ಹುಟ್ಟು ಹುಡುಗಾಟದಿಂದ ಹುಟ್ಟಿಕೊಂಡ ಹುಚ್ಚು ಈ ಹುಡುಕಾಟ, ಕಟ್ಟಿದ ಕನಸುಗಳಿಗೆ ಕಟ್ಟೆಯ ಕಟ್ಟಲು ಗಟ್ಟಿಯ ರಟ್ಟೆಗಾಗಿ ಹುಡುಕಾಟ, ಹೊಟ್ಟೆಯೆಂಬ ಪಟ್ಟಣವಾಸಿಗಳ ಹೊಟ್ಟೆಯ ಹೊರೆಯಲು ತುತ್ತಿನ ಪೊಟ್ಟಣಕ್ಕಾಗಿ ಹುಡುಕಾಟ, ಬೆಟ್ಟದಷ್ಟಿರುವ ಕಷ್ಟವ ಕುಟ್ಟಿ ಪುಡಿಗೈಯುವ ಬಲಿಷ್ಠ ಆ ಮುಷ್ಟಿಗಾಗಿ ಹುಡುಕಾಟ, ಸೃಷ್ಟಿಯ ಸೌಧದ ಮೆಟ್ಟಿಲ ಮೇಲೆ ನಿಂತು ಹಾಯಿಸಿದ ದೃಷ್ಟಿ ಆ ಸೃಷ್ಟಿಕರ್ತನಿಗಾಗಿ ಹುಡುಕಾಟ. #ಏನೇ_ಹೇಳಿ, ಸದಾ ನನ್ನನ್ನೇ ನಾ ಹುಡುಕಿಕೊಳ್ಳುವ #ಪಾಗಲ್ ಆಗದೆ, ಅನ್ಯರ ಅನಿಸಿಕೆ, ಅನುಮಾನಗಳ ಹುಡುಕಿ ಬಗೆಹರಿಸುವ […]
Category: ಸಮಗ್ರ ಕನ್ನಡ
ಹೆಮ್ಮೆಯ ಕರುನಾಡು – ಕನ್ನಡ
ಕರ್ನಾಟಕ ಎಂಬ ಪದದಲ್ಲೇ ಎಷ್ಟು ಮಾಧರ್ಯತೆ ಇದೆ ! ಕರ್ನಾಟಕ ಅಥವಾ ಕರ್ಣಾಟಕ ಎಂದರೆ ಅತ್ಯುನ್ನತ, ಶಿಖರಪ್ರಾಯ, ಎತ್ತರವಾದ ಪ್ರದೇಶ ಎಂಬ ಅರ್ಥಗಳಿವೆ. ಕರ್ನಾಟಕ ಪದದ ಉತ್ಪತ್ತಿ ಹುಡುಕಲು ಹೋದರೆ ಅದರ ಮೂಲ ಒಂದನೇ ಶತಮಾನದವರೆಗೂ ಹರಡಿಕೊಂಡಿದೆ.
ಭಾರತ್ ಮಾತಾಕಿ ಜೈ
ನಿನ್ನಯ ಮಡಿಲಿನಲ್ಲಿ ನೆತ್ತರ ಮಡುವಿನಲ್ಲಿ ಮಲಗಿದ್ದಾಗಲೂಅರಿಗಳಾಡುವ ಪ್ರಶ್ನೆಗೆ ಗುಡುಗುಡುಗಿ ನೀಡುವ ಉತ್ತರವೊಂದೆ “ನಿನ್ನ ಕೀರ್ತಿಯು ಜಗದಿ ಮೆರೆಯಲಿ ಒಂದೇ ಆಸೆಯು ಮನದಲಿ ಎಂದೆ” ಭಾರತ್ಮಾತಾಕೀ_ಜೈ . . . .🇮🇳 Feb_14_2019 #Pulwama_Attack 🙁
Net – Work
Net – Work ಕಟ್ಟು ಪಾಡುಗಳ ನಡುವೆ ಬದುಕು ಕಟ್ಟುವ ಪಾಡು ಪೆಟ್ಟುಗಳ ನಡುವೆ ಪಟ್ಟು ಬಿಡದೆ ಕಟ್ಟುವ ಗೂಡು ದಿಟ್ಟವಾಗಿ ಅಟ್ಟದಿ ಕುಳಿತು ಮೌನದಿ ಹಾಡುವ ಹಾಡು #ಏನೇ_ಹೇಳಿ, ಒಟ್ಟು ಇಷ್ಟ ಕಷ್ಟ ನಷ್ಟಗಳ ನಡುವೆ ನಡೆಯುವುದು ಸಂತುಷ್ಟ ಜೀವನದ ಹೊಟ್ಟೆಪಾಡು . #Say_Whatever, Life Is a ” Net – Work ” . . . . 🕸️
ಸಮುದಾಯ ತಿಂಗಳ ಕಥಾ ಓದು
