ಕವಿಸಂಚಾರ ಹೊರಟಿದೆ ಕಾಣದೂರಿಗೆ ನೆನಪ ಮೈಲಿಗಲ್ಲುಗಳ ಜೊತೆಗೆ; ಹರ್ಷೊಲ್ಲಾಸದ ಗಡಿ ಹುಡುಕಿ ನಡಿಗೆ… ನಡೆದಷ್ಟೂ ನಡೆಸುವ ಪಥಕೆ ಹೆಜ್ಜೆಗಳು ಮುನ್ನುಡಿ ಬರೆದಿವೆ,, ಗೀಚಿದಷ್ಟೂ ಜಿನುಗುವ ಭವಕೆಪುಟಗಳು ಸೋಲನೊಪ್ಪಿ ತಿರುಗಿವೆ ..ಅಕ್ಷರವೆಲ್ಲಾ ಮಾಸಿ ಮರೆಯಾಗಿವೆ..!! ದಿಗಂತ ಕಡಲಿನ ನಡುವಿನಲ್ಲಿ ಅನಂತತೆಯ ಹಾಯಿದೋಣಿ…. ಸಾಗುತಿದೆ ನಿರ್ದಿಗಂತವಾಗಿ ಏರಿ ಕವಿಕಲ್ಪನೆಗಳನ್ನ ಅಲ್ಪತೆಗೆ ತೂರಿ!! ಅಲ್ಪಾನಂತತೆಯ ಕದನದಲಿ ಸಕಲತೆಯ ಕಿಡಿ ಉದ್ಭವಿಸಿಧಗಿಸಿತೇ ಧರೆಹೊತ್ತಿ ಜ್ವಾಲೆಯಲಿ?? ಸುಪ್ತ ಮನಸಿನ ಮಿತಿಮೀರಿ…..!! ಸವಿದಷ್ಟೂ ಸವೆಯುತಿದೆ ಜೀವನ ತುಂಬಿದಷ್ಟೂ ಬತ್ತುತಿದೆ […]
Category: ಸಮಗ್ರ ಕನ್ನಡ
ಎಣಿಕೆ
ಒಂದು.. ಎರಡು… ಮೂರು…ನೂರಾ ಎಪ್ಪತ್ತೈದು…. ಅಲ್ಲಲ್ಲ…. ಎಪ್ಪತ್ತಾರು…ಛೇ.. ಲೆಕ್ಕ ತಪ್ಪಿತು…ಇರುಳಲ್ಲಿ ನಕ್ಷತ್ರಗಳನ್ನು ಎಣಿಸುತ್ತಿದ್ದೇನೆಮತ್ತೆ ಮತ್ತೆ ನನಗೆ ಲೆಕ್ಕತಪ್ಪುತ್ತಿದೆಬುಟ್ಟಿಯಲ್ಲಿದ್ದ ಮಲ್ಲಿಗೆ ಹೂಗಳು ಚೆಲ್ಲಿದಂತೆಬಾನಿನ ತುಂಬಾ ಹರಡಿ ಬಿದ್ದಿವೆಒಂದು ಕ್ರಮವೆಂಬುದೇ ಇಲ್ಲ, ಅಥವಾ ನನಗೆ ತಿಳಿದಿಲ್ಲಅದೆಷ್ಟೋ ದಿನಗಳಿಂದ ಲೆಕ್ಕಹಾಕುತ್ತಿದ್ದರೂ ಎಣಿಕೆ ತಪ್ಪಿಮೊದಲಿನಿಂದಲೇ ಶುರುಮಾಡುತ್ತಿದ್ದೇನೆಎಷ್ಟನೇ ಸಲ? ಅದರ ಲೆಕ್ಕವೂ ನನಗಿಲ್ಲಲೆಕ್ಕ ಹಾಕುತ್ತಿರುವುದಾದರೂ ಯಾಕೆ?ನನಗೂ ತಿಳಿದಿಲ್ಲ. ಆದರೂ ಬೇಕು, ಎಣಿಸಲೇ ಬೇಕುಕಪ್ಪನೆ ಮೋಡದೊಳಗೆ ಅವಿತುಕುಳಿತ ನಕ್ಷತ್ರಗಳನ್ನೂಹೊರಗೆಳೆದು ತೊಳೆದು ಎಣಿಸಬೇಕುಎಂದಾದರೊಂದು ದಿನ ನನಗೆ ಪಕ್ಕಾ ಲೆಕ್ಕ ಸಿಕ್ಕೀತು […]
