ಬೆಂಕಿಯನ್ನು ಮನೆಯೊಳಗೆ ಚಿಕ್ಕದಾಗಿ ಹಚ್ಚಿಟ್ಟರೆ ದೀಪವಾಗಿ ಮನೆ ಬೆಳಗುತ್ತದೆ. ಅದೇ ಮನೆಗೆ ಹಚ್ಚಿದರೆ ಮನೆಯನ್ನೇ ಸುಟ್ಟು ನಾಶ ಮಾಡುತ್ತದೆ. ಇಡೀ ಜಗತ್ತನ್ನೇ ತನ್ನತ್ತ ಸೆಳೆಯುತ್ತ ,ವಿಷಯ ,ವಿಚಾರ ಹಾಗೂ ಭಾವನೆಗಳನ್ನು ಒಬ್ಬರಿಂದ ಇನ್ನೊಬ್ಬರಿಗೆ ಬಹುಬೇಗನೆ ತಲುಪಿಸುವ ಉದ್ದೇಶದಿಂದ ಹುಟ್ಟಿಕೊಂಡ ಫೇಸ್ ಬುಕ್ ಹಾಗೂ ಇತರ ಸೋಶಿಯಲ್ ಮೀಡಿಯಾಗಳು ಇಂದು ಇಡೀ ಜಗತ್ತನ್ನೇ ಆವರಿಸಿದೆ. ಆದರೆ ಈ ಸೋಶಿಯಲ್ ಮೀಡಿಯಾಗಳನ್ನು ನಾವು ದೀಪದಂತೆ ನಾವು ಆರೋಗ್ಯಕರವಾಗಿ ಬಳಸುವುದು ಉತ್ತಮ. ಇಲ್ಲವಾದರೆ ಇದು […]
Category: ಸಮಗ್ರ ಕನ್ನಡ
ಕುಡಿ – ನುಡಿ
ಎಲ್ಲಾ ಹೆಂಗಳೆಯರು ನನ್ನನ್ನು ಮೆಚ್ಚಿದ್ದೆ, ಮೆಚ್ಚಿದ್ದು ನಾ ಅವರಿಗೆ ಅಣ್ಣಾ ನಂತೆ…..ಅದಕ್ಕೆ ಕಾರಣ ಕೇಳಿದರೆ …..ನಾ ಕುಡಿಯುದಿಲ್ಲವಂತೆ…….!!! ✍️ಈಶ್ವರ ಸಿ ನಾವುಂದ.
ಬಕ್ರೀದ್ ಹಬ್ಬದ ಆಚರಣೆಯ ಹಿನ್ನೆಲೆ
ಮುಸ್ಲಿಂ ಸಮುದಾಯ ಆಚರಿಸುವ ಹಬ್ಬಗಳಲ್ಲಿ ರಂಜಾನ್ ಮತ್ತು ಬಕ್ರೀದ್ ಪ್ರಮುಖವಾದುದು. ರಂಜಾನ್, ಮುಸ್ಲಿಂ ಸಮುದಾಯ ತಮ್ಮ ಬದುಕಿನಲ್ಲಿ ಅನುಸರಿಸಬೇಕಾದ 5 ಪ್ರಮುಖ ತತ್ವಗಳಲ್ಲಿ ಒಂದಾದರೆ, ಬಕ್ರೀದ್ ತ್ಯಾಗದ ಪ್ರತೀಕವಾಗಿ ಆಚರಿಸಲಾಗುತ್ತದೆ. ಬಕ್ರೀದ್ ನ್ನು ಈದ್-ಉಲ್-ಅದಾ ಎಂದು ಸಹ ಕರೆಯುತ್ತಾರೆ. ಈದ್-ಉಲ್-ಅದಾ(ಬಕ್ರೀದ್) ಇದರ ಹಿಂದೆ ಒಂದು ರೋಚಕ ಇತಿಹಾಸವೇ ಇದೆ. ಇಸ್ಲಾಂ ಧರ್ಮದ ಪ್ರಕಾರ ಅಲ್ಲಾಹು ಯಾರನ್ನು ಹೆಚ್ಚು ಪ್ರೀತಿಸುತ್ತಾನೋ ಅಂತಹ ವ್ಯಕ್ತಿಗಳಿಗೆ ಕಷ್ಟ ಕೊಟ್ಟು ಅವರ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಾನೆ […]
