ಉಡುಪಿ ( ನ .17) : ಕರ್ನಾಟಕ ಯುವ ಬರಹಗಾರರ ಬಳಗದ ಉಡುಪಿ ಜಿಲ್ಲಾ ಘಟಕದ ವತಿಯಿಂದ ಮುಂಬರುವ ಡಿಸೆಂಬರ್ ತಿಂಗಳಿನಲ್ಲಿ ವಿಶ್ವ ಮಾನವ ರಾಷ್ಟ್ರಕವಿ ಕುವೆಂಪು ಸಂಸ್ಮರಣೆಯ ಅಂಗವಾಗಿ ಜಿಲ್ಲಾ ಮಟ್ಟದ ಪ್ರಥಮ ಕವಿಗೋಷ್ಠಿಯನ್ನು ಉಡುಪಿ ನಗರದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದ್ದು, ಜಿಲ್ಲೆಯ ಆಸಕ್ತ ಕವಿ-ಕವಯಿತ್ರಿಯರಿಂದ ಕವನಗಳನ್ನು ಆಹ್ವಾನಿಸಲಾಗಿದೆ ಎಂದು ಜಿಲ್ಲಾಧ್ಯಕ್ಷರಾದ ಜಿ.ಎಸ್. ಕಿರಣ್ ಕುಮಾರ್ ತಿಳಿಸಿದ್ದಾರೆ. ಈ ಕವಿಗೋಷ್ಠಿಯಲ್ಲಿ ಭಾಗವಹಿಸಲು ಇಚ್ಛಿಸುವ ಜಿಲ್ಲೆಯ ಯಾವುದೇ ವಯೋಮಾನದ ಆಸಕ್ತ ಕವಿ-ಕವಯಿತ್ರಿಯರು […]
Category: ಕವನ/ಹನಿಗವನ
ಶ್ರೀ ಗುರುಭ್ಯೋ ನಮಃ
ಶ್ರೀ ಗುರುಭ್ಯೋ ನಮಃ ಜ್ಞಾನ ಸಮ್ಮುದ್ರವ ಕಲಕಿಸ್ಮೃತಿಪಟಲದಲ್ಲಿ ತಲಪಿವಿದ್ಯೆ – ಬುದ್ಧಿ ವಿನಯ-ವಿಧೇಯ ನೀಡುವ ಶ್ರೇಷ್ಠನೆಶ್ರೀ ಗುರುಭ್ಯೋ ನಮಃಶ್ರೀ ಗುರುಭ್ಯೋ ನಮಃಶ್ರೀ ಗುರುಭ್ಯೋ ನಮಃಶ್ರೀ ಗುರುಭ್ಯೋ ನಮಃ. ಶಾರದೆಯ ನಿವಾಸ ನಿನ್ನ ಜಿಹ್ವವುಮಮತೆ ತುಂಬಿರುವ ಎದೆ ಭಾವವುಪ್ರೀತಿ ನೀತಿಯೇ ನಿನ್ನ ಕಣ್ಗಳುಕ್ಷಮೆ ತಾಳ್ಮೆಯೇ ನಿನ್ನ ಭುಜಗಳುಶಿಸ್ತು ಗತ್ತೆ ನಿನ್ನ ಕಾಲುಗಳುಧೈರ್ಯ ಸ್ಥೈರ್ಯವೇ ನಿನ್ನ ಕರಗಳುನಖ-ಶಿರ ತುಂಬಾ ಕೌಶಲ್ಯ ತುಂಬಿದ ಕುಂಜವೇಶ್ರೀ ಗುರುಭ್ಯೋ ನಮಃಶ್ರೀ ಗುರುಭ್ಯೋ ನಮಃಶ್ರೀ ಗುರುಭ್ಯೋ ನಮಃಶ್ರೀ ಗುರುಭ್ಯೋ […]
ಬಾವುಟದ ಪಾಠ