ಮಾನವೀಯ ಮೌಲ್ಯಗಳ ಸರದಾರರು ”Humanity”ಸಂಸ್ಥೆಯ ಸದ್ಗುಣ ಸಮಾಜ ಸೇವಾ ಯುವಕರು
ಸಮಾಜ ಸೇವೆ ಮಾಡುವಾಗ ಜಾತಿ-ಧರ್ಮವನ್ನು ನೋಡದೆ ಪ್ರತಿಯೊಬ್ಬರ ಏಳಿಗೆಗಾಗಿ ಶ್ರಮಿಸಿದರೆ ಸಮಾಜದಲ್ಲಿ ಸೌಹಾರ್ಧತೆ ಮತ್ತು ಮನುಷ್ಯನ ಮಾನವೀಯತೆಯ ದರ್ಶನವಾಗುತ್ತದೆ.ಒಬ್ಬ ವ್ಯಕ್ತಿ ಅಥವಾ ಸಮಾಜ ಸೇವಾ ಸಂಸ್ಥೆ ತನ್ನನ್ನು ಸೇವಾ ಕೈಂಕರ್ಯದಲ್ಲಿ ತೊಡಗಿಸಿಕೊಳ್ಳುವಾಗ ಮಾನವೀಯ ಮೌಲ್ಯಗಳನ್ನು ಹೊಂದಬೇಕಾಗಿರುವುದು ಅತ್ಯವಶ್ಯಕ. ಈ ಸಮಾಜದಲ್ಲಿ ಬದುಕುತ್ತಿರುವ ಪ್ರತಿಯೊಬ್ಬ ವ್ಯಕ್ತಿ ತನಗೆ ಗೌರವದಿಂದ ಬದುಕಲು ಅವಕಾಶ ಮಾಡಿ ಕೊಟ್ಟ ಸಮಾಜಕ್ಕೆ ಋಣಿಯಾಗಿರುವುದರ ಜೊತೆಗೆ ತಮ್ಮಿಂದ ಸಮಾಜಕ್ಕೆ ಏನಾದರೂ ಸೇವೆ ನೀಡಬೇಕೆಂಬ ಒಂದಿಷ್ಟು ಸೇವಾ ಮನಸ್ಸುಗಳು ಕಾತುರದಿಂದಿರುತ್ತದೆ. ಅಂತ […]
ನಾನು ಮತ್ತು ನನ್ನ ಫಸ್ಟ್ ಬ್ಯಾಚ್ ಸ್ಟೂಡೆಂಟ್ಸ್
ತಾಯಿ ಮಡಿಲಿನಲ್ಲಿ ಹಸುಗೂಸು ಕಣ್ತೆರೆದರೂ, ಒಳಗಣ್ಣು ತೆರೆಯುವುದು ಗುರುವಿನ ಸಮಕ್ಷಮದಲ್ಲಿ. ಶಿಕ್ಷಕ ವೃತ್ತಿ ಶ್ರೇಷ್ಠ ವೃತ್ತಿ, ಉತ್ತಮ ಸಮಾಜದ ನಿರ್ಮಾಣದಲ್ಲಿ ಶಿಕ್ಷಕರ ಮಹತ್ವವನ್ನರಿತು ಶಿಕ್ಷಕಿಯಾಗಬೇಕೆಂಬ ಹಂಬಲದಿಂದ ಶಿಕ್ಷಣವನ್ನು ಮುಗಿಸಿ ಶಿಕ್ಷಕರ ವ್ರತ್ತಿಗೆ ಕಾಲಿಟ್ಟಾಗ ಕಾಲೇಜಿನ ಮೊದಲನೇ ದಿನದ ಅನುಭವ ಒಂಥರಾ ಚೆಂದ. ಮನಸ್ಸಲ್ಲಿ ಒಂಥರಾ ಖುಷಿ, ಒಂದಿಷ್ಟು ಭಯ, ಒಂದಿಷ್ಟು ಗೊಂದಲಗಳ ಗೂಡಾಗಿತ್ತು. ಪ್ರತಿಯೊಬ್ಬ ಶಿಕ್ಷಕರಿಗೂ ತಮ್ಮ ಮೊದಲ ಬ್ಯಾಚ್ ಸ್ಟೂಡೆಂಟ್ ಗಳ ನೆನಪು ಅಮರ. ಏಕೆಂದರೆ ಶಿಕ್ಷಕ ವೃತ್ತಿಯ […]
