ ಅರಸ್ ಪದವಿಪೂರ್ವ ಕಾಲೇಜು ಆರ್.ಎಲ್.ಜಾಲಪ್ಪ ಕ್ಯಾಂಪಸ್ ಕೊಡಿಗೇಹಳ್ಳಿ ದೊಡ್ಡಬಳ್ಳಾಪುರಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಬಾಲಕಿಯರ ವಿಭಾಗದಲ್ಲಿಉಡುಪಿ ಜಿಲ್ಲೆಯ ಯೋಗಾಸನ ತಂಡವನ್ನು ಪ್ರತಿನಿಧಿಸಿದ ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಾದನಿರೀಕ್ಷಾ ಮತ್ತು ತನ್ವಿತಾ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟದ […]
ಅ . 20 ರಂದು ಮಂಗಳೂರಿನಲ್ಲಿ ಸಾಲಿಗ್ರಾಮ ಮಕ್ಕಳ ಮೇಳದ ‘ಸುವರ್ಣ ಪರ್ವ- 2’
ಕೋಟ (ಅ,13) : ವಿಶ್ವ ವಿಖ್ಯಾತ ಸಾಲಿಗ್ರಾಮ ಮಕ್ಕಳ ಮೇಳ-50 ರ ಸುವರ್ಣ ಪರ್ವದ ಎರಡನೆ ಕಾಯಕ್ರಮವು ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಆಶ್ರಯದಲ್ಲಿ ಮಂಗಳೂರಿನ ಡಾನ್ ಬಾಸ್ಕೋ ಸಭಾಂಗಣದಲ್ಲಿ ಅಕ್ಟೋಬರ್ 20 ರ ಆದಿತ್ಯವಾರ ಸಂಜೆ 4.30 ಕ್ಕೆ ನಡೆಯಲಿದೆ. ಅಂದಿನ ಸಭೆಯಲ್ಲಿ ಮಕ್ಕಳ ಯಕ್ಷಗಾನ ಕ್ಷೇತ್ರದಲ್ಲಿ ಸಾಕಷ್ಟು ಕೃಷಿ ಮಾಡಿದ ಮಂಗಳೂರು ಕೋಡಿಕಲ್ನ ಸರಯೂ ಬಾಲ ಯಕ್ಷವೃಂದ(ರಿ) ಮಕ್ಕಳ ಮೇಳದ ನಿರ್ದೇಶಕ ರವಿ ಅಲೆವೂರಾಯ ವರ್ಕಾಡಿ ಅವರಿಗೆ ಸುವರ್ಣ […]
ಎಚ್ ಎಮ್ ಎಮ್, ವಿ ಕೆ ಆರ್ ಶಾಲೆಗೆ ಮಾಹೆ ಸಿಕ್ಕಿಂ ಪ್ರೊ. ಚಾನ್ಸೆಲರ್ ಡಾ.ಕೆ ರಾಮ್ ನಾರಾಯಣ್ ಭೇಟಿ
ಕುಂದಾಪುರ (ಅ.19) : ತರಗತಿ ಎಂದರೆ ವಿದ್ಯಾರ್ಥಿಗಳಿಗೆ ಮುಕ್ತ ವಾತಾವರಣ ಕಲ್ಪಿಸುವ ತಾಣವಾಗಿರಬೇಕೇ ಹೊರತು ಅವರ ಭಾವನೆಗಳನ್ನು ಕಟ್ಟಿ ಹಾಕುವ ಕೋಣೆಯಾಗಿರಬಾರದು. ಅಲ್ಲದೇ ವಿದ್ಯಾರ್ಥಿಗಳನ್ನು ಪ್ರೀತಿಸುವ, ಕಾಳಜಿಯುಕ್ತ ಜೀವಂತಿಕೆ ತುಂಬಿಸಬಲ್ಲ ಶಿಕ್ಷಕರು ಎಂದೆಂದಿಗೂ ಅವಿನಾಶಿ ಎಂದು ಸಿಕ್ಕಿಂ ಮಣಿಪಾಲ ವಿಶ್ವವಿದ್ಯಾನಿಲಯದ ಪ್ರೊ. ಚಾನ್ಸೆಲರ್ ಡಾ.ಕೆ ರಾಮ್ ನಾರಾಯಣ್ ಹೇಳಿದರು. ಅವರು ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಶಾಲೆಗಳಲ್ಲಿ ಶಿಕ್ಷಕರಿಗಾಗಿ ಆಯೋಜಿಸಿದ ಪುನಶ್ಚೇತನ ಕಾರ್ಯಾಗಾರದಲ್ಲಿ ಮಾತನಾಡಿದರು. ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ […]
ಗಂಗೊಳ್ಳಿಯಲ್ಲಿ ಗಮನ ಸೆಳೆದ ಅಯೋಧ್ಯಾ ರಾಮ ಮಂದಿರ
ಗಂಗೊಳ್ಳಿ (ಆ,19): ಗಂಗೊಳ್ಳಿಯ ಸಾರ್ವಜನಿಕ ಶ್ರೀ ಶಾರದೋತ್ಸವದ ಸುವರ್ಣ ಮಹೋತ್ಸವದ ಮೆರವಣಿಗೆಯಲ್ಲಿ ಗಂಗೊಳ್ಳಿಯ ಟೀಮ್ ವಿಶ್ವಸಾಗರ ಪ್ರದರ್ಶಿಸಿದ ಅಯೋಧ್ಯ ರಾಮ ಮಂದಿರದ ಟ್ಯಾಬ್ಲೋ ತನ್ನ ಸೌಂದರ್ಯದಿಂದ ಜನಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಧನುರ್ಧಾರಿ ರಾಮನ ಪ್ರತಿಕೃತಿ ಮತ್ತು ರಾಮ ಸ್ಮರಣೆಯ ಮೌಲಿಕ ನುಡಿಗಳ ಜೊತೆಯಲ್ಲಿಯೇ ಇತ್ತೀಚೆಗಷ್ಟೇ ನಿಧನರಾದ ಪ್ರಮಾಣಿಕತೆ ಮತ್ತು ಯಶಸ್ಸಿನ ಪ್ರೇರಕ ಶಕ್ತಿಯಾಗಿ ದೇಶದ ಅಭಿವೃದ್ಧಿಗೆ ಅಪಾರವಾದ ಮಹೋನ್ನತ ಕೊಡುಗೆಯನ್ನು ನೀಡಿದ ಅಪ್ರತಿಮ ದೇಶಪ್ರೇಮಿ ಶ್ರೀ ರತನ್ ಟಾಟಾ ಅವರ […]
