ಮತ್ತದೇ ಡಿಸೆಂಬರ್ ಅಂತ್ಯ….ಹೌದು 2021ರ ಕೊನೆಯ ದಿನಕ್ಕೆ ಬಂದು ನಿಂತಿದ್ದೇವೆ. ಹೊಸವರ್ಷ ಆಚರಣೆ ಈ ಬಾರಿ ಇಲ್ಲ.ಆದರೆ ನಮ್ಮ ದಿನನಿತ್ಯದ ದಿನಗಳ ಗಣನೆ, ದಿನಚರಿಯ ನಡುವೆ ಹೊಸ ವರ್ಷದ ಕ್ಯಾಲೆಂಡರ್ ಸಾಂಕೇತಿಕ ಆಚರಣೆ ಸಮಯ …. ಹೊಸ ವರ್ಷಕ್ಕೆ ಹೊಸ ಅಭಿಯಾನ ಒಂದನ್ನು ಆರಂಭಿಸಿದ್ದರೂ.. 2021ರ ಒಂದು ಪಕ್ಷಿ ನೋಟದೊಡನೆ ಸುಖ- ದುಃಖ ಎನ್ನದೇ ಎಲ್ಲದ್ದಕ್ಕೂ ಕೃತಜ್ಞತೆ ತೋರುವ ಸಲುವಾಗಿ ಥ್ಯಾಂಕ್ಯೂ_ಹೇಳೋಣ ಎಂದು.. ಹೌದು 2021 ಬಹಳಷ್ಟು ಹೊಸ ಅನುಭವಗಳನ್ನು ನೀಡಿತು. ನೋವು […]
Category: ಕುಂದಾಪ್ರ ಕನ್ನಡ
ಕುಂದಾಪ್ರ ಕನ್ನಡ
••ಯಾರವನು?••
ಅವನೊಂದು ಮಹಾನ್ ಚೇತನ ಹಸಿ ಮಣ್ಣಿಗೆ ನೆತ್ತರ ಸುರಿಸಿಬದುಕನ್ನೇ ಉಳುವವನು….. ಹಸಿದ ಹೊಟ್ಟೆಗೆ ಅನ್ನ ನೀಡಲು ತನ್ನನ್ನೇ ಪಣವಾಗಿಟ್ಟು ನಗುವನು ಕಣ್ಣಂಚಿನ ನೋವಿನ ಕತ್ತು ಹಿಸುಕುತ್ತಾ… ಕಾಣದ ಕನಸಿಗೆ ದಾರಿಯಾಗುವ ಆಸೆ ಬದುಕು ಬರಡಾಗಿರಲು ಭೂಮಿಗೆಲ್ಲಿ ಫಸಲು? ಬಾರದ ಬೆಳೆಗಾಗಿ ದಿನವಿಡೀ ಕಾಯುವನು ಬಹುಶಃ ನಾಳೆಯೂ ಕೂಡಾ!! ಹಸಿಮಣ್ಣ ಎಡೆಯಲ್ಲಿ ಗುಂಡಿತೋಡಿ ಉಸಿರ ಬಚ್ಚಿಡಬಹುದಿತ್ತು ನಿರಾಶಾವಾದಿಯಾಗಿದ್ದಲ್ಲಿ ಆದರೆ ಅವನಲ್ಲ….. ಹಸಿದ […]
ಇಷ್ಟೇನಾ ನಿನ್ನ ಬೆಲೆ…?