ಬದುಕು ನೀಡಿದ ದೇವರು
ಬದುಕಿನ ಪಯಣದಲ್ಲಿ ತಾಯಿಯಷ್ಟೇ ತಂದೆ ಎನ್ನುವ ದೇವರ ಮಾರ್ಗದರ್ಶನ ಅತ್ಯವಶ್ಯಕ. ನನ್ನ ಜೀವನದ ಯಶಸ್ಸಿನ ಹಾದಿ ನನ್ನ ತಂದೆ. ಅಪ್ಪ ನಡೆದ ದಾರಿ,ಅಪ್ಪನ ಅನುಭವದ ಬದುಕು,ಸ್ವಾಭಿಮಾನ ಶಿಸ್ತಿನ ಜೀವನ ನಡೆಸಿ ಕಷ್ಟದ ಬದುಕ ಸರಿದೂಗಿಸಲು ಪಟ್ಟಿರುವ ಪಣ ನನ್ನ ಬದುಕಿನ ಬಹು ದೊಡ್ಡ ಪಾಠ. ಅಪ್ಪನ ಕಷ್ಟದ ಜೀವನವೇ ನನಗೆ ಶಿಸ್ತಿನ ಪಾಠವನ್ನು ಕಲಿಸಿದೆ ಎಂದರೆ ಅತಶಯೋಕ್ತಿಯಾಗದು.ಅಪ್ಪನ ನೇರ ನುಡಿ,ಸರಳ ಸ್ವಭಾವದ ವ್ಯಕ್ತಿತ್ವ, ತಿದ್ದಿ ಹೇಳುವ ಪರಿಯು ನನ್ನ ಸಾಧನೆಗೆಸ್ಪೂರ್ತಿಯಾಗಿದೆ. […]
ಮರೆಯಲಾಗದ ಕಾಲೇಜು ನೆನಪು….
ನೆನಪುಗಳ ಮಾತು ಮಧುರ ಎಂಬ ಮಾತು ಎಷ್ಟು ಅರ್ಥಪೂರ್ಣವಾಗಿದೆ ಅಲ್ವ?.. ನನ್ನ ಜೀವನದಲ್ಲಿ ನನಗೆ ಅಚ್ಚೆಳೆದು ಉಳಿದ ನೆನಪು ಎಂದರೆ ಅದು ನನ್ನ ಕಾಲೇಜು ದಿನದ ನೆನಪುಗಳು. ಆ ದಿನವನ್ನೆಲ್ಲಾ ಮತ್ತೇ ನೆನಪಿಸಿಕೊಂಡರೆ ಕಣ್ಣಿನಂಚಿನಲ್ಲಿ ಕಂಬನಿ ಮೂಡುತ್ತದೆ. ಪಿಯುಸಿ ಮುಗಿದಿತ್ತು. ಮುಂದೇನು ಎಂಬ ಪ್ರಶ್ನೆ? ಮನೆಯವರ ಆಸೆ ಈಡೇರಿಸಲಾ? ಅಕ್ಕಪಕ್ಕದ ಮನೆಯವರ ಆಸೆ ಈಡೇರಿಸಲಾ ? ನನ್ನ ಆಸೆ ಈಡೇರಿಸಿಕೊಳ್ಳಲಾ? ಎಂಬ ಗೊಂದಲ.. ಅದೇನೇ ಆಗಲಿ ಎಂದು ಒಂದೆರಡು ಕಾಲೇಜಿನ […]
ಸಂಗೀತ