ಕೊರೋನಾ ಎಂಬ ವಿಚಿತ್ರ ಸಂಕಟದ ಸಂದರ್ಭದಲ್ಲಿ ಆಧುನಿಕ ರಂಗಭೂಮಿಯ ಹೊಸ ಸಾಧ್ಯತೆ ಮತ್ತು ದಾರಿಗಳನ್ನು ಕಂಡುಕೊಳ್ಳುತ್ತಿರುವಾಗ ಈ ಹಿನ್ನೆಲೆಯಲ್ಲಿ ನಮ್ಮದು ಈ ಪ್ರಯತ್ನ ಎನ್ನುತ್ತಾ ಆರಂಭಿಸಿದರು ಸಂಕಥನ ಎನ್ನುವ ರಂಗ ಓದನ್ನು ಮಂದಾರ ಕಲಾವಿದರು ಈ ಸಂಜೆ ಕುಂದಾಪುರ ಜೇಸಿ ಭವನದಲ್ಲಿ.ಪುಟ್ಟ, ಪುಟ್ಟ ಒಂದೈದು ಕತೆ-ಲೇಖನ-ಕವಿತೆಗಳ ಎಳೆಗಳನ್ನು ಬಿಡಿಬಿಡಿಯಾಗಿ ರೋಹಿತ್ ಬೈಕಾಡಿ ವಿನ್ಯಾಸಗೊಳಿಸಿದ್ದರು. ವಿಶಿಷ್ಟ ತೀರ್ಪು ಇದರಲ್ಲಿ ಬ್ರೆಡ್ ಮತ್ತು ಜಾಮ್ ಕದ್ದ ಕಾರಣಕ್ಕಾಗಿ ಹದಿನೈದರ ಹುಡುಗನೊಬ್ಬನನ್ನು ಕಟಕಟೆಯಲ್ಲಿ ಪ್ರಶ್ನಿಸಲಾಗುತ್ತದೆ. […]
ನೆನಪಾಗುವೆ ಮತ್ತದೆ ಸಂಜೆಯಲಿ
ಕಾಡುತಿದೆ ಮನ ನಿನ್ನ ಮಮತೆಯ ಸ್ಪರ್ಷವನುಬಯಸುತಿದೆ ಒಡಲು ನಿನ್ನ ಆ ಕೖೆ ತುತ್ತನುಕಣ್ಗಳರಸುತಿವೆ ನಿನ್ನ ಬೆಲೆಬರಿತ ಇರುವಿಕೆಯನುನೆನಪಾಗುತಿದೆ ನೀನು ಮತ್ತೆ ಮತ್ತೆ ಬೖೆಯ್ದ ಬಯ್ಗುಳ, ಬಾಯ್ತುಂಬ ಕರೆಯುತಿದೆಹೊಡೆದ ಕೖೆಗಳು, ಕೖೆ ಮುಗಿದ ಬೇಡುತಿದೆಹರಿದ ಸೀರೆಯನ ನಿನುಟ್ಟು, ಶುಭ್ರ ಅಂಗಿಯ ನನಗ್ಹಾಕಿನನ್ನ ಮೊಗದಿ ನಗು ಕಂಡು ನಕ್ಕಿದ್ದೆ ನೀನು ನೆನಪಾಗುವೆ ನೀನು ಮತ್ತೆ ಮತ್ತೆನೀನೂಣಿಸಿದ ನಿನ್ನ ಆ ಕೈಗಳುನೀ ತೊರಿಸಿದ ಆ ನೀಲಿ ಪಕ್ಷಿಗಳುತಿಳಿಯ ಬಾನಲಿ ಸ್ವಾಗತಿಸಿದ ಬಣ್ಣಗಳುನೆನಪಾಗುವೆ ನೀನು ಮತ್ತದೆ […]
ಕಪ್ಪುಸೀರೆಯ ಅಜ್ಜಿ
ಈ ಸ್ವಾರ್ಥ ಪ್ರಪಂಚದಲ್ಲಿ ಇಂತಹ ನಿಸ್ವಾರ್ಥಿ ಅಜ್ಜಿಯಿಂದ ನಾವು ಕಲಿಯುವುದು ತುಂಬಾ ಇದೆ…
ಯಾಕೋ ಈ ಕಪ್ಪು ಸೀರೆಯ ಅಜ್ಜಿ ದಿ ಗ್ರೇಟ್ ಲೇಡಿ ಅನ್ಸಬಿಟ್ರು..
ಪರಿ’ಸುದ್ಧ’ ಕನ್ನಡಿಗರಿಗೆ…!
ಅಕ್ಕಾ ಹೇಳೇ ಟೈಮ್ ಆಯಿತು ಆಫೀಸ್ಗೆ ಓಗಲ್ವಾ… ನನ್ ತಂಗಿ ಅನ್ನಿಸಿಕೊಂಡಿರೋ ಸುಧ್ಧ ಕನ್ನಡತಿ ಬೆಳಿಗ್ಗೆ ಬೆಳಿಗ್ಗೇನೇ ನನ್ನ ಜೀವದ ಭಾಷೆಯನ್ನು ಹೀಗೆ ಕೊಲೆ ಮಾಡ್ತಾ ಇದ್ರೆ ಅವಳನ್ನು ಸಾಯಿಸಿಬಿಡೋಣ ಅನ್ನೋವಷ್ಟು ಕೋಪ ಬರುತ್ತೆ ನನಗೆ. ಆದರೂ ಸುಧಾರಿಸಿಕೊಂಡು ಅದು ಹೇಳೇ ಅಲ್ವೇ ಏಳೇ ಅಂತ ಹೇಳೇ ಮಾರಾಯ್ತಿ, ಆಫೀಸ್ಗೆ ಓಗೋದಲ್ಲಾ ಹೋಗೋದು ಅಂತ ಅವಳ ಭಾಷೆ ತಿದ್ದಿ ನನ್ನ ಪಾಡಿಗೆ ನಾನು ನೆಮ್ಮದಿಯಾಗಿ ಇರೋ ಕೆಲಸ ಮುಗಿಸಿಕೊಂಡು ಹೊರಡೋಣ […]