ಮನೆ ಮುಂದೆ ಒಲೆ,ಹಸಿ ತೆಂಗಿನ ಗರಿ, ತುಪ್ಪದ ಡಬ್ಬಿ, ಕಟ್ಟಿಗೆಯ ರಾಶಿ,ಬದಿಯಲ್ಲೊಂದು ಸೀಮೆಎಣ್ಣೆ ಡಬ್ಬ, ಸಾಕಾಗದಿದ್ರೆ ಒಂದು ಸ್ವಲ್ಪ ಪೆಟ್ರೋಲು,ಸುರಿಯುತ್ತಿದ್ದಂತೆ ಕೆಲವೇ ನಿಮಿಷಗಳಲ್ಲಿಬೂದಿ..ಬೂದಿ ಈ ನಿನ್ನ ಶರೀರ.ಇಷ್ಟೇನಾ ನಿನ್ನ ಬೆಲೆ…? ಒಂದು ಸಂಜೆ ಪ್ರಾಣ ಪಕ್ಷಿ ಹಾರಿ ಹೋಯಿತು,ತಾನು ಗಳಿಸಿದ್ದು,ಯಾರದ್ದೋ ಪಾಲಾಯಿತು. ಕೆಲವರು ದುಃಖ ವ್ಯಕ್ತಪಡಿಸುತ್ತಿದ್ದಾರೆ,ಉಳಿದವರು ತಮಾಷೆ ನೋಡುತ್ತಿದ್ದಾರೆ, ಅರೇ, ಬೇಗನೇ ಎತ್ತಿರಿ,ಕತ್ತಲಾಗುತ್ತ ಬಂತು,ಹೊಟ್ಟೆ ಹಸಿದಿದೆ,ಯಾರು ರಾತ್ರಿಯೆಲ್ಲಾ ಕಾಯುವರು? ಇದು ನೆಂಟರ ನಡುವಿನ ಸಂಭಾಷಣೆ…ಇಷ್ಟೇನಾ ನಿನ್ನ ಬೆಲೆ? ನಾ ಸತ್ತು ಆತ್ಮ ಮೇಲಕ್ಕೆ ಹಾರುತ್ತಿದೆ,ನಕ್ಷತ್ರಗಳ ಮೇಲೆ. […]
ದಾಸಶ್ರೇಷ್ಟ ಕನಕದಾಸರು
ಕರ್ನಾಟಕದ ಹರಿದಾಸಭಕ್ತ ಶ್ರೇಷ್ಟರಲ್ಲಿ ಒಬ್ಬರಾಗಿದ್ದ ಕನಕದಾಸರು ರಣರಂಗದಕಲಿ, ಜನಪ್ರಿಯದೊರೆ, ಸಮರ್ಥ ಆಡಳಿತಗಾರ, ಕವಿ, ಸಂತ, ಕೀರ್ತನಾಕಾರ, ಸಂಗೀತಗಾರ, ವಿಚಾರವಂತ ಮತ್ತು ಸಮಾಜ ಸುಧಾರಕರಾಗಿದ್ದರು. ದಾಸ ಪರಂಪರೆಯಲ್ಲಿ ಬರುವ 250 ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರೆಂಬುದು ನಿಜಕ್ಕೂ ಹೆಗ್ಗಳಿಕೆಯೇ. ಇವರು ಪುರಂದರದಾಸರ ಸಮಕಾಲೀನರು. ಧಾರವಾಡ ಜಿಲ್ಲೆಯ ಬಂಕಾಪುರ ತಾಲ್ಲೂಕಿನ ಕಾಗಿನೆಲೆಯ ಸಮೀಪದ ‘ಬಾಡ’ ಎಂಬ ಗ್ರಾಮದಲ್ಲಿ (ಈಗ ಹಾವೇರಿ ಜಿಲ್ಲೆಸಿಗ್ಗಾವಿ ತಾಲ್ಲೂಕಿನ ಬಾಡ) ಬೀರಪ್ಪನಾಯಕ ಮತ್ತು ಬಚ್ಚಮ್ಮ ಕುರುಬ ದಂಪತಿಗಳ […]
ಜೀವ ರಕ್ಷಕ, ಮುಳುಗು ತಜ್ಞ ಸುರೇಶ ಖಾರ್ವಿ ಭಟ್ಕಳ್ (ಕಡಲಾಳದ ಅಂತರಂಗ- ಬದುಕಿನ ಕಥೆ ವ್ಯಥೆ )
ಜೀವ ರಕ್ಷಣೆ ಮತ್ತು ಸಾವು ಅದು ಎಷ್ಟು ಕಠೋರವೆಂದರೆ ಆ ಚಕ್ರವ್ಯೂಹಕ್ಕೆ ಸಿಲುಕಿ ಬದುಕು ಬಂದವರರಿಗೆ ಮಾತ್ರ ಗೊತ್ತು .ಸಾವಿನಂಚಿನ ಕದ ತಟ್ಟಿ ಬದುಕಿ ಬರುವುದೆಂದರೆ ಅದೇನು ಆಟವಲ್ಲಾ.ಅದರ ಪರಿಕಲ್ಪನೆ ಮಾಡುವುದು ಕೂಡ ಕಷ್ಟ, ಅಂತಹ ಪರಿಸ್ಥಿತಿಯಲ್ಲಿ ಇರುವವರನ್ನು ಬದುಕಿಸುವವರೇ ಜೀವ ರಕ್ಷಕರು. ಜೀವರಕ್ಷಕರು ಅಕ್ಷರಶಃ ದೇವರಿಗೆ ಸಮನಾದವರು. ಆದರೆ ಇಂಥ ದೇವರುಗಳು ಮಾತ್ರ ಕಣ್ಣೀರಲ್ಲಿ ಕೈತೊಳೆತ್ತಾ ಇರುವುದು ಮಾತ್ರ ಶೋಚನೀಯ…!ಇವರ ನಿಸ್ವಾರ್ಥ ಸೇವಾ ಕಾರ್ಯವನ್ನು ಗುರುತಿಸಿ ಇವರಿಗೆ ಗೌರವದ […]