ಕುಂದಾಪುರ ಎಜುಕೇಶನ್ ಸೊಸೈಟಿಗೆ ಸುವರ್ಣ ಸಂಭ್ರಮ
ಕನ್ನಡ ಕರಾವಳಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ– ಕುಂದಾಪುರ ಎಜ್ಯುಕೇಶನ್ ಸೊಸೈಟಿ(ರಿ.) ಕುಂದಾಪುರ ಪರಿಸರದಲ್ಲಿ ಉತ್ತಮ ಗುಣಮಟ್ಟದ ಮತ್ತು ಮೌಲ್ಯಪೂರ್ಣ ಶೈಕ್ಷಣಿಕ ಅವಕಾಶಗಳನ್ನು ವಿದ್ಯಾರ್ಥಿ ಸಮುದಾಯಕ್ಕೆ ಒದಗಿಸಬೇಕು ಎನ್ನುವ ಸದಾಶಯದೊಂದಿಗೆ 1975ರ ವೇಳೆಗೆ ಹುಟ್ಟಿಕೊಂಡ ಸಂಸ್ಥೆ ಕುಂದಾಪುರ ಎಜ್ಯುಕೇಶನ್ ಸೊಸೈಟಿ. ಕುಂದಾಪುರ ಹೃದಯ ಭಾಗದಲ್ಲಿ ತನ್ನ ನೆಲೆಯನ್ನು ಕಂಡುಕೊಂಡ ಈ ಸೊಸೈಟಿ ಆರಂಭಗೊಂಡದ್ದು ನರ್ಸರಿ ತರಗತಿಯ ಮೂಲಕ. ಆದರೆ ಇಂದು ತನ್ನ ಶೈಕ್ಷಣಿಕ ಉತ್ಕ್ರಷ್ಟತೆಯೊಂದಿಗೆ ಸಂಸ್ಥೆ ನರ್ಸರಿ ಇಂದ ಪದವಿಯ ವರೆಗೆ […]
ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ಜ್ಞಾನ ಸುಧಾ ವಿದ್ಯಾರ್ಥಿಯ ಸಾಧನೆ
ಉಡುಪಿ ( ಆ,18): ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ಆಯೋಜಿಸಿದ ಬೆಂಗಳೂರಿನ ಬಸವನ ಗುಡಿಯಲ್ಲಿ ನಡೆದ ರಾಜ್ಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ-ಬಾಲಕಿಯರ ಈಜು ಸ್ಪರ್ಧೆಯಲ್ಲಿ 400 ಮೀ ಇಂಡ್ ಮಿಡ್ಲೆಯಲ್ಲಿ ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 9ನೇ ತರಗತಿಯ ವಿಧ್ಯಾರ್ಥಿನಿಯಾದ ಕುಮಾರಿ ಭೂಮಿ ಪ್ರಥಮ ಸ್ಥಾನ ಗಳಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರು ಕಾರ್ಕಳದ ಶ್ರೀ ಕೆ. ವಿ ಪ್ರವೀಣ್ ಹಾಗೂ ಶ್ರೀಮತಿ ದೀಪ್ತಿ ಪ್ರಭು […]
ಡಾ. ಬಿ ಬಿ ಹೆಗ್ಡೆ ಕಾಲೇಜು : ರತನ್ ಟಾಟಾರವರಿಗೆ ನುಡಿ ನಮನ
ಕುಂದಾಪುರ ( ಆ ,18): ಇಲ್ಲಿನ ಡಾ . ಬಿ ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗ ಹಾಗೂ ಇನ್ನೋವೇಶನ್ ಮತ್ತು ಎಂಟ್ರಪ್ರಿನಿಯರ್ಶಿಪ್ ಡೆವಲಪ್ಮೆಂಟ್ ಸೆಲ್ ಆಶ್ರಯದಲ್ಲಿ, ಭಾರತ ಕಂಡ ಶ್ರೇಷ್ಠ ಉದ್ಯಮಿ ಶ್ರೀ ರತನ್ ಟಾಟಾರವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಹಿನ್ನೆಲೆಯಲ್ಲಿ ನುಡಿ ನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಪ್ರಥಮ ಬಿ.ಕಾಂ. ವಿದ್ಯಾರ್ಥಿ ಕೃಷ್ಣ ಅವರು ರಚಿಸಿದ ಟಾಟರವರ ಭಾವಚಿತ್ರಕ್ಕೆ ವಿದ್ಯಾರ್ಥಿಗಳೇ ಪುಷ್ಪ ನಮನ ಸಲ್ಲಿಸಿದ್ದು ವಿಶೇಷವಾಗಿತ್ತು. ಕಾರ್ಯಕ್ರಮದ […]