ಪುಟ್ಕತೆ – 1 : ನೀತಿ ಕಥೆ
ಮರ ದಿನಂಪ್ರತಿ ಮನೆಯೆದುರು ಹಕ್ಕಿಗಳ ಹಿಕ್ಕೆಯನ್ನು ಗುಡಿಸಿ ಸ್ವಚ್ಛಗೊಳಿಸುವ ಕೆಲಸ ಸಾಕಾಗಿಹೋಗಿತ್ತು. ಮನೆಯೆದುರು ತಾವರೆ ಕೊಳಕ್ಕೆ ಅರ್ಧ ಬುಟ್ಟಿಯಾಗುವಷ್ಟು ಒಣಗಿದ ಎಲೆಗಳೂ ಬೀಳುತ್ತಿದ್ದವು. ಮಳೆ ಬಂದು ನಿಂತರೂ ಮರದ ಎಳೆಗಳಿಂದ ಹನಿಗಳು ಬೀಳುತ್ತಿದ್ದವು. ಒಮ್ಮೊಮ್ಮೆ ಬೀಸುವ ಗಾಳಿಗೆ ಚಳಿಯೂ ವಿಪರೀತ. ಬೇಸರವಾಗಿ ಮರಕ್ಕೊಂದು ಗತಿ ಕಾಣಿಸಿದ. ಈಗ ದಿನವೂ ತಾವರೆ ಕೊಳಕ್ಕೆ ನೀರು ತುಂಬಿಸಬೇಕು. ಪಕ್ಷಿಗಳಿಗಾಗಿ ತಾರಸಿಯಲ್ಲಿ ಪಾತ್ರಗಳಲ್ಲಿ ನೀರಿಡುತ್ತಾನೆ. ಆದರೆ ಪಕ್ಷಿಗಳು ಸುಳಿಯುವುದೇ ಇಲ್ಲ! ಬೆವರಿದಾಗ ಚಳಿಯಾಗುತ್ತದೆ…! ಕಿಗ್ಗಾಲು […]
ಬದುಕು
ಹುಟ್ಟು ಸಾವಿನ ಮಧ್ಯದಲ್ಲಿಅಲ್ಪ ದಿನದ ಈ ಬದುಕಿನಲ್ಲಿಬಂದು ಹೋಗುವವರು ಹಲವರುಕೊನೆ ತನಕ ಉಳಿಯುವವರು ಕೆಲವರು ತಂದೆ ತಾಯಿಗೆ ತಕ್ಕ ಮಕ್ಕಳಾಗಿಗುರು ಹಿರಿಯರಿಗೆ ಗೌರವಿಸಿಸಮಾಜಕ್ಕೆ ಮಾದರಿಯಾಗಿಬದುಕ ಬೇಕೆನ್ನುವ ಬಯಕೆ ಬದುಕ ಪುಟಗಳು ನಮಗರಿವಿಲ್ಲದೇ ಸರಿಯುತಿದೆಕಾಲಚಕ್ರದ ಸುಳಿಯಲಿಬದುಕ ಪಯಣವ ನಿಲ್ಲಿಸಲು!ಹೆದರಬೇಕಿಲ್ಲ! ಅದು ಪ್ರಕ್ರತಿಯ ನಿಯಮ ಇರುವಷ್ಟು ದಿನ ಆಗ ಬಯಸುವ ವಿಶ್ವ ಮಾನವಎಲ್ಲರಿಗೂ ಹಂಚುವ ಪ್ರೀತಿ ಸ್ನೇಹವಸಾರ್ಥಕ ಜೀವನದ ನಿರೀಕ್ಷೆಯಲಿ ಪ್ರತಿ ಕ್ಷಣವಬನ್ನಿ, ಇರುವಷ್ಟು ದಿನ ಉತ್ಸಾಹದಿ ಬದುಕುವ .. ಎ ಎಸ್ […]