ಬಾವುಟದ ಪಾಠ ತ್ರಿವರ್ಣ ಧ್ವಜದ ಮಹಿಮೆನಮ್ಮೆಲ್ಲರ ಗರಿಮೆಉತ್ತುಂಗಕ್ಕೆ ಹಾರುತಿರುವ ನಮ್ಮ ಬಾವುಟಸಾರುತಿಹುದು ಜೀವನದ ಪಾಠ. ಬಾವುಟದ ಮೊದಲ ಬಣ್ಣ ಕೇಸರಿತ್ಯಾಗ-ಶೌರ್ಯದ ಪ್ರತೀಕವೇ ಸರಿವಿಶ್ವಕ್ಕೆ ಹೇಳುತಿಹುದು ಸಾರಿ ಸಾರಿಭಾರತೀಯರ ಬಲ, ಬೆಂಬಲ ಹಂಬಲದ ಐಸಿರಿ. ಮಧ್ಯಮ ಬಣ್ಣ ಶ್ವೇತಸತ್ಯ – ಶಾಂತಿಯ ಇದು ಸಂಕೇತಭಾರತ ಎಂದಿಗೂ ವಿಶ್ವ ಶಾಂತಿಯ ಧೂತಸತ್ಯ ಪ್ರತಿಷ್ಠಾಪನೆಗೆ ಆಗುವುದು ಅವಧೂತ. ಬಿಳಿಯ ಮಧ್ಯ ಅಶೋಕ ಚಕ್ರ ನೀಲಿಏನು ಹೇಳುತ್ತಿದೆ ನೀವು ಕೇಳಿ?24 ತಾಸು ನಡೆಮುಂದೆ ಧರ್ಮದ ಹಾದಿಯಲಿಪ್ರಗತಿ […]
ಹಕ್ಕಿ & ಪುಟಾಣಿಗಳು
ನಭದಿ ಹಾರುವ ಹಕ್ಕಿಗಳೆ ನಮ್ಮಯ ಕೂಗನು ಆಲಿಸಿ ಹಾರುವ ಆಸೆಯು ಮನದಲಿ ಹುಟ್ಟಿದೆ ನಮಗೂ ಹಾರಲು ಕಲಿಸುವಿರಾ..? ಅಷ್ಟು ಎತ್ತರ ಹೇಗೆ ಏರಿದಿರಿ ನಮಗೂ ಸ್ವಲ್ಪ ತಿಳಿಸುವಿರಾ? ಗಾಳಿಯ ಪಟದಂತೆ ಮೇಲೆ ಕೆಳಗೆ ತೇಲುತಾ ಆಡುತಾ ಮೆರೆಯುವಿರಿ ಸಾಲುಸಾಲಾಗಿ ಹಾರುವ ಹಕ್ಕಿಗಳೆ ನಮಗೂ ಶಿಸ್ತನು ಕಲಿಸಿದಿರಿ ಭೂಮಿಯ ತುಂಬಾ ಚಿಣ್ಣರ ದಂಡು ಕೇಕೆಯ ಹಾಕುತಾ ನಲಿಯುತಿದೆ ಬೇಗನೆ ಬನ್ನಿರಿ ನಮ್ಮೊಡನೆ ಸರ್ರನೆ ಇಳಿಯುತ ಭೂಮಿಯ ಕಡೆ ಜೊತೆ ಜೊತೆಯಾಗಿ ನಲಿಯುವ […]
•••ಅವಳೆಂದರೆ•••
ನಾ ಹೇಗೆ ವರ್ಣಿಸಲಿ ನಿನ್ನ ಪುಸ್ತಕ ಪೆನ್ನುಗಳಿಗೆ ಸೀಮಿತವೇ … ನಿನ್ನೆಲ್ಲಾ ಅನುರಣನ ನೆನಪುಗಳು..? ನಾಲ್ಕು ಸಾಲು ಗೀಚಿದರೆ ಮುಗಿಯಿತೇ ನಮ್ಮೆಲ್ಲ ಸ್ನೇಹ ಸಂಬಂಧಗಳು….?? ತಡಕಾಡುವುದೀ ಮನ ಹೊಸ ಪದ ಹುಡುಕಲು…. ಮಿಡಿಯುವುದೀ ಕ್ಷಣ ನಿನ್ನತನವ ಗುರುತಿಸಲು…. ನಾ ಹೇಗೆ ಬರೆಯಲಿ ಹೇಳು….. ಪದಕಡಲ ಸಾಮ್ರಾಜ್ಞಿ ನೀನು…. ಪದ ಪೋಣಿಸುವ ತಿರುಕ ನಾನು…. ಒಮ್ಮೊಮ್ಮೆ ಯೋಚಿಸುವೆ ನಿನ್ನ ನೆರಳ … ಚಿತ್ರಿಸುವ ಕಲಾಕಾರ ನಾನು…. ಚಿತ್ರಭಂಡಾರವೇ ನೀನಾಗಿರುವಾಗ ನಾನೆಷ್ಟು ಗೀಚಲಿ ಹೇಳುನಿನ್ನ […]
•••ಅಲೆಮಾರಿ•••
ಕವಿಸಂಚಾರ ಹೊರಟಿದೆ ಕಾಣದೂರಿಗೆ ನೆನಪ ಮೈಲಿಗಲ್ಲುಗಳ ಜೊತೆಗೆ; ಹರ್ಷೊಲ್ಲಾಸದ ಗಡಿ ಹುಡುಕಿ ನಡಿಗೆ… ನಡೆದಷ್ಟೂ ನಡೆಸುವ ಪಥಕೆ ಹೆಜ್ಜೆಗಳು ಮುನ್ನುಡಿ ಬರೆದಿವೆ,, ಗೀಚಿದಷ್ಟೂ ಜಿನುಗುವ ಭವಕೆಪುಟಗಳು ಸೋಲನೊಪ್ಪಿ ತಿರುಗಿವೆ ..ಅಕ್ಷರವೆಲ್ಲಾ ಮಾಸಿ ಮರೆಯಾಗಿವೆ..!! ದಿಗಂತ ಕಡಲಿನ ನಡುವಿನಲ್ಲಿ ಅನಂತತೆಯ ಹಾಯಿದೋಣಿ…. ಸಾಗುತಿದೆ ನಿರ್ದಿಗಂತವಾಗಿ ಏರಿ ಕವಿಕಲ್ಪನೆಗಳನ್ನ ಅಲ್ಪತೆಗೆ ತೂರಿ!! ಅಲ್ಪಾನಂತತೆಯ ಕದನದಲಿ ಸಕಲತೆಯ ಕಿಡಿ ಉದ್ಭವಿಸಿಧಗಿಸಿತೇ ಧರೆಹೊತ್ತಿ ಜ್ವಾಲೆಯಲಿ?? ಸುಪ್ತ ಮನಸಿನ ಮಿತಿಮೀರಿ…..!! ಸವಿದಷ್ಟೂ ಸವೆಯುತಿದೆ ಜೀವನ ತುಂಬಿದಷ್ಟೂ ಬತ್ತುತಿದೆ […]
ಎಣಿಕೆ
ಒಂದು.. ಎರಡು… ಮೂರು…ನೂರಾ ಎಪ್ಪತ್ತೈದು…. ಅಲ್ಲಲ್ಲ…. ಎಪ್ಪತ್ತಾರು…ಛೇ.. ಲೆಕ್ಕ ತಪ್ಪಿತು…ಇರುಳಲ್ಲಿ ನಕ್ಷತ್ರಗಳನ್ನು ಎಣಿಸುತ್ತಿದ್ದೇನೆಮತ್ತೆ ಮತ್ತೆ ನನಗೆ ಲೆಕ್ಕತಪ್ಪುತ್ತಿದೆಬುಟ್ಟಿಯಲ್ಲಿದ್ದ ಮಲ್ಲಿಗೆ ಹೂಗಳು ಚೆಲ್ಲಿದಂತೆಬಾನಿನ ತುಂಬಾ ಹರಡಿ ಬಿದ್ದಿವೆಒಂದು ಕ್ರಮವೆಂಬುದೇ ಇಲ್ಲ, ಅಥವಾ ನನಗೆ ತಿಳಿದಿಲ್ಲಅದೆಷ್ಟೋ ದಿನಗಳಿಂದ ಲೆಕ್ಕಹಾಕುತ್ತಿದ್ದರೂ ಎಣಿಕೆ ತಪ್ಪಿಮೊದಲಿನಿಂದಲೇ ಶುರುಮಾಡುತ್ತಿದ್ದೇನೆಎಷ್ಟನೇ ಸಲ? ಅದರ ಲೆಕ್ಕವೂ ನನಗಿಲ್ಲಲೆಕ್ಕ ಹಾಕುತ್ತಿರುವುದಾದರೂ ಯಾಕೆ?ನನಗೂ ತಿಳಿದಿಲ್ಲ. ಆದರೂ ಬೇಕು, ಎಣಿಸಲೇ ಬೇಕುಕಪ್ಪನೆ ಮೋಡದೊಳಗೆ ಅವಿತುಕುಳಿತ ನಕ್ಷತ್ರಗಳನ್ನೂಹೊರಗೆಳೆದು ತೊಳೆದು ಎಣಿಸಬೇಕುಎಂದಾದರೊಂದು ದಿನ ನನಗೆ ಪಕ್ಕಾ ಲೆಕ್ಕ ಸಿಕ್ಕೀತು […]
ಸಂಗೀತ
ನದಿಯ ಮೇಲೆ ತೇಲುವ ನಾವೆಯ ಗಾನಕೆಹರಿವ ನೀರಿನ ನಾದವಿಲ್ಲಿ ಹಿನ್ನಲೆ ಸಂಗೀತಅಂಬಿಗನೀಗ ಮೈಮರೆತಿದ್ದಾನೆಆ ಶಿಖರದ ಮೈಸವರಿ ಸಾಗುತ್ತಿದೆ ತಂಗಾಳಿಕುಣಿವ ಸಸ್ಯಶ್ಯಾಮಲೆಯ ನೋಡುತ್ತಲೀಗನನ್ನೂರು ಹಾಗೇ ಮೈಮರೆತಿದೆಗದ್ದೆಯೊಳಗಿನ ರೈತನ ಹಾಡನ್ನು ಪೈರುಗಳು ಆಲಿಸಿವೆಅವನ ಪ್ರತಿಹೆಜ್ಜೆಗಳೂ ನಾಟ್ಯದಂತೆಯೇಧರಿತ್ರಿಗೂ ಏನೋ ರೋಮಾಂಚನವಾಗುತ್ತಿದೆಪತಂಗಗಳೂ ಜೇನ್ನೊಳಗಳೂ ಹುಡುಕಾಡಿವೆ ಮಧುವಿಗಾಗಿಹೂವೊಂದು ಸುಖಿಸುತ್ತಿರಲೀಗ ಗೋವಿನ ಕೊರಳ ಗಂಟೆಗಳುಹಿಮ್ಮೇಳ ನುಡಿಸುತ್ತೀವೆಮೂಡಣದಲ್ಲೀಗ ನೇಸರನಾಗಮನದ ಸಮಯಪಕ್ಷಿಗಳೀಗ ಆಲಾಪನೆ ಶುರುಹಚ್ಚಿಕೊಂಡಿವೆಮರದೆಲೆಗಳಿಂದ ಬೀಳುವ ಮುತ್ತಿನ ಹನಿಗಳೂ ಏನೋವಿಶೇಷ ಪರಿಣಾಮವನ್ನುಂಟುಮಾಡಿವೆ ಸಂಗೀತಕ್ಕೆನಡುವಲ್ಲಿ ಕೊಡವ ಹೊತ್ತು ಸಾಗಿದ ನೀರೆಯದ್ದೊಂದು ಕಾವ್ಯಹಟ್ಟಿಯನ್ನು ಬಿಟ್ಟ […]
ಓ ಗುಣವಂತನೆ
ಓ ಗುಣವಂತನೆನೀ ಗುಣಗಳ ಖಜಾನೆನೀ ಗುಣಕಾರಿ, ನೀನೇ ಗುಣಾಧಿಕಾರಿನೀ ಸುಗುಣಾಚಾರಿ, ನೀನೇ ಗುಣಗಳ ರೂವಾರಿನೀ ಗುಣವರ್ಧಕ, ನೀನೇ ಗುಣಾತ್ಮಕನೀ ಗುಣವಿಶೇಷ, ನೀನೇ ಗುಣವಾಚಕಗುರಿ ತೋರಿಸುವ ಗುರುವೇನಾ ಹೇಗೇ ಮಾಡಲಿ ನಿನ್ನ ಗುಣಗಾನಓ ಗುಣಮಟ್ಟದ ಉತ್ತುಂಗವೆನಿನಗೆ ಕೋಟಿ ಕೋಟಿ ನಮನ. ಡಾ. ಉಮ್ಮೆ ಸಲ್ಮಾ ಎಂ., ಸಹಾಯಕ ಪ್ರಾಧ್ಯಾಪಕರುಕ್ರೈಸ್ಟ್ ವಿಶ್ವವಿದ್ಯಾಲಯಬೆಂಗಳೂರು ೫೬೦೦೨೯