ನದಿಯ ಮೇಲೆ ತೇಲುವ ನಾವೆಯ ಗಾನಕೆಹರಿವ ನೀರಿನ ನಾದವಿಲ್ಲಿ ಹಿನ್ನಲೆ ಸಂಗೀತಅಂಬಿಗನೀಗ ಮೈಮರೆತಿದ್ದಾನೆಆ ಶಿಖರದ ಮೈಸವರಿ ಸಾಗುತ್ತಿದೆ ತಂಗಾಳಿಕುಣಿವ ಸಸ್ಯಶ್ಯಾಮಲೆಯ ನೋಡುತ್ತಲೀಗನನ್ನೂರು ಹಾಗೇ ಮೈಮರೆತಿದೆಗದ್ದೆಯೊಳಗಿನ ರೈತನ ಹಾಡನ್ನು ಪೈರುಗಳು ಆಲಿಸಿವೆಅವನ ಪ್ರತಿಹೆಜ್ಜೆಗಳೂ ನಾಟ್ಯದಂತೆಯೇಧರಿತ್ರಿಗೂ ಏನೋ ರೋಮಾಂಚನವಾಗುತ್ತಿದೆಪತಂಗಗಳೂ ಜೇನ್ನೊಳಗಳೂ ಹುಡುಕಾಡಿವೆ ಮಧುವಿಗಾಗಿಹೂವೊಂದು ಸುಖಿಸುತ್ತಿರಲೀಗ ಗೋವಿನ ಕೊರಳ ಗಂಟೆಗಳುಹಿಮ್ಮೇಳ ನುಡಿಸುತ್ತೀವೆಮೂಡಣದಲ್ಲೀಗ ನೇಸರನಾಗಮನದ ಸಮಯಪಕ್ಷಿಗಳೀಗ ಆಲಾಪನೆ ಶುರುಹಚ್ಚಿಕೊಂಡಿವೆಮರದೆಲೆಗಳಿಂದ ಬೀಳುವ ಮುತ್ತಿನ ಹನಿಗಳೂ ಏನೋವಿಶೇಷ ಪರಿಣಾಮವನ್ನುಂಟುಮಾಡಿವೆ ಸಂಗೀತಕ್ಕೆನಡುವಲ್ಲಿ ಕೊಡವ ಹೊತ್ತು ಸಾಗಿದ ನೀರೆಯದ್ದೊಂದು ಕಾವ್ಯಹಟ್ಟಿಯನ್ನು ಬಿಟ್ಟ […]
ಭಾರತೀಯ ಸಿನಿಮಾ ರಂಗಕ್ಕೆ ನಾಯಕ ನಟನಾಗಿ ಪಾದಾರ್ಪಣೆಗೈಯಲ್ಲಿರುವ ಕುಂದಾಪುರದ ಯುವ ಪ್ರತಿಭೆ ಸಿ. ಸಿ. ರಾವ್
ಕುಂದಾಪುರ ತಾಲೂಕು ಸಿದ್ಧಾಪುರ ಎಂಬ ಗ್ರಾಮದ ಖಾಸಗಿ ಬಸ್ ಚಾಲಕರಾಗಿ ಕೆಲಸ ನಿರ್ವಹಿಸುತ್ತಿರುವ ಚಂದ್ರಶೇಖರ ಭಟ್ ಹಾಗೂ ಸತ್ಯವತಿ ದಂಪತಿಯ ಮಗನಾದ ಚೇತನ್ ಚಂದ್ರಶೇಖರ ರಾವ್ ಯಾನೆ ಸಿ.ಸಿ ರಾವ್ ರವರು ಬಾಲ್ಯದಲ್ಲಿ ತಂದೆ-ತಾಯಿಯ ಪ್ರೀತಿ ಮತ್ತು ಸ್ನೇಹದೊಂದಿಗೆ ಬೆಳೆದರು. ಕುಂದಾಪುರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಡಾ.ಬಿ.ಬಿ.ಹೆಗ್ಡೆ ಕಾಲೇಜಿನಲ್ಲಿ ಪದವಿ ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆ ತಾನು ಬದುಕಿನಲ್ಲಿ ಏನಾದರು ಸಾಧಿಸಬೇಕು ಎನ್ನುವ ಛಲದೊಂದಿಗೆ ಕನ್ನಡ ಚಿತ್ರರಂಗದಲ್ಲಿ ತನ್ನದೇ ಛಾಪನ್ನು ಮೂಡಿಸಬೇಕೆಂದು ಹುಟ್ಟೂರ […]