ಮಹಾನಗರ ಮತ್ತು ಅವನು
ಮಹಾನಗರದ ಬೀದಿಗಳಲ್ಲಿ ನಡೆಯುತ್ತಿದ್ದಾನೆಬಟ್ಟೆಯಂಗಡಿಯ ಮುಂದೆ ಬೊಂಬೆಗಳ ಮೈತುಂಬವಿಧವಿಧವಾದ ಬಟ್ಟೆಗಳುಹೋಟೆಲಿನೆದುರಲ್ಲಿ ಬಗೆಬಗೆಯ ತಿಂಡಿಯ ಚಿತ್ರಗಳುಇಂದ್ರನ ರಥವನ್ನೂ ಮೀರಿಸುವ ಹೊಸಬಗೆಯ ಕಾರುಗಳುಹೊಸ ಫ್ಯಾಷನ್ನಿನ ಹರಿದ ಜೀನ್ಸ್ ತೊಟ್ಟ ಯುವಪಡೆಮಾಲುಗಳ ಮುಂದೆ ಬೆಳಗುವ ಬಣ್ಣಬಣ್ಣದ ಲೈಟುಗಳೆದುರುಚಂದ್ರನ ಬೆಳದಿಂಗಳು ಯಾವ ಲೆಕ್ಕ?ನಟನ ಅರವತ್ತಡಿ ಎತ್ತರದ ಕಟೌಟಿನ ಮುಂದೆ ಅವನು ಕುಬ್ಜ ಮಾಲ್ ನೆದುರಿನ ಸುಸಜ್ಜಿತ ಬಸ್ ಸ್ಟಾಪ್ ನಲ್ಲಿ…ನಗರ ಸಾರಿಗೆ ಬಸ್ ಗಾಗಿ ಕಾದುಹೆಚ್ಚೂ ಕಡಿಮೆ ಕೊಳಗೇರಿಯಂತಿರುವ ಪ್ರದೇಶದತಗಡಿನ ಮಾಡಿನ ಶೆಡ್ ಸೇರುತ್ತಾನೆತೇಪೆ ಹಚ್ಚಿದ ಜೀನ್ಸ್ […]
ನಿದ್ದೆ ಬಾರದ ರಾತ್ರಿ
ಮಗ್ಗಲು ಬದಲಿಸಲು ರಾತ್ರಿಗಳೆಷ್ಟುಘೋರ ರಾತ್ರಿಯಲ್ಲಿ ಬೆಳದಿಂಗಳ ಹುಡುಕುವ ಬಯಕೆ!ಒಳಗೆ ಹೇಳಲಾಗದ ಚಡಪಡಿಕೆಹೊರಗೆ ಘನ ಘೋರ ಮಳೆನಿದ್ದೆ ಹತ್ತಿರ ಸುಳಿಯುತ್ತಿಲ್ಲ …ಅದೇನೋ ಯಾತನೆ….. ಕಠೋರ ವರ್ತನೆ ಹೇಳಬೇಕಾದುದು ಹೇಳಲಾಗುತ್ತಿಲ್ಲಅನುಭವಿಸಬೇಕಾದುದು.. ಅನುಭವಿಸಲಾಗುತ್ತಿಲ್ಲನನ್ನ ಬಣ್ಣ ಮಾಸಿದ ಬದುಕಿನ ಬಗ್ಗೆ ಏನಾದರೂ ಹೇಳಲೇ ಬೇಕಿತ್ತುಕಪ್ಪು ಮಸಿ ಹಚ್ಚಿದ ವಿಧಿ ಬರಹದ ಪರಿಯು ಹೇಳಬೇಕಿತ್ತುನಿದ್ದೆಗೂ ಹೊಟ್ಟೆಕಿಚ್ಚು …ಯಾಕೆ ಗೊತ್ತಾ ನಿದ್ದೆ ಬಂದರೆ ನೀನು ಕನಸಲ್ಲಿ ಬಂದು ಬಿಡ್ತೆಯಾಲ್ಲಾ….!?
