ಪಶ್ಚಾತಾಪ ನಾನಾಗ ಕೂಗಿ ಅದೆಷ್ಟೊ ಬೈದಿದ್ದೆಬಾಯಿಯೆ ಆಯುಧವಾಗಿನೀನೆ ನನ್ನ ಶತ್ರು ಎಂಬಂತೆನಿನ್ನನ್ನೆ ದಿಟ್ಟಿಸಿ ನೋಡುತಿದ್ದೆ ಬೖೆಗುಳವನು ಚೀಲದಲಿ ತುಂಬಿನಿನ್ನ ಮೈ ತುಂಬ ಸುರಿದಿದ್ದೆಕೋಪ ಎಂಬ ಕೆಂಡವನುನಿನ್ನ ಸುತ್ತಲು ಉದಿದ್ದೆ ಎಲ್ಲಾವನು ಮರೆತು ಪ್ರೀತಿ ಎಂಬಇಡೀ ಪರ್ವತ ವನ್ನು ಹೊತ್ತು ತಂದುಮತ್ತೆ ಮದ್ದಿಸುವ ಜೀವಿನೀನೊಬ್ಬನೆ ಅಪ್ಪ…. ತಪಾಯ್ತೆಂಬ ಸನ್ನೆ ನನ್ನ ಕಣ್ಣಿಂದತಪ್ಪಿಲ್ಲವೆಂಬ ಪ್ರೀತಿ ನಿನ್ನ ಕಣ್ಣಿಂದನನ್ನ ಮುಖ ನಿನ್ನ ಎದೆಗಂಟಿದಾಗಸತ್ತು ಬದುಕಿದ ಅನುಭವ… ✍ಸ್ವಸ್ತಿಕ್ ಚಿತ್ತೂರು (ಸ್ವ.ಚಿ.)
Category: ಸಮಗ್ರ ಕನ್ನಡ
ಅ(ಸ)ಬಲೆ
ಆಕೆ ನನ್ನಂತೆ ಕನಸು ಕಂಡಿರಬಹುದಲ್ಲವೇ,ರೆಕ್ಕೆ ಬಿಚ್ಚಿ ಹಾರಾಡೋ ಕನಸು, ಯಾರ ಪರಿವಿಲ್ಲದೇ ಗುನುಗಾಡೋ ಮನಸು ಆಕೆಗೂ ಇದ್ದಿರಬಹುದಲ್ಲವೇ!ಆದರೆ ಇಂದು ಇನ್ನೊಬ್ಬರ ಖುಷಿಯಲಿ ತನ್ನ ಕನಸನ್ನು ಕಾಣುತಿರುವಳಷ್ಟೇ. ಚಿಕ್ಕ ಪುಟ್ಟ ವಿಷಯಕ್ಕೂ ಕೂಗಾಡೋ ನಮ್ಮ ಪರಿಸ್ಥಿತಿಗೆ ,ಕೋಪ ಆಕೆಗೂ ಬರುವುದೇ ಎನ್ನುವುದು ಪ್ರಶ್ನೆ.ನಮ್ಮ ಕೋಪ ಕೂಗಾಡಿ ಕರಗಿದರೆ,ಆಕೆಯ ಕೋಪ ಪಾತ್ರೆಗಳ ಮೇಲೆ ತೀರಿಸಿಕೊಂಡು, ಒಬ್ಬಳೇ ನೀರ್ಜೀವ ವಸ್ತುಗಳ ಮೇಲೆ ಕೋಪ ಹೊರಗೆ ಹಾಕುತ್ತಾಳೆ. ಇನ್ನೂ ಇವಳ ಹಾಗೆ ಮಾಡಬೇಡ, ಹೀಗೆ ಮಾಡಬೇಡ […]
ಹೋಟೆಲ್ ಬದುಕು
ಹೋಟೆಲ್ ಕೆಲಸ ಎಂದಾಕ್ಷಣ ಬೇರೆ-ಬೇರೆ ರೀತಿ ಆಲೋಚನೆ ಮಾಡುವ ಜನರಿದ್ದಾರೆ. ಅದೇನೋ ಗೊತ್ತಿಲ್ಲ ಕೆಲವರು ಹೋಟೆಲ್ ಕೆಲಸ ಎಂದರೆ ಸ್ವಲ್ಪ ತಾತ್ಸಾರದಿಂದ ಕಾಣುತ್ತಾರೆ. ಅಷ್ಟೇ ಅಲ್ಲ ಚುಚ್ಚುಮಾತುಗಳನ್ನಾಡಿ ಮನ ನೋಯಿಸುತ್ತಾರೆ. ಹೆಣ್ಣು ಗಂಡಿನ ವಿಚಾರದಲ್ಲೂ ಕಡೆಗಣಿಸುವ ಮನೋಭಾವನೆಯಿಂದ ಕಾಣುತ್ತಾರೆ. ಆದರೆ ಕಡೆಗಣಿಸುವವರಿಗೆ ಅರಿವಿಲ್ಲ ಕೋಟ್ಯಂತರ ಜನರ ಜೀವನ ಇದರಿಂದ ಸಾಗುತ್ತಿದೆಯೆಂದು. ಹೌದು ಅದೆಷ್ಟೋ ಯುವಕರು ಕೆಲಸ ಹುಡುಕಿಕೊಂಡು ಊರುಗಳಿಂದ ಪಟ್ಟಣಕ್ಕೆ ವಲಸೆ ಬಂದಿರುತ್ತಾರೆ. ಆಗ ಅವರ ಕೈ ಹಿಡಿಯುವುದು ಈ […]
ಸಂಸ್ಕಾರ – ಸಂಸ್ಕ್ರತಿ
ಹೌದು ಸ್ನೇಹಿತರೇ,ಗಾಳಿಬಂದ ಕಡೆಯಲ್ಲಿ ತೂರಿಕೊಂಡು ಅತೀ ಧಾವಂತದಲ್ಲಿ ಮುನ್ನೆಡೆಯುತ್ತಿರುವ ನಾವು ಹಾಗೂ ನಮ್ಮ ಯುವ ಪೀಳಿಗೆ ಸಂಸ್ಕಾರವನ್ನು ಮರೆಯುವತ್ತ ಹೆಜ್ಜೆಗಳನ್ನಿಡುತ್ತಿದ್ದೇವೆ.. ಇಲ್ಲಿವೆ ನೋಡಿ ಸಂಸ್ಕಾರದ ಪಾಠಕೈಯಲ್ಲಿ ಕೋಟಿ ಇದ್ದರು ಗುರು ಹಿರಿಯರನ್ನು ಕಂಡೊಡನೆ ಕಾಲಿಗೆ ಬೀಳೋದು ಸಂಸ್ಕಾರ..! ಎಷ್ಟೇ ಆಧುನಿಕತೆ ಬಂದರು ಹಣೆಯ ಮೇಲಿನ ಬೊಟ್ಟು ಸಂಸ್ಕಾರ..! ಎಷ್ಟೇ ಆಧುನಿಕತೆಯ ಗಾಳಿ ಬೀಸಿದರು ಜಡೆಯ ತುಂಬ ಹೂವು ಸಂಸ್ಕಾರ..! ಡಿಗ್ರಿ ಮೇಲೆ ಡಿಗ್ರಿ ಪಡೆದರು ಗುರು ಕಂಡೊಡನೆ ತೋರಿಸುವ ಭಯ […]
ಬದುಕಿನ ತಲ್ಲಣ
ಬದುಕು ಎಂದರೇನು? ಇದನ್ನುತಿಳಿಯೋ ಪ್ರಯತ್ನ ಹಲವು ಬಾರಿ ಮಾಡಿದ್ದುಂಟು.ಅದೆಷ್ಟೋ ಬಾರಿ ಇನ್ನೊಬ್ಬರ ಇಷ್ಟಕ್ಕೆ , ನಮ್ಮ ಇಷ್ಟ- ಕಷ್ಟ ಬದಲಾಗುತ್ತಿದ್ದಾಗ, ನಾವು ಮಾಡುತಿರುವುದಂತೂ ಪ್ರದರ್ಶನ ಅನ್ನಿಸುವುದಂತೂ ಸತ್ಯ. ಈ ನಾಟಕವೇಕೆ? ಅಂದ ಮಾತ್ರಕೆ ಇವರೆಲ್ಲರ ಮಾತೇಕೆ ಒಪ್ಪಬೇಕು.! ಒಮ್ಮತ ಸೂಚಿಸದೇ ಹೋದರೆ?ಆಗಂತೂ, ಅವರ ಮಾತಿಗೆ, ಅಪವಾದಕ್ಕೆ ಎಲ್ಲಿ ಬಲಿಯಾಗುತ್ತೇವೆನೊ ಎನ್ನುವ ಭಯ, ಅದನ್ನು ಮೀರಿ ಒಬ್ಬಂಟಿಯಾಗಿ ಹೋರಾಡೋ ಮನಸು ಮಾಡಿದಾಗ, ಮುಂದೆ ನಿಲ್ಲೋ ಸವಾಲು ಹಲವಾರು… ನಮ್ಮ ಮಾತೇ ದಿಕ್ಕರಿಸಿರುವೇ..!?, […]