•••ಗೆಳೆತನ•••
ಎತ್ತ ಸಾಗುವುದೀ ಪಯಣ ಹೊತ್ತು ಮುಳುಗುವ ಮುನ್ನ ಚಿತ್ತ ಧೃತಿಗೆಡದಿದ್ದರೆ ಸಾಕು ಮತ್ತೆ ಶೋಧಿಸಲು ಸಮಯವಾದೀತು…..!! ಕಳೆದೆವು ಅದೆಷ್ಟೋ ಕ್ಷಣಗಳ ಸ್ನೇಹದ ಕಡಲಲ್ಲಿ ನೆನಪಿನ ದೋಣಿಯೇರಿ ಸಾಗಿದಷ್ಟೂ ದೂರ ಸೇರಿದಷ್ಟೂ ದಾರಿ….. ಸವಿದರೂ ಸವೆಯದ ಸ್ನೇಹವ ನೆನೆದು ಅಳುವುದೊಂದೆ ಉಳಿದಿದೆ ಇನ್ನೆಲ್ಲವ ನಾವಾಗಲೇ ಅಳಿಸಿಯಾಗಿದೆ. ಅನಂತತೆಯ ಅಲೆಯೊಂದು ಉದಯಿಸಿದೆ ಎದೆಯೊಳಗೆ ಸಾಗಲು ದೋಣಿ ಹಡಗುಗಳಿಲ್ಲ ಸೇರಲು ಸ್ನೇಹ ಸಂಬಂಧಗಳಿಲ್ಲ ತೀರ ಸಾಗರದಲ್ಲಿ ಒಂಟಿ ನಾನು….. ಮಾತಿನ ಶಿಖರಕ್ಕೀಗ ಮೌನದ ಮೆಟ್ಟಿಲು […]
ದೀಪಾವಳಿಯ ನೆನಪಿನಂಗಳ
ದೀಪಾವಳಿ ……ದೀಪಾವಳಿ…………. ಗೋವಿಂದ ಲೀಲಾವಳಿ.. ಅಳಿಯ ಮಗನಾ…….. ” ಹರಿಯಾ ಆ ಟೇಪ್ ಸೌಂಡ್ ಒಂಚೂರ್ ಕಮ್ಮಿ ಮಾಡ್.. ಕೆಮಿ ಕೆಪ್ಪ್ ಆಯ್ತಾ ನಿಮ್ದ್?”… ಗಡಾ ಹೋಯ್ ಕಮ್ಮಿ ಮಾಡ್, ಇಲ್ದಿರ್ ಅಪ್ಪ ಪಟಾಕಿಗ್ ದುಡ್ದ್ ಕೊಡುದಿಲ್ಲ.. ಹ್ಮಾಂ.. ಸರಿ; ಗಳಿನ್ ಒಟ್ಟಿಯಂಗ್ ದುಡ್ಡ್ ಇಟ್ಟದ್ ತೆಗುವಾ? ಪಟಾಕಿಗ್ ಆತ್ತ್…. ಉದ್ದ ತೆಮಿಗ್ ಕಟ್ಟದ್, ಬಿದ್ರಂಗ್ ಮಾಡದ್ ಗೂಡ್ ದೀಪ ಗಾಳಿಗ್ ಬಾಲ ಬೀಸ್ತಾ ಇತ್ತು…ಬಿಸ್ಲ್ ನೆತ್ತಿಗ್ ಏರುಕ್ ಹತ್ತಿತ್…. ಸೆಗ್ಣಿ […]
ಪುರಿ ಜಗನ್ನಾಥ….
ಪ್ರತಿಯೊಬ್ಬರ ಹೃದಯದಲ್ಲಿ ಒಂದೇ ವೇದ, ಮಂತ್ರ,ಭಕ್ತಿ. ಜಗನ್ನಾಥ ನಮ್ಮನ್ನು ರಕ್ಷಿಸು…ಕುಂದವಾಹಿನಿ ಓದುಗರಿಗೆ ನನ್ನ ಯಾತ್ರೆಯ ಮೊದಲ ತೀರ್ಥಸ್ಥಳವಾದ ಒಡಿಶಾ ರಾಜ್ಯದ ಪುರಿ ಜಗನ್ನಾಥ ದರ್ಶನದ ನನ್ನ ಅನುಭವ ನಿಮಗೆ ಕಟ್ಟಿ ಕೊಡುವ ಸಣ್ಣ ಪ್ರಯತ್ನ. ಶ್ರೀ ಕೃಷ್ಣ ಪರಮಾತ್ಮ ಬದರಿನಾಥದಲ್ಲಿ ಸ್ನಾನ, ಜ್ನಾನ ಪುರಿಯಲ್ಲಿ ಭೋಜನ, ದ್ವಾರಕಾದಲ್ಲಿ ಅಲಂಕಾರ,ಶಯನಹೀಗೆ ತನ್ನ ಹಲವಾರು ಆಯಾ ಕ್ಷೇತ್ರದಲ್ಲಿ ನಮಗೆ ದರ್ಶನ ನೀಡುವ ದೇವ..ಪುರಿಯಲ್ಲಿ ಜಗನ್ನಾಥನಿಗೆ ನಿತ್ಯ ಒಂಬತ್ತು ಸಮಯದಲ್ಲಿ ಅನ್ನದ ಖಿಚಿಡಿ ಸೇರಿದಂತೆ […]
ಅವಳೆಂದರೆ….
ಸೊ೦ಟಕ್ಕೆ ಸೆರಗು ಸಿಕ್ಕಿಸಿಕೊಂಡು, ಅತ್ತಿತ್ತ ಗಡಿಬಿಡಿ ಮಾಡಿಕೊಂಡು ಓಡಾಡುತ್ತಿದ್ದ ಆಕೆ ಇತ್ತ ಮನೆಯವರ ಮಾತಿಗೆ ಹೂ ಗುಡುತ್ತಾ, ಮಕ್ಕಳಿಗೆ ಹಾಗೆ ಮಾಡು,ಹೀಗೆ ಮಾಡು ಎಂದು ಮಾರ್ಗಸೂಚಿ ನೀಡುತ್ತಾ ,ಅಡುಗೆ ಕೋಣೆಯಲ್ಲೇ ಇದ್ದು ಮನೆಯವರ ಬೇಕು ಬೇಡಗಳ ದಿನಚರಿಯನ್ನ ಅವಳೇ ಸರಿದೂಗಿಸಿಕೊಂಡು ತನ್ನ ಕೆಲಸ ಮುಂದುವರೆಸುತ್ತಿದ್ದಳು. “ನೀರಿನಲ್ಲಿರೋ ಮೀನಿನ ಹೆಜ್ಜೆಯನ್ನಾದರೂ ಕಂಡು ಹಿಡಿಯಬಹುದು ಆದರೆ,ಹೆಣ್ಣಿನ ಮನಸ್ಸನ್ನು ಅರ್ಥ ಮಾಡಿಕೊಳ್ಳಲೂ ಸಾಧ್ಯವಿಲ್ಲ”ಎನ್ನೋ ಮಾತಿನ ಅರ್ಥ ತಿಳಿದದ್ದು ಸಂಸಾರಸ್ಥರಾದಾಗಲೇ ..!?ಅವಳೆಂದರೆ,ಮಾಟಗಾತಿಯೋ ! ಜಾದುಗಾರ್ತಿಯೋ ನಾ ಕಾಣೆ, […]
ಜಯ’ದೊಂದಿಗೆ ಮತ್ತೆ ಪ್ರಕಾಶಿಸಿ..
ಜಯ ಪ್ರಕಾಶ್ ಹೆಗ್ಡೆ…ಈ ಹೆಸರು ಕರ್ನಾಟಕ ಜನತೆಗೆ ಚಿರಪರಿಚಿತ ಮತ್ತು ಸ್ವಚ್ಚಾರಿತ ರಾಜಕಾರಣಿ,ವಿಶೇಷವಾಗಿ ಅವಿಭಜಿತ ಉಡುಪಿ ಜಿಲ್ಲೆಯ ಉದ್ಭವಕ್ಕೆ ಕಾರಣಿಕರ್ತರುಇಂದು ಉಡುಪಿ ಜಿಲ್ಲೆಯ ಹತ್ತು ಹಲವು ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಿದ ಕೀರ್ತಿ ಸಲ್ಲಬೇಕಾದ್ದು ಅದು ಜೆ.ಪಿ ಹೆಗ್ಡೆ ಅವರಿಗೆ ಎಂದರೆ ಅದು ಅತೀಶಯೊಕ್ತಿ ಅಲ್ಲ. ಅಧಿಕಾರ ಇರಲಿ ,ಇಲ್ಲದಿರಲಿ ತನ್ನತ್ವ ಮತ್ತು ತನ್ನ ಸಿದ್ಧಾಂತ ಎಂದಿಗೂ ಬಿಟ್ಟುಕೊಟ್ಟ ಮನುಷ್ಯ ಅಲ್ಲಎಂಬತ್ತರ ದಶಕಗಳಲ್ಲಿ ಎರಡು ಬಾರಿ ವಿದೇಶಿ ಸಂಸತ್ತಿನಲ್ಲಿ ಸೆನೆಟ್ ಅಧ್ಯಕ್ಷರಾಗಿ […]