ನೀನ್ಯಾರು?
ನೀನು ನನ್ನ ದೀಪವಾ …?ಇಲ್ಲ ಬಾಳಿನ ಬೆಳಕೆ…?ದೀಪ ಕಡಿಮೆ ಮಾತನಾಡುತ್ತದೆ.ಬೆಳಕು ಜಗಜಗಿಸುತ್ತದೆ…ದೀಪದ ಕೆಳಗಿನ ಕತ್ತಲು ನಾನಗಲಾರೆ.ಬೆಳಕಿನ ಆರತಿ ನಿನಾಗಿರುವೆ..ಕುಣಿಯೆಲಾರೆನು ನಾ.ನೆಲ ಅಂಕು ಡೊಂಕು..ಹೇಳಲಾರೆನು ನಾ ಈ ಜಗವೇ ಅಂಕು ಕೊಂಕು..ಗಾಳಿ, ದೀಪ, ಎರಡೂ ನೀನೆ.ಆರದಿರಲಿ ನನ್ನ ನಿನ್ನ ದೀಪ… ರಾಘವೇಂದ್ರ ಹಾರ್ಮಣ್, ಇಡೂರು ಕುಂಜ್ಞಾಡಿ
ಗಾಳ, ಮೀನು ಮತ್ತು ನಾನು
ಗಾಳದ ತುದಿಗೆಎರೆಹುಳವನ್ನು ಸಿಕ್ಕಿಸಿಇನ್ನೊಂದು ತುದಿಗೆ ಉದ್ದ ಹಗ್ಗವನ್ನು ಕಟ್ಟಿಹೊಳೆಗೆಸೆದು, ಹರಿವ ತಂಪಾದ ನೀರಲ್ಲಿಕಾಲಿಳಿಸಿ ಕುಳಿತಿದ್ದೇನೆಯಾವುದೋ ಹೆಸರಿನ ಮೀನೊಂದುಎರೆಹುಳಕ್ಕೆ ಬಲಿಯಾದ ತಕ್ಷಣಮೇಲಕ್ಕೆಳೆದುಕೊಳ್ಳಬೇಕು ಆದರೇನು?ನನ್ನ ಪಾದಗಳಿಗೆ ಕಚಗುಳಿ ಇಟ್ಟುನೀರಿನಾಳಕ್ಕೆ ಜಾರಿಬಿಡುವ ಮೀನುಗಾಳದ ಹತ್ತಿರವೂ ಸುಳಿಯುತ್ತಿಲ್ಲ ಆ ಕ್ಷಣಕ್ಕೆ ಒಂದು ಆಲೋಚನೆ!ಮೇಲಿನವನೂ ಇಳಿಬಿಟ್ಟರಬಹುದಲ್ಲನನಗೂ ಯಾವುದಾದರೊಂದು ಗಾಳವನ್ನುಒಂದಲ್ಲದಿದ್ದರೆ ಹತ್ತಾರು ಗಾಳಗಳನ್ನುಇಲ್ಲವಾದರೆ ಬಲೆಯನ್ನೇ ಬೀಸಿರಬಹುದಲ್ಲವೇ?ಮೂರ್ಖ ಸಿಕ್ಕಿಹಾಕಿಕೊಳ್ಳಲಿಯೆಂದು? ಬಹುಶಃ ನದಿಯೂ ಬಲೆ ಇರಬಹುದುಪುಟ್ಟ ಮೀನೊಂದು ಪಾಶವಿರಬಹುದುಮೀನಿನ ಬದಲು ಮೊಸಳೆಯೇ ಬರಬಹುದು ಹಣೆಯ ಮೇಲೆ ಬೆವರಿನ ಹನಿಗಳುಪಕ್ಕನೆ ಗಾಳವನ್ನು ಮೇಲೆಳೆದು […]