ಅಮ್ಮನ ಸೆರಗು
ಇಂದಿನ ಮಕ್ಕಳಿಗೆ ಅಮ್ಮನ ಸೆರಗಂಚಿನ ಅನುಭವ ಕಡಿಮೆ. ಏಕೆಂದರೆ ಅಮ್ಮ ಸೀರೆ ಉಡುವುದೇ ಕಡಿಮೆ. ಹಬ್ಬಕ್ಕೆ ಹಾಗೂ ಇನ್ನಿತರ ಸಭಾ ಸಮಾರಂಭಕ್ಕೆ ಉಡುವ ಸೀರೆಯ ಸೆರಗು ಇದಲ್ಲ. ಅದು ಬಲು ನಾಜೂಕು. ಇದರ ಮಹಿಮೆಯೇ ಬೇರೆ. ಉಪಯೋಗವಂತೂ ಒಂದಕ್ಕಿಂತ ಒಂದು.ಬಾಲ್ಯದಲ್ಲಿ ನಮ್ಮ ಅಮ್ಮನ ಸೇರಗೆಂದರೆ ಅದೊಂದು ಖಜಾನೆ ಇದ್ದಂತೆ, ನಾವೆಲ್ಲಿಯಾದರೂ ಸಪ್ಪೆ ಮೊರೆ ಹಾಕಿದ್ದೇವೆಂದರೆ ಅಮ್ಮ ತನ್ನ ಸೀರೆಯ ಸೆರಗಿನ ತುದಿಯಲ್ಲಿದ್ದ ಆ ಖಜಾನೆ ಗಂಟನ್ನು ಬಿಡಿಸಿ ಒಂದೆರಡು ಚಿಲ್ಲರೆ […]
ಆ ಹಿತನುಡಿ
ಆ ಹಿತನುಡಿ ಮಿತವಾಗಿದ್ದೇ ಮಿಗಿಲು ಹಿತವಾದದ್ದೇ ಹಿರಿದು ಎಂದೆನಿಸುತ್ತಿತ್ತು ಆ ಹಿತನುಡಿ ಶತಸಂವತ್ಸರ ಯೋಜನೆಯ ಈ ಬಾಳ ಪುಸ್ತಕಕೆ ನೀ ಬರೆದೆ ಮುನ್ನುಡಿ ನೀನೇ ರಚಿಸಿದ ಜೀವನ ಕೃತಿಗೆ ನಿನ್ನದೇ ಸಂಯೋಜಿತ ಪರಿವಿಡಿ ಸ್ವ ಬಿಂಬವ ಕಂಡಾಗೆಲ್ಲಾ ಹೇಳಿತು #ನಾನಲ್ಲ_ನೀನೆ ಎನ್ನುವ ಕನ್ನಡಿ #ಏನೇ_ಹೇಳಿ. #ನಾನು ಸಮಾಜಕ್ಕೆ ಸಲ್ಲಬೇಕೆಂದರೆ ಸ್ವಲ್ಪವಾದರೂ ಕೊಟ್ಟುಬಿಡಿ.
ಇಳಿಸಂಜೆ
ಇಳಿಸಂಜೆಯ ಹೊತ್ತು , ಅದು ನೀನಿಳಿದು ಹೋಗುವ ಹೊತ್ತು ನೀನೆಂದರೆ ಮಸ್ತಕಕ್ಕೇರುವ ಮತ್ತು , ವಾಸ್ತವಕ್ಕೆ ಬರಲೆಂದೇ ನಿತ್ಯ ನೀನಿಳಿದು ಹೋಗುವೆ ಎನ್ನುವುದು ಗೊತ್ತು ಕಾದಿರುವೆ ಬಹಳ ಕಾತುರವ ಹೊತ್ತು , ಕಳೆದುಕೊಂಡಿರುವುದೂ ಬಹಳವೇ ಇತ್ತು #ಏನೇ_ಹೇಳಿ , ಈ ಮರುಳನಿಗೇನು ಗೊತ್ತು , ಮರಳಿನ ಮೇಲೆ ಮೂಡುವುದಿಲ್ಲವೆಂದು ನಿನ್ನ ಆ ಹೆಜ್ಜೆಯ ಒತ